ಸೇನೆ ಗುಂಡಿಗೆ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

killed

ರಾಂಚಿ, ಸೆ.12-ಬಿಹಾರ ಮತ್ತು ಜಾರ್ಖಂಡ್ ರಾಜ್ಯದ ಭದ್ರತಾಪಡೆಗಳಿಗೆ ತಲೆನೋವಾಗಿದ್ದ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ಅಶೀಶ್ ಯಾದವ್‍ನನ್ನು ನಿನ್ನೆ ಸಂಜೆ ಜಾಖಂರ್ಡ್‍ನ ಗುಮ್ಲಾ ಅರಣ್ಯಪ್ರದೇಶದಲ್ಲಿ ಯೋಧನರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಈ ಎರಡೂ ರಾಜ್ಯಗಳಲ್ಲಿ ಭದ್ರತಾ ಪಡೆಗಳ ಮೇಲೆ ಹಲವಾರು ಭೀಕರ ದಾಳಿಗಳನ್ನು ನಡೆಸಿ ಸಾವು-ನೋವಿಗೆ ಕಾರಣನಾಗಿದ್ದ ಯಾದವ ತಲೆಗೆ 25 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.   ರಾಂಚಿ ಜಿಲ್ಲೆಯ ಬೊರದ್ಹಿ ಅರಣ್ಯಪ್ರದೇಶದಲ್ಲಿ ನಿನ್ನೆ ಸಂಜೆ ಸಿಆರ್‍ಪಿಎಫ್ ಮತ್ತು ರಾಜ್ಯ ಪೊಲೀಸರು ಜಂಟಿ ಕಾರ್ಯಚರಣೆ ನಡೆಸುತ್ತಿದ್ದರು. ಆಗ ಯಾದವ್ ಭದ್ರತಾಪಡೆ ಮೇಲೆ ಗುಂಡಿನ ದಾಳಿ ನಡೆಸಿದ. ಈ ಸಂದರ್ಭದಲ್ಲಿ ನಡೆದ ಚಕಮಕಿಯಲ್ಲಿ ಯಾದವ್ ಹತನಾದೆ.

ಈತ ಬಿಹಾರ್-ಜಾರ್ಖಂಡ್ ವಿಶೇಷ ಪ್ರದೇಶ ಸಮಿತಿ (ಬಿಜೆ-ಎಸ್‍ಎಸಿ) ಸದಸ್ಯನಾಗಿದ್ದು ಮಾವೋವಾದಿ ನಕ್ಸಲ್ ಬಣದ ನಾಯಕನೂ ಆಗಿದ್ದ. ಈ ಕಾರ್ಯಾಚರಣೆ ನಂತರ ಭದ್ರತಾ ಪಡೆಗಳು ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin