ಇಸ್ರೇಲ್’ನ 2 ವಿಮಾನಗಳನ್ನು ಹೊಡೆದುರುಳಿಸಿದ ಸಿರಿಯಾ

ಈ ಸುದ್ದಿಯನ್ನು ಶೇರ್ ಮಾಡಿ

Planes

ಬೈರುತ್, ಸೆ.13-ಅಮೆರಿಕ ಮತ್ತು ರಷ್ಯಾ ಕದನ ವಿರಾಮ ಉಲ್ಲಂಘಿಸಿ ಸಿರಿಯಾ ಮೇಲೆ ವಾಯುದಾಳಿ ನಡೆಸಿ 100ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿದ ಬೆನ್ನಲ್ಲೇ, ಇಸ್ರೇಲ್ನ ಸೇನೆಯ ಎರಡು ವಿಮಾನಗಳನ್ನು ಹೊಡೆದು ಉರುಳಿಸಿರುವುದಾಗಿ ಸಿರಿಯಾ ಹೇಳಿದೆ. ಇಸ್ರೇಲ್ಗೆ ಸೇರಿದ ಒಂದು ಸಮರ ವಿಮಾನ ಮತ್ತು ಡ್ರೋಣ್ನನ್ನು ಇಸ್ರೇಲ್ ನಿಯಂತ್ರಣವಿರುವ ಗೋಲಾನ್ ಹೈಟ್ಸ್ನಲ್ಲಿ ಹೊಡೆದು ಉರುಳಿಸಿರುವುದಾಗಿ ಸಿರಿಯಾ ಸೇನೆ ಹೇಳಿದೆ.  ಅದರೆ ಇದನ್ನು ನಿರಾಕರಿಸಿರುವ ಇಸ್ರೇಲ್, ಭೂಮಿಯಿಂದ ಗಗನಕ್ಕೆ ಚಿಮ್ಮುವ ಎರಡು ಕ್ಷಿಪಣಿಗಳು ಸಿರಿಯಾದಿಂದ ಹಾರಿ ಬಂದಿತ್ತು. ಆದರೆ ಇದರಿಂದ ತನ್ನ ಯುದ್ದ ವಿಮಾನ ಅಥವಾ ಡ್ರೋಣ್ಗೆ ಯಾವುದೇ ತೊಂದರೆಯಾಗಿಲ್ಲ ಎಂದು ಹೇಳಿಕೊಂಡಿದೆ.

► Follow us on –  Facebook / Twitter  / Google+

Facebook Comments

Sri Raghav

Admin