ಅಮೆರಿಕ ಅಟಾರ್ನಿಯಾಗಿ ಭಾರತೀಯ ಮಹಿಳೆ ನೇಮಕ

ಈ ಸುದ್ದಿಯನ್ನು ಶೇರ್ ಮಾಡಿ

Diane Gujarati

ವಾಷಿಂಗ್ಟನ್,ಸೆ.14– ನ್ಯೂಯಾರ್ಕ್‍ನ ಅಮೆರಿಕ ಜಿಲ್ಲಾ ನ್ಯಾಯಾಲಯದ ಪೀಠಕ್ಕೆ ಅಟಾರ್ನಿಯಾಗಿ ಭಾರತ ಮೂಲದ ಮಹಿಳೆ ಡಯಾನೆ ಗುಜರಾತಿ ಅವರನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ನೇಮಕ ಮಾಡಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. `ಯುನೈಟೆಡ್ ಸ್ಟೇಟ್ಸ್ ಡಿಸ್ಟ್ರಿಕ್ ಕೋರ್ಟ್ ಬೆಂಚ್‍ಗೆ ಅಟಾರ್ನಿಯಾಗಿ ಡಯಾನೆ ಗುಜರಾತಿ ಅವರನ್ನು ನೇಮಕ ಮಾಡಲು ನನಗೆ ಸಂತಸವಾಗುತ್ತದೆ. ತಮ್ಮ ಈ ಹುದ್ದೆಯೊಂದಿಗೆ ಅವರು ಅಮೆರಿಕ ಜನತೆಗೆ ಉತ್ತಮ ಸೇವೆ ಸಲ್ಲಿಸಲಿದ್ದಾರೆ ಎಂಬ ವಿಶ್ವಾಸ ನನಗಿದೆ’ ಎಂದು ಒಬಾಮ ನಿನ್ನೆ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ನ್ಯೂಯಾರ್ಕ್‍ನ ದಕ್ಷಿಣ ಜಿಲ್ಲೆಯಲ್ಲಿ 2012ರಿಂದ ಅಮೆರಿಕ ಅಟಾರ್ನಿ ಕಚೇರಿಯ ಅಪರಾಧ ನಿಯಂತ್ರಣ ವಿಭಾಗದ ಉಪಮುಖ್ಯಸ್ಥರಾಗಿ 47 ವರ್ಷದ ಗುಜರಾತಿ ಕಾರ್ಯ ನಿರ್ವಹಿಸುತ್ತಿದ್ದರು.

ಈಗ ಇವರು ನ್ಯೂಯಾರ್ಕ್‍ನ ಪೂರ್ವ ಜಿಲ್ಲೆಯ ನ್ಯಾಯಾಲಯಕ್ಕೆ ಫೆಡರಲ್ ಜಡ್ಜ್( ಒಕ್ಕೂಟ ನ್ಯಾಯಮೂರ್ತಿ) ಆಗಿ ಸೇವೆ ಸಲ್ಲಿಸಲಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin