ಎಂಬ್ರೆಯಿರ್ ವಿಮಾನ ಖರೀದಿ ಹಗರಣ : ಸಿಬಿಐ ತನಿಖೆಗೆ ಸರ್ಕಾರ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

Plamnan-a

ನವದೆಹಲಿ, ಸೆ. 14-ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಆಡಳಿತದಲ್ಲಿ 208 ದಶಲಕ್ಷ ಡಾಲರ್ ಎಂಬ್ರೆಯಿರ್ ವಿಮಾನ ಖರೀದಿ ವ್ಯವಹಾರದಲ್ಲಿ ನಡೆದಿದೆ ಎನ್ನಲಾದ ಲಂಚ ಹಗರಣದ ಬಗ್ಗೆ ತನಿಖೆ ನಡೆಸುವಂತೆ ರಕ್ಷಣಾ ಸಚಿವಾಲಯವು ಸಿಬಿಐಗೆ ಸೂಚನೆ ನೀಡಿದೆ. ಆರೋಪಗಳು ಗಂಭೀರ ಸ್ವರೂಪದ್ದಾಗಿರುವುದರಿಂದ ಸಿಬಿಐ ತನಿಖೆಗೆ ಸೂಚಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.   ಈ ಹಗರಣದಲ್ಲಿ ಯಾವುದೇ ಅಪರಾಧದ ಸುಳಿವು ಇದ್ದರೆ ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮೂರು ದಿನಗಳ ಹಿಂದೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದರು. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ 2008ರಲ್ಲಿ ಬ್ರೆಜಿಲ್ ವಿಮಾನ ತಯಾರಿಕಾ ಸಂಸ್ಥೆ ಎಂಬ್ರೆಯಿಲ್ ಮತ್ತು ಕೇಂದ್ರ ರಕ್ಷಣಾ ಸಚಿವಾಲಯದ ಡಿಆರ್‍ಡಿಒ ನಡುವೆ ವಿಮಾನಗಳ ಖರೀದಿಗಾಗಿ ವ್ಯವಹಾರ ಕುದುರಿಸಲು ಭಾರೀ ಲಂಚ ವಹಿವಾಟು ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.

► Follow us on –  Facebook / Twitter  / Google+

Facebook Comments

Sri Raghav

Admin