ಮದುವೆ ಮುರಿದ ‘ನಾಯಿ ಪ್ರೀತಿ’

ಈ ಸುದ್ದಿಯನ್ನು ಶೇರ್ ಮಾಡಿ

Marriage

ಬೆಂಗಳೂರು,ಸೆ.14-ಹುಡುಗ ಅಥವಾ ಹುಡುಗಿ ಚೆನ್ನಾಗಿಲ್ಲ, ಒಳ್ಳೆಯ ಉದ್ಯೋಗವಿಲ್ಲ, ಮನೆತನ ಸರಿಯಿಲ್ಲ ಎಂದು ನಾನಾ ಕಾರಣಗಳಿಂದ ಮದುವೆ ಸಂಬಂಧಗಳು ಮುರಿಬಿದ್ದಿರುವ ಘಟನೆಗಳು ನೋಡಿದ್ದೇವೆ, ಕೇಳಿದ್ದೇವೆ. ಆದರೆ ನಾಯಿಯನ್ನು ಇಷ್ಟಪಡದ ಹುಡುಗನೊಬ್ಬ ಪ್ರಾಣಿಪ್ರಿಯೆಯಾದ ಹುಡುಗಿಯನ್ನೇ ತಿರಸ್ಕರಿಸಿರುವ ಪ್ರಸಂಗವೊಂದು ನಡೆದಿದೆ. ನಾಯಿಗೂ ಮದುವೆಗೂ ಏನು ಸಂಬಂಧ ಎಂದು ಹೌಹಾರಬೇಡಿ ಕಾರಣ ಇಷ್ಟೇ. ಹುಡುಗಿಯು ಲೂಸಿ ಎಂಬ ನಾಯಿಯನ್ನು ಪ್ರೀತಿಯಿಂದ ಸಾಕಿದ್ದಾಳೆ. ಆದರೆ ಹುಡುಗ ಮದುವೆಯಾದರೆ ಲೂಸಿಯನ್ನು ತಮ್ಮ ಮನೆಗೆ ತರುವುದು ಬೇಡವೆಂದು ಖಡಖಂಡಿತವಾಗಿ ಹೇಳಿದ್ದನು. ಏಕೆಂದರೆ ತಮ್ಮ ತಾಯಿಯು ನಾಯಿಯನ್ನು ಇಷ್ಟಪಡುವುದಿಲ್ಲ. ನಮ್ಮಿಬ್ಬರ ನಡುವೆ ನಾಯಿ ಬರುವುದು ಬೇಡ ಎಂದಿದ್ದಾನೆ.

ಅದಕ್ಕೆ ಹುಡುಗಿಯೂ ನಾಯಿಯನ್ನು ಪ್ರೀತಿಯಿಂದ ಸಾಕಿದ್ದೇನೆ. ಅದನ್ನು ಬಿಟ್ಟಿರುವುದಕ್ಕೆ ಸಾಧ್ಯವಿಲ್ಲ ಎಂದು ಹುಡುಗನ ಮಾತನ್ನು ನಿರ್ಲಕ್ಷಿಸಿದ್ದಾಳೆ. ಇದಕ್ಕೆ ಕೋಪಗೊಂಡ ಹುಡುಗ ನಾಯಿಯನ್ನೇ ಮದುವೆಯಾಗು ಎಂದು ಹುಡುಗಿಗೆ ಹೇಳಿದ್ದಾನೆ. ಈ ಕುರಿತು ಹುಡುಗಿಯ ಗೆಳೆತಿಯರು ವಾಟ್ಸಫ್ ಚಾರ್ಟ್ ಸ್ಕ್ರೀನ್ ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಟ್ಟಿದ್ದು , ಈಗ ವೈರಲ್ ಆಗಿದೆ. ನನ್ನನ್ನು ಹಾಗೂ ನಾಯಿಯನ್ನು ಸಮಾನವಾಗಿ ಪ್ರೀತಿಸುವ ಹುಡುಗನ ಜೊತೆ ಭವಿಷ್ಯದಲ್ಲಿ ಮದುವೆಯಾಗುತ್ತೇನೆ ಎಂದು ಸ್ಪಷ್ಟಪಡಿಸಿದ್ದಾಳೆ. ಇಷ್ಟಕ್ಕೆ ಇಬ್ಬರಲ್ಲೂ ಮನಸ್ತಾಪವಾಗಿ ನಿಶ್ಚಯವಾಗಿದ್ದ ಮದುವೆ ಮುರಿದುಬಿದ್ದಿರುವುದು ವಿಪರ್ಯಾಸ ಸಂಗತಿ.

► Follow us on –  Facebook / Twitter  / Google+

Facebook Comments

Sri Raghav

Admin