ಶಾಲೆಯಲ್ಲಿ ನಗದು-ಆಹಾರಧಾನ್ಯ ಕಳವು

ಈ ಸುದ್ದಿಯನ್ನು ಶೇರ್ ಮಾಡಿ

robbery-6

ಬೆಳಗಾವಿ,ಸೆ.14-ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೀಗ ಒಡೆದು ಒಳನುಗ್ಗಿರುವ ಕಳ್ಳರು ನಾಲ್ಕು ಮೂಟೆ ಅಕ್ಕಿ, ಎರಡು ಮೂಟೆ ತೊಗರಿಬೇಳೆ ಹಾಗೂ ಪ್ರಾಂಶುಪಾಲರ ಕೊಠಡಿಯಲ್ಲಿದ್ದ 10 ಸಾವಿರ ನಗದು ದೋಚಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನಲ್ಲಿ ನಡೆದಿದೆ.  ಉಮರಾಣಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಬಿಸಿಯೂಟಕ್ಕಾಗಿ ಶೇಖರಿಸಲಾಗಿದ್ದ , ಆಹಾರ ಧಾನ್ಯಗಳನ್ನು ಕಳ್ಳರು ದೋಚಿರುವುದಕ್ಕೆ ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕಳೆದ ರಾತ್ರಿ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin