ಕಾವೇರಿ ಪ್ರತಿಭಟನೆ-ತಮಿಳುನಾಡಿನ 350 ಲಾರಿಗಳಿಗೆ ಜಿಲ್ಲಾ ಪೊಲೀಸ್‍ರಿಂದ ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

cauvery

ತುಮಕೂರು (ಕ.ವಾ.) ಸೆ.14- ಭಾನುವಾರ ರಾಜ್ಯದಾದ್ಯಂತ ಕಾವೇರಿ ನದಿನೀರು ಹಂಚಿಕೆ ವಿಚಾರವಾಗಿ ಕನ್ನಡಪರ ಸಂಘಟನೆಗಳು ಪ್ರತಿಭಟಿಸುತ್ತಾ ತಮಿಳುನಾಡಿನ ನೋಂದಣಿ ಲಾರಿ, ಬಸ್ಸು ಇತರೆ ಮೋಟಾರು ವಾಹನಗಳಿಗೆ ತೊಂದರೆ ಕೊಡುತ್ತಿದ್ದರೆ ತುಮಕೂರು ಜಿಲ್ಲಾ ಪೊಲೀಸ್ ಎಲ್ಲರಿಗೂ ಮಾದರಿಯಾಗುವಂತೆ ಉತ್ತಮ ಕಾರ್ಯ ನಿರ್ವಹಿಸಿ ಸುಮಾರು 350 ತಮಿಳುನಾಡಿನ ನೋಂದಣಿ ಹೊಂದಿದ್ದ ಲಾರಿಗಳಿಗೆ ಪೊಲೀಸ್ ರಕ್ಷಣೆ ನೀಡುವ ಮೂಲಕ ಮಾನವೀಯತೆ ತೋರಿ ಅವರಿಗೆ ಊಟೋಪಚಾರಕ್ಕೂ ಅನುಕೂಲ ಕಲ್ಪಿಸಿ ನಂತರ ಕ್ಷೇಮವಾಗಿ ಅವರ ಸ್ಥಳಗಳಿಗೆ ತೆರಳು ನೆರವು ನೀಡಿದ್ದಾರೆ.
ಅಂದು ಜಿಲ್ಲೆಯ ಕಳ್ಳಂಬೆಳ್ಳ ಸೇರಿದಂತೆ ವಿವಿಧೆಡೆಗಳಲ್ಲಿ ನಿಂತಿದ್ದ ತಮಿಳುನಾಡು ನೋಂದಣಿ ವಾಹನಗಳನ್ನು ವಿಶೇಷವಾಗಿ ಲಾರಿಗಳನ್ನು ರಕ್ಷಣಾ ದೃಷ್ಟಿಯಿಂದ ನಗರದ ಪೆರೆಡ್ ಮೈದಾನಕ್ಕೆ ಸೂಕ್ತ ಬಂದೋಬಸ್ತ್‍ನೊಂದಿಗೆ ಕರೆತಂದು ವಾಹನ ಚಾಲಕರು ಮತ್ತು ಸಿಬ್ಬಂದಿಗಳಿಗೆ ಅಂದು ರಾತ್ರಿ ಊಟ ತಯಾರಿಸಿಕೊಳ್ಳಲು ಅಗತ್ಯ ನೀರು ಇತ್ಯಾದಿಗಳನ್ನು ಪೂರೈಸುವ ಮೂಲಕ ಮಾನವೀಯತೆಯನ್ನು ತುಮಕೂರು ಜಿಲ್ಲಾ ಪೊಲೀಸರು ತೋರಿಸಿ ಅವರಿಗೆ ಹಾಗೂ ಅವರ ವಾಹನಗಳಿಗೆ ಕಿಂಚಿತ್ತು ತೊಂದರೆಯಾಗದಂತೆ ರಕ್ಷಣೆ ನೀಡುವ ಮೂಲಕ ಇತರೆಯವರಿಗೆ ಮಾದರಿಯಾಗಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin