ಜೂಜು ಅಡ್ಡೆ ಮೇಲೆ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

attack

ಚನ್ನಪಟ್ಟಣ, ಸೆ.15- ಜೂಜು ಅಡ್ಡೆ ಮೇಲೆ ದಾಳಿ ಮಾಡಿದ ಪೆÇಲೀಸರು ಪಣಕ್ಕಿಟ್ಟಿದ್ದ 4200ರೂ. ವಶಪಡಿಸಿಕೊಂಡು 8 ಮಂದಿಯನ್ನು ಬಂಧಿಸಿರುವ ಘಟನೆ ತಾಲೂಕಿನ ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಬಂಧಿತ ಜೂಜುಕೋರರನ್ನು ಸಿದ್ದೇಗೌಡ, ಶ್ರೀನಿವಾಸ್, ಸುರೇಶ್, ಲಿಂಗರಾಜು, ನಿಂಗರಾಜು, ರಾಜೇಗೌಡ, ಸುರೇಶ್, ವೀರೇಶ್ ಎಂದು ತಿಳಿದು ಬಂದಿದೆ.ಎವಿ ಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮದವರಾದ ಇವರು ಗ್ರಾಮದ ಹೊರವಲಯದ ಬಾಳೆತೋಟವೊಂದರಲ್ಲಿ ಜೂಜಟದಲ್ಲಿ ತೊಡಗಿದ್ದರು.ಖಚಿತ ಮಾಹಿತಿ ಪಡೆದ ಅಕ್ಕೂರು ಠಾಣೆಯ ಪಿಎಸ್‍ಐ ಸದಾನಂದ ಸಿಬ್ಬಂದಿಗಳಾದ ಪಾಂಡು, ಸುನೀಲ್, ರಾಜಪ್ಪ, ಕನಕರೆಡ್ಡಿ, ಗೃಹರಕ್ಷಕ ಸಿಬ್ಬಂದಿ ಶಿವರಾಮು, ಪಾಷಾ ಹಾಗೂ ಹಲವಾರು ಸಿಬ್ಬಂದಿ ದಾಳಿ ಮಾಡಿದ್ದಾರೆ.ಈ ಸಂಬಂಧ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin