ಜಿಪಂ ಸ್ಥಾಯಿ ಸಮಿತಿ ಚುನಾವಣೆ : ಅಧ್ಯಕ್ಷರುಗಳ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

hasana

ಹಾಸನ, ಸೆ.16- ಜಿಲ್ಲಾ ಪಂಚಾಯ್ತಿಯ ವಿವಿಧ ಸ್ಥಾಯಿ ಸಮಿತಿಗಳಿಗೆ ನಡೆದ ಚುನಾವಣೆಯಲ್ಲಿ ಭವಾನಿ ರೇವಣ್ಣ ಅವರು ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಗೆ, ವತ್ಸಲ ಎಸ್. ಸಾಮಾಜಿಕ ನ್ಯಾಯ ಹಾಗೂ ಸುಪ್ರದೀಪ್ ಯಜಮಾನ್ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಜಿಪಂ ಹೊಯ್ಸಳ ಸಭಾಂಗಣದಲ್ಲಿ ಜಿಪಂ ವಿವಿಧ ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಿಗದಿಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ಪರಸ್ಪರ ಸಹಕಾರದ ಮೂಲಕ ಸ್ಥಾಯಿ ಸಮಿತಿಗೆ ಅಧ್ಯಕ್ಷರು, ಸದಸ್ಯರುಗಳನ್ನು ಆಯ್ಕೆ ಮಾಡಿಕೊಂಡು ಸೌಹಾರ್ದಯುತವಾಗಿ ಆಡಳಿತ ನಡೆಸೋಣ ಎಂದು ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್ ಹಾಗೂ ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ಮತ್ತು ಕೆಲವು ಸದಸ್ಯರು ಸಭೆಯಲ್ಲಿ ಪ್ರಸ್ತಾಪ ಮುಂದಿಟ್ಟರು.
ಆದರೆ ಇದು ಸರ್ವಾನುಮತವಾಗಿ ಒಪ್ಪಿಗೆಯಾಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯರು ಚುನಾವಣಾ ಪ್ರಕ್ರಿಯೆ ಬಹಿಷ್ಕರಿಸಿ ಸಭಾಂಗಣದಿಂದ ಹೊರನಡೆದರು. ಆಗಲೇ ನಾಮಪತ್ರಗಳು ಸಲ್ಲಿಕೆಯಾಗಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್ ಕುಮಾರ್ ಅವರ ಉಪಸ್ಥಿತಿ ಮತ್ತು ಉಸ್ತುವಾರಿಯಲ್ಲಿ ಚುನಾವಣಾಧಿಕಾರಿಯಾಗಿದ್ದ ಉಪಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ಪುಟ್ಟಸ್ವಾಮಿಯವರು ಚುನಾವಣೆ ನಡೆಸಿದರು.ಒಟ್ಟಾರೆ ಐದು ಅಂದರೆ ಕೃಷಿ ಮತ್ತು ಕೈಗಾರಿಕೆ, ಆರೋಗ್ಯ ಮತ್ತು ಶಿಕ್ಷಣ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ಹಣಕಾಸು ಸ್ಥಾಯಿ ಸಮಿತಿ ಮತ್ತು ಸಾಮಾನ್ಯ ಸ್ಥಾಯಿ ಸಮಿತಿಗಳಿಗೆ ಮತದಾನ ನಡೆದು ಸದಸ್ಯರ ಆಯ್ಕೆ ನಡೆಯಿತು.
ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಗೆ ಚಂಚಲ ಕುಮಾರಸ್ವಾಮಿ, ಪುಷ್ಪದರ್ಶನ್(ಬಾಬು) ಎಂ.ಎಸ್, ಭವಾನಿ ರೇವಣ್ಣ, ಮಮತ, ಕೆ.ಎನ್. ಲೀಲಾ ಎನ್.ಸಿ., ಸುಧಾ ಎಂ.ಡಿ ಮತ್ತು ಹನುಮೇಗೌಡ ಉ:ಪುಟ್ಟರಾಜು ಅವರು ಸದಸ್ಯರುಗಳಾಗಿ ಆಯ್ಕೆಯಾದರು.ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿಗೆ ಅಶೋಕ ಬಿ.ಎಸ್, ಜಯಮ್ಮ ರಂಗಶೆಟ್ಟಿ, ಮಮತ ಕೆ.ಎನ್., ಯಶೋದಮ್ಮ, ಶಾರದಮ್ಮ, ಸುಪ್ರದೀಪ್ ಯಜಮಾನ್ ಮತ್ತು ಸ್ಮಿತಾ ವಿ.ರವರು ಸದಸ್ಯರುಗಳಾಗಿ ಆಯ್ಕೆಯಾದರು. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ಚಂಚಲ ಕುಮಾರಸ್ವಾಮಿ ಸಿ.ಟಿ., ಲತಾ ಮಂಜೇಶ್ವರಿ ಎನ್.ಎಸ್, ಲೀಲಾ ಎನ್.ಸಿ., ಲೋಕೇಶ್, ವತ್ಸಲ ಎಸ್, ಶಾರದಮ್ಮ ಮತ್ತು ಸ್ಮಿತಾ ವಿ. ರವರು ಸದಸ್ಯರುಗಳಾಗಿ ಆಯ್ಕೆಯಾದರು. ಹಣಕಾಸು ಸ್ಥಾಯಿ ಸಮಿತಿಗೆ ಅಶೋಕ ಬಿ.ಎಸ್., ಉಜ್ಮಾರಿಜ್ವಿ ಸುದರ್ಶನ, ಪುಟ್ಟಸ್ವಾಮಿಗೌಡ ಸಿ.ಎನ್, ಎಂ.ಡಿ.ಸುಧಾ, ಸ್ವರೂಪ್ ಹೆಚ್.ಪಿ ಮತ್ತು ಹನುಮೇಗೌಡ ರವರು ಸದಸ್ಯರುಗಳಾಗಿ ಆಯ್ಕೆಯಾದರು.
ಸಾಮಾನ್ಯ ಸ್ಥಾಯಿ ಸಮಿತಿಗೆ ಪುಟ್ಟಸ್ವಾಮಿಗೌಡ ಸಿ.ಎನ್, ಪುಷ್ಪ ಎಂ.ಎಸ್.ದರ್ಶನ್, ಮಂಜೇಗೌಡ ಸಿ., ರತ್ನಮ್ಮ ಬಿ.ಐ., ಲತಾ ದಿಲೀಪ್ ಕುಮಾರ್ ಮತ್ತು ಹೆಚ್.ಪಿ.ಸ್ವರೂಪ್ ರವರು ಸದಸ್ಯರುಗಳಾಗಿ ಆಯ್ಕೆಯಾದರು. ಆನಂತರ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ನಡೆಯಿತು. ಹಣಕಾಸು ಸ್ಥಾಯಿ ಸಮಿತಿಗೆ ಜಿಪಂ ಅಧ್ಯಕ್ಷರು ಹಾಗೂ ಸಾಮಾನ್ಯ ಸ್ಥಾಯಿ ಸಮಿತಿ ಜಿಪಂ ಉಪಾಧ್ಯಕ್ಷರು ಖಾಯಂ ಅಧ್ಯಕ್ಷರಾಗಿರುವ ಹಿನ್ನೆಲೆಯಲ್ಲಿ ಉಳಿದ 3 ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆದು ಭವಾನಿ ರೇವಣ್ಣ, ಸುಪ್ರದೀಪ್ ಯಜಮಾನ್ ಮತ್ತು ವತ್ಸಲಾ ಎಸ್. ಅವು ಅಧ್ಯಕ್ಷರುಗಳಾಗಿ ಆಯ್ಕೆಯಾದರು. ಶಾಸಕರಾದ ಹೆಚ್.ಕೆ.ಕುಮಾರಸ್ವಾಮಿ, ಹೆಚ್.ಎಸ್.ಪ್ರಕಾಶ್, ಕೆ.ಎಂ.ಶಿವಲಿಂಗೇಗೌಡ ಹಾಗೂ ಸಿ.ಎನ್.ಬಾಲಕೃಷ್ಣ ಅವರು ಸಹ ಚುನಾವಣೆಯಲ್ಲಿ ಪಾಲ್ಗೊಂಡು ಮತದಾನ ಮಾಡಿದರು.

 

► Follow us on –  Facebook / Twitter  / Google+

Facebook Comments

Sri Raghav

Admin