ಮೋದಿ 66ನೇ ಜನ್ಮದಿನಕ್ಕೆ 4 ಗಿನ್ನಿಸ್ ದಾಖಲೆಗಳ ಗಿಫ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

Modi

ನವದೆಹಲಿ, ಸೆ.16-ಪ್ರಧಾನಮಂತ್ರಿ ನರೇಂದ್ರ ಮೋದಿ ನಾಳೆ 66ನೇ ವರ್ಷಕ್ಕೆ ಪಾರ್ದಾಪಣೆ ಮಾಡಲಿದ್ದು, ದೆಹಲಿ ಸೇರಿದಂತೆ ವಿವಿಧೆಡೆ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಅಚರಿಸಲು ಸಿದ್ಧತೆಗಳು ನಡೆಯುತ್ತಿವೆ. ಪ್ರಧಾನಿ ಗೌರವಾರ್ಥ ನಾಲ್ಕು ಗಿನ್ನಿಸ್ ವಿಶ್ವದಾಖಲೆಗಳು ಮತ್ತು ಒಂದು ಹೊಸ ರಾಷ್ಟ್ರೀಯ ದಾಖಲೆಗಳನ್ನು ಸೃಷ್ಟಿಸಲು ವೇದಿಕೆ ಸಹ ಸಜ್ಜಾಗಿದೆ.  ಮೋದಿ ಜನ್ಮದಿನೋತ್ಸವಕ್ಕೆ ಗುಜರಾತ್‍ನಲ್ಲಿ ವಿಶೇಷ ಕಾರ್ಯಕ್ರಮಗಳು ಏರ್ಪಟ್ಟಿವೆ. ಗುಜರಾತ್ ನವಸಾರಿ ಜಿಲ್ಲೆಯಲ್ಲಿ ಸಂಘಟಕರು ಹೊಸ ದಾಖಲೆಗಳನ್ನು ನಿರ್ಮಿಸಿ ಅದನ್ನು ಮೋದಿ ಅವರಿಗೆ ಸಮರ್ಪಿಸಲಿದ್ದಾರೆ.

ರಾಜ್ಯ ಸರ್ಕಾರವೂ ಸಹ ಈ ಸಂದರ್ಭದಲ್ಲಿ 11,223 ವಿಕಲಚೇತನರಿಗೆ 17,000 ಕಿಟ್‍ಗಳನ್ನು ವಿತರಿಸಲಿದೆ. ಗಾಲಿಕುರ್ಚಿಯಲ್ಲಿ ಗರಿಷ್ಠ ಸಂಖ್ಯೆಯ (ಸುಮಾರು 1,000) ಜನರು ಒಂದೆಡೆ ಸೇರಿ ಒಂದು ಚಿತ್ರ ಅಥವಾ ಲಾಂಛನವನ್ನು ರೂಪಿಸಲಿದ್ದಾರೆ. 2010ರಲ್ಲಿ ಅಮೆರಿಕದಲ್ಲಿ 346 ಮಂದಿಯ ಮೂಲಕ ಸೃಷ್ಟಿಯಾಗಿದ್ದ ದಾಖಲೆಯನ್ನು ಮುರಿಯುವುದು ಇದರ ಉದ್ದೇಶ. ಅದೇ ರೀತಿ 1,000 ಶ್ರವಣ ಸಾಧನಗಳನ್ನು ನೀಡಿ ಆಸ್ಟ್ರೇಲಿಯಾದ ದಾಖಲೆಯನ್ನು ಅಲಿಸಿ ಹಾಕಲು ಸಿದ್ದತೆಗಳು ನಡೆದಿವೆ. ಹಾಗೆಯೇ ಫಲಾನುಭವಿಗಳಿಗೆ ಗಾಲಿಕುರ್ಚಿಗಳು, ಟ್ರೈಸೈಕಲ್‍ಗಳು, ಸೆರೆಬ್ರಲ್ ಪಾಸ್ಲಿ ರೋಗಿಗಳಿಗೆ ವಿಶೇಷ ಕುರ್ಚಿಗಳು, ಕ್ಯಾಲಿಪರ್ಸ್‍ಗಳು, ಶೈಕ್ಷಣಿಕ ಕಿಟ್‍ಗಳನ್ನು ನೀಡಲಾಗುವುದು. ಒಂದೇ ಸ್ಥಳದಲ್ಲಿ 1,500 ತೈಲ ದೀಪಗಳನ್ನು ಬೆಳಗಿಸಿ ಇನ್ನೊಂದು ದಾಖಲೆಯನ್ನೂ ನಿರ್ಮಿಸಲಾಗುವುದು ಎಂದು ಸಂಘಟಕರು ಹೇಳಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin