ಉಗಾಂಡದಲ್ಲಿ ರಕ್ತದಾನ ಮಾಡಿ ಮಾನವೀಯತೆ ಮೆರೆದ ನರಸಿಂಹಮೂರ್ತಿ

ಈ ಸುದ್ದಿಯನ್ನು ಶೇರ್ ಮಾಡಿ

 

turvekere--blood-donet

ತುರುವೇಕೆರೆ,ಸೆ.17-ರಕ್ತ ದಾನಿ ಎಂಬ ಖ್ಯಾತಿ ಪಡೆದಿರುವ ಪಟ್ಟಣದ ಎಂ.ನರಸಿಂಹಮೂರ್ತಿ ಅವರು 78ನೇ ಬಾಟಲ್ ರಕ್ತದಾನವನ್ನು ಪೂರ್ವ ಆಫ್ರಿಕಾದ ಉಗಾಂಡಾ ದೇಶದ ರಾಜಧಾನಿ ಕಂಪಾಲದಲ್ಲಿ ನೀಡಿದ್ದಾರೆ.ಪಟ್ಟಣದ ಅಭಿನೇತ್ರಿ ಮೆಡಿಕಲ್ಸ್‍ನ ಮಾಲೀಕರಾದ ಎಂ. ನರಸಿಂಹಮೂರ್ತಿ ಓ ಪಾಸಿಟೀವ್ ರಕ್ತದ ಗುಂಪನ್ನು ಹೊಂದಿದ್ದು, ಹಲವಾರು ವರ್ಷಗಳಿಂದ ರಕ್ತದಾನ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಯಾವುದೇ ಸಂಘಟನೆ ರಕ್ತದಾನ ಶಿಬಿರ ಏರ್ಪಡಿಸಿದರೂ ಅಲ್ಲಿಗೆ ತಪ್ಪದೆ ಹಾಜರಾಗಿ ರಕ್ತದಾನ ಮಾಡಿ ಬರುತ್ತಾರೆ.

ಈವರೆಗೆ 77 ಬಾಟಲ್ ರಕ್ತ ದಾನ ಮಾಡಿ ನೂರಾರು ಜನರ ಪ್ರಾಣ ಉಳಿಸಿದ್ದಾರೆ. ಇದೀಗ ನರಸಿಂಹಮೂರ್ತಿ ಅಧ್ಯಯನ ಪ್ರವಾಸಕ್ಕೆಂದು ಆಫ್ರಿಕಾದ ಉಗಾಂಡಾಗೆ ತೆರಳಿದ್ದಾರೆ. ಅಲ್ಲಿನ ರಾಜಧಾನಿ ಕಂಪಾಲದಲ್ಲಿ ಏರ್ಪಡಿಸಿದ್ದ ಶಿಬಿರವೊಂದರಲ್ಲಿ 78ನೇ ಬಾಟಲ್ ರಕ್ತದಾನ ಮಾಡಿ ಉದಾರತೆ ಮೆರೆದಿದ್ದಾರೆ. ನಾನು ಆರೋಗ್ಯವಾಗಿರುವುದರಿಂದ ಇಲ್ಲಿರುವ ಸಂದರ್ಭದಲ್ಲಿ ಮತ್ತೂ ಒಂದೆರಡು ಭಾರಿ ರಕ್ತದಾನ ಮಾಡುವ ಆಶಯ ಹೊಂದಿದ್ದೇನೆ ಎಂದು ಅವರು ತಿಳಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin