ಚಿರತೆ ದಾಳಿ : ಮೇಕೆಗಳು ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

chirate

ಕೋಲಾರ, ಸೆ.17- ಚಿರತೆಯೊಂದು ತಾಲೂಕಿನ ಚಿಕ್ಕ ಆಯೂರು ಗ್ರಾಮಕ್ಕೆ ನುಗ್ಗಿ ಮೇಕೆ ಹಾಗೂ ಕುರಿಗಳನ್ನು ತಿಂದುಹಾಕಿರುವ ಘಟನೆ ಕಳೆದ ರಾತ್ರಿ ನಡೆದಿದೆ.ನೀಲಮ್ಮ ಎಂಬುವರಿಗೆ ಸೇರಿದ ಮೇಕೆಗಳು ವನ್ಯಮೃಗಕ್ಕೆ ಬಲಿಯಾಗಿವೆ. ಇದಲ್ಲದೆ, ಗ್ರಾಮದ ಹಲವು ಕೊಟ್ಟಿಗೆಗಳಲ್ಲೂ ಕುರಿಗಳು ಕಾಣೆಯಾಗಿದ್ದು, ಅವುಗಳನ್ನು ಚಿರತೆಯೇ ಎತ್ತಿಕೊಂಡು ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.ಗ್ರಾಮದ ಸಮೀಪದಲ್ಲಿರುವ ಬೆಟ್ಟದಲ್ಲಿ ಚಿರತೆಗಳು ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ತುರ್ತು ಕಾರ್ಯಾಚರಣೆ ನಡೆಸಿ ಬೋನುಗಳನ್ನಿಟ್ಟು ಚಿರತೆಗಳನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಈ ಹಿಂದೆ ವಿವಿಧೆಡೆ ಹಿಡಿದಿದ್ದ ಚಿರತೆಗಳನ್ನು ಈ ಗ್ರಾಮದ ಸಮೀಪದಲ್ಲೇ ಇರುವ ಕಿರು ಅರಣ್ಯಕ್ಕೆ ಬಿಡಲಾಗಿತ್ತು. ಅವುಗಳು ಈಗ ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿವೆ ಎಂದು ಆರೋಪಿಸಲಾಗಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin