ತಿಮ್ಮಾಪೂರದ ಶ್ರೀ ಮಾರುತೇಶ್ವರ ಉತ್ತರಿ ಮಳೆ ಜಾತ್ರೆ

ಈ ಸುದ್ದಿಯನ್ನು ಶೇರ್ ಮಾಡಿ

maruti

ಶ್ರೀ ಮಾರುತೇಶ್ವರ ಹಾಗೂ ಶ್ರೀ ಬಸವೇಶ್ವರ ಜಾತ್ರೆ ಇಂದಿನಿಂದ ಮೂರು ದಿನ ವಿಜೃಂಭಣೆಯಿಂದ ನಡೆಯುತ್ತಿದೆ. ಮಾರುತೇಶ್ವರ ಪ್ರಾಚೀನ ಪರಂಪರೆಯ ದ್ಯೋತಕವಾದ ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪೂರದ ಪ್ರಸಿದ್ದ ದೇವಾಲಯ. ಈ ಜಾತ್ರೆ ಯಲ್ಲಿ ವಿಸ್ಮಯ ರೀತಿಯ ಹತಾರ ಸೇವೆ ಕಾಯಿ ಒಡೆಯುವುದು, ಹೇಳಿಕೆ ನುಡಿಯುವುದು ವಿಶೇಷ ಆಕರ್ಷಣೆ. ಶ್ರದ್ದೆ ಭಕ್ತಿಗಳ ಸಂಗಮ. ಈ ಜಾತ್ರೆ ಯ ಕುರಿತು ಒಂದು ಕಿರು ಮಾಹಿತಿ.ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕದಿಂದ ಉತ್ತರಕ್ಕೆ 5. ಕಿ.ಮೀ. ಅಂತರದಲ್ಲಿರುವ ಗ್ರಾಮವೇ ತಿಮ್ಮಾಪೂರ. ಇದು ಒಂದು ಪುಟ್ಟ ಗ್ರಾಮ. ಈ ಊರು ಸಾಮರಸ್ಯಕ್ಕೆ ಹೆಸರುವಾಸಿಯಾಗಿದೆ.

ಇಲ್ಲಿ ಶ್ರೀ ಮಾರುತೇಶ್ವರ ಹಾಗೂ ಶ್ರೀ ಬಸವೇಶ್ವರ ಜೋಡಿಗುಡಿಗಳು ಇದ್ದದು ವಿಶೇಷ. ಈ ಜಾತ್ರೆ  ಹುಬ್ಬಿ ಮಳೆಯ ಕೂನೆಯ ಪಾದದಲ್ಲಿ ಮಾರುತೇಶ್ವರ, ಬಸವೇಶ್ವರ ಹಾಗೂ ಎಲ್ಲಾ ದೇವರುಗಳಿಗೆ ನೀರನ್ನು ಹನಿಸುವುದರೂಂದಿಗೆ ಪ್ರಾರಂಭವಾಗುತ್ತದೆ. ಮುಂದೆ ಬರುವ ಶನಿವಾರ ರವಿವಾರ ಜಾತ್ರೆ  ನಡೆಯುತ್ತದೆ. ಈ ಜಾತ್ರೆ ಯು ಉತ್ತರಿ ಮಳೆಯ ಅವಧಿಯಲ್ಲಿ ನಡೆಯುವುದರಿಂದ ಈ ಭಾಗದಲ್ಲಿ ಉತ್ತರಿ ಮಳೆ ಜಾತ್ರೆ  ಎಂದು ಹೆಸರುವಾಸಿಯಾಗಿದೆ.ಈ ಊರಿನ ಪೂಜರಿಗಳು ಹರಪನಹಳ್ಳಿಯ ದೇಸಾಯಿಯರೆಂಬ ಪ್ರತೀತಿ ಇದೆ. ಅವರು ಒಂದು ಕಾಲದಲ್ಲಿ ಹರಪನಹಳ್ಳಿ ಬಿಟ್ಟು ಬರುವ ಕಾಲಕ್ಕೆ ಹುನಗುಂದ ತಾಲೂಕಿನ ದಮ್ಮೂರದ ಗುಡ್ಡದಲ್ಲಿ ಬರುತ್ತಿರುವಾಗ ಅಲ್ಲಿ ಏನೋ ಅವರ ಮನದಲ್ಲಿ ಮೂಡಿ ಬಂದು ಕಲ್ಲಿನ ಮೇಲೆ ನಿಂತರಂತೆ. ಆ ಸಂದರ್ಭದಲ್ಲಿ ಅವರ ಕಣ್ಣುಗಳು ಕಾಣದಂತಾಯಿತಂತೆ. ಮತ್ತೆ ಸ್ವಲ್ಪದರಲ್ಲಿ ಕಣ್ಣುಗಳು ಕಾಣಿಸಿದಂತಾಗತೊಡಗಿತು. ಕಣ್ಣು ತರೆದು ನೋಡಿದಾಗ ಆ ಸಂದರ್ಭದಲ್ಲಿ ಮಾರುತೇಶ್ವರನು ಭಕ್ತನೇ ನೀನು ಎಲ್ಲಿಗೆ ಹೋಗುವೆ? ನನ್ನನ್ನು ಅಲ್ಲಿಗೆ ಕರದುಕೊಂಡು ಹೋಗು. ನಾನು ನಿನ್ನ ಜೊತೆ ಬರುತ್ತೇನೆ¿¿ ಎಂದು ವಾಣಿಯಾಯಿತಂತೆ.
ಆಗ ಆ ಭಕ್ತನು ¾¾ನಿನ್ನನ್ನು ಹೊಯ್ಯುವುದು ಹೇಗೆ ಸಾಧ್ಯ? ಎಂದು ಅವನನ್ನು ಕೇಳಿದನಂತೆ. ಆಗ ಮಾರುತೇಶ್ವರನು ¾¾ನಾನು ರೋಟಿ ತೂಕದಲ್ಲಿ ಬರುತ್ತೇನೆ¿¿ ಎನ್ನಲು, ಆ ವ್ಯಕ್ತಿ ನೆಲದಲ್ಲಿಯ ಆ ಕಲ್ಲನ್ನು ಎತ್ತಿಕೊಳ್ಳಲು ಅದು ಬಹಳ ಹಗುರವಾಯಿತು. ಅದನ್ನು ಎತ್ತಿಕೊಂಡು ಅಲ್ಲಿಂದ ಹುನಗುಂದ ತಾಲೂಕಿನ ತಿಮ್ಮಾಪೂರ ಸಮೀಪಕ್ಕೆ ಬಂದಾಗ ಆ ಕಲ್ಲು ಭಾರವಾಯಿತಂತೆ. ಆಗ ಆ ವ್ಯಕ್ತಿಯು ಆ ಮೂರ್ತಿಯನ್ನು ಒಗೆದು ಹೊರಟನಂತೆ. ಆಗ ಆ ಮೂರ್ತಿಯು ನನ್ನನ್ನು ಇಲ್ಲಿ ಬಿಟ್ಟು ಹೋಗಬೇಡಾ. ನನಗೆ ಈ ಊರಿನ ಡೊಳ್ಳು ಕಳಸದೊಂದಿಗೆ ಬಂದು ಕರೆದುಕೊಂಡು ಹೋಗು. ನನಗೆ ಸಂಗಟಿ ಎಡೆಯನ್ನು ಮಾಡಿ ತರಲು ಹೇಳಿದನಂತೆ.

ಆ ಪ್ರಕಾರ ಅವನು ಗ್ರಾಮಕ್ಕೆ ತೆರಳಿ ಗ್ರಾಮದ ಕೆಲವು ಮನೆತನದವರನ್ನು ಕರೆದುಕೊಂಡು ಸಂಗಟಿ ಎಡೆಯನ್ನು ಮಾಡಿಕೊಂಡು ಮೆರವಣಿಗೆ ಮೂಲಕ ಗ್ರಾಮಕ್ಕೆ ತಂದು ಪ್ರತಿಷ್ಠಾಪಿಸಿದರು. ಈ ರೀತಿ ಮಾರುತೇಶ್ವರನ ಪ್ರತಿಷ್ಠಾಪನೆ ಹಿಂದೆ ಕಥೆಯೊಂದಿದೆ ಎಂದು ಹಿರಿಯರು ಹೇಳುವರು. ಇಂದಿಗೂ ಅಂದಿನಿಂದ ಇಂದಿನವರೆಗೂ ಮಾರುತೇಶ್ವರನಿಗೆ ಸಂಗಟಿಯನ್ನು ಜಾತ್ರೆ ಯಲ್ಲಿ ಮಾಡುವ ಪರಂಪರೆ ಮುಂದುವರೆದುಕೊಂಡು ಬಂದಿದೆ.ಈ ಜಾತ್ರೆ ಯ ಸಂದರ್ಭದಲ್ಲಿ ಅಲಗನ್ನು ಹಾಕಿಕೊಳ್ಳುವ ಪದ್ಧತಿಯಿದೆ. ಇದು ವಿಶೇಷ ಕೂಡ. ಅಲಗೆ ಹಾಯುವ (ಹತ್ತಾರ ಸೇವೆ) ಪದ್ಧತಿ ಇಂಥ ಕಂಪ್ಯೂಟರ್ ಯುಗದಲ್ಲಿಯೂ ಮುಂದುವರದಿದೆ. ಸಾಯಂಕಾಲ ಹೊತ್ತಿಗೆ ಇಲ್ಲಿ ಹೇಳಿಕೆ ಕೂಡ ನಡೆಯುತ್ತದೆ, ಮಳೆ ಬೆಳೆ ಇತ್ಯಾದಿ ವಿಚಾರವಾಗಿ ವಾಣಿ ನುಡಿಯುವ ಪದ್ದತಿ ಇಂದಿಗೂ ಇದೆ. ಈ ಹೇಳಿಕೆ ಜಾತ್ರೆ ಯ ದಿವಸ ನಾಳೆ ಸಾಯಂಕಾಲ ನಡೆಯುತ್ತದೆ. ಈ ಗ್ರಾಮಕ್ಕೆ ಭೇಟಿ ಕೊಟ್ಟವರಿಗೆ ದಕ್ಷಿಣನಾಭಿಮುಖವಾಗಿರುವ ಎರಡು ದೇವಾಲಯಗಳು ಕಾಣಿಸುತ್ತವೆ. ಅವುಗಳಲ್ಲಿ ಒಂದು ಮಾರುತೇಶ್ವರ ದೇವಾಲಯ. ಇನ್ನೊಂದು ಬಸವೇಶ್ವರ ದೇವಾಲಯಗಳಾಗಿವೆ.

ಮಾರುತೇಶ್ವರ ಗರ್ಭಗುಡಿಯನ್ನು ಸಂಗಮೋರಿ ಕಲ್ಲಿನಿಂದ ಮಾಡಲಾಗಿದ್ದು ದೇವಸ್ಥಾನದ ಎದುರಿಗೆ ದೀಪಸ್ಥಂಭ, ಬಲಬದಿಗೆ ಬಸವೇಶ್ವರ ದೇವಾಲಯವಿದೆ. ಇದರ ಜಾತ್ರೆ ಯು ಸಹ ಈ ಜಾತ್ರೆ ಯ ಜೊತೆ ನಡೆಯುತ್ತದೆ. ಬಸವೇಶ್ವರ ರಥೋತ್ಸವವು ಮರುದಿನ ಸೋಮವಾರ ನಡೆಯುತ್ತದೆ. ಪಕ್ಕದಲ್ಲಿ ಪವಾಡ ಪುರುಷರ ಎರಡು ಕಟ್ಟೆಗಳು ಇವೆ. ಒಬ್ಬ ಪೂಜಾರಿಯು ನಾಲಿಗೆಯನ್ನು ಕೊಯ್ದುಕೊಂಡು ಆ ನಾಲಗೆ ಮರಳಿ ಜೋಡಿಸಿಕೊಂಡರಂತೆ. ಇನ್ನೊಬ್ಬ ಪೂಜರಿಯು ಕಾಲಿನ ಚಿಪ್ಪನ್ನು ಕೊರೆದುಕೊಂಡು ದೀಪವನ್ನು ಹಚ್ಚಿದರಂತೆ ಎಂಬ ಪ್ರತೀತಿ ಇದೆ.
ಭರಮದೇವರ ಕಟ್ಟೆ ಇದು ಜಾತ್ರೆ ಯ ದಿವಸ ಹತ್ಯಾರ ಶ್ಯಾವಿ ನಡೆದ ನಂತರ ಕೂನೆಯ ಪೂಜರಿಯು ಈ ಕಟ್ಟೆಯ ಮೇಲೆ ನಿಂತು ಹೇಳಿಕೆಯನ್ನು ನುಡಿಯುತ್ತಾನೆ.
ಪವಾಡಗಳು : ಈ ಮಾರುತೇಶ್ವರನ ಪೂಜಾರಿಯು ಗೂಡೂರ ಗ್ರಾಮದಲ್ಲಿ ಅಲ್ಲಿಯೆ ಗ್ರಾಮಸ್ಥರು ಆ ವರ್ಷ ಭೀಕರ ಬರಗಾಲವಿದ್ದರು ಪೂಜಾರಿಯನ್ನು ಮಳೆಯ ಬಗ್ಗೆ ಕೇಳಿದರಂತೆ. ಆಗ ಆ ಪೂಜಾರಿಯು ನೀವು ಮಾಳಿಗೆ ಏರಿ ಬೆಳಕಿಂಡಿ ಮುಚ್ಚಿರೀ. ನಾನು ಊರು ದಾಟುವುದರೊಳಗೆ ಮಳೆ ಬರುತ್ತೆ ಎಂದು ಹೇಳಿದನಂತೆ. ಆ ಪ್ರಕಾರ ಮಳೆಯಾಯಿತು ಎಂದು ಹೇಳಲಾಗುತ್ತಿದೆ.ಹಿಂದೊಮ್ಮೆ ಒಬ್ಬ ಕಳ್ಳ ಹನಮಂತ ದೇವರ ಕ್ವಾರಿ ಮೀಸಿಯನ್ನು ಕಳವು ಮಾಡಿ ಒಯ್ಯುತ್ತಿರುವಾಗ ಅವನ ಕಣ್ಣುಗಳು ಕಾಣಿಸಲಿಲ್ಲವಂತೆ. ಅವನು ಜನರ ಸಮಕ್ಷಮ ದೇವರಿಗೆ ಕ್ಷಮಾಪಣೆ ಕೇಳಿ ಆ ಕ್ವಾರಿ ಮೀಸಿಯನ್ನು ಮರಳಿಸಿದ ನಂತರ ಅವನಿಗೆ ಕಣ್ಣುಗಳು ಬಂದವು ಎಂದು ಹಿರಿಯರು ಹೇಳುತ್ತಾರೆ. ತಮ್ಮ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ದೇವರಿಗೆ ಬೇಡಿದರೆ ಹೂ ತನ್ನಿಂದ ತಾನೆ ಕೆಳಗೆ ಬೀಳುತ್ತದೆ. ಹೂ ಬಿದ್ದರೆ ತಮ್ಮ ಬೇಡಿಕೆ ಈಡೇರುತ್ತದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿ ವ್ಯಾಪಕವಾಗಿದೆ.
ಶ್ರೀ ಕ್ಷೇತ್ರದ ವಿಶೇಷ ಪೂಜೆಗಳು :

ಶ್ರಾವಣ ಮಾಸದಲ್ಲಿ ಪ್ರತಿನಿತ್ಯವೂ ಪೂಜೆ ಪುನಸ್ಕಾರ, ಅಭಿಷೇಕ ಮಾಡಲಾಗುವುದು. ರಾತ್ರಿ ಭಜನೆ, ಮಂಗಳಾರತಿ ಕಾರ್ಯಕ್ರಮಗಳು ನಡೆಯುತ್ತ್ತವೆ. ಇಲ್ಲಿ ವರ್ಷ ಪೂರ್ತಿ ಭಕ್ತರು ಬರಗಾಲಿನಿಂದ ಈ ದೇವಸ್ಥಾನಕ್ಕೆ ಭಕ್ತಿಯಿಂದ ಆಗಮಿಸಿ ತಮ್ಮ ಇಷ್ಟಾರ್ಥಕ್ಕಾಗಿ ಬೇಡಿಕೊಳ್ಳುವರು. ತಿಮ್ಮಾಪೂರ ಹಾಗೂ ಸುತ್ತಮುತ್ತಲಿನ ಸಾಕಷ್ಟು ಭಕ್ತರು ಮಾರುತೇಶ್ವರನನ್ನು ತಮ್ಮ ಆರಾಧ್ಯ ದೇವನನ್ನಾಗಿಸಿಕೊಂಡಿದ್ದಾರೆ. ವಿಜಯ ದಶಮಿಯಂದು ಮಾರುತೇಶ್ವರ ಪಲ್ಲಕ್ಕಿಯು ವಾದ್ಯ ಮೇಳಗಳೊಂದಿಗೆ ನೂರಾರು ಭಕ್ತರ ಮಧ್ಯ ಗ್ರಾಮದ ಹೊರವಲಯದಲ್ಲಿರುವ ಸಂಗಪ್ಪ ಮಡಿವಾಳರ ಹೂಲದಲ್ಲಿರುವ ಬನ್ನಿ ಮರಕ್ಕೆ ಪೂಜೆ ಮಾಡಿ ಅಲ್ಲಿಂದ ಬನ್ನಿ ತಪ್ಪಲನ್ನು ತರಲಾಗುತ್ತದೆ. ಬಳಿಕ ಭಕ್ತರು ಬನ್ನಿ ಎಲೆಗಳನ್ನು ವಿನಮಯ ಮಾಡಿಕೊಳ್ಳುವ ದೃಶ್ಯ ನಡುರಾತ್ರಿವರೆಗೆ ನಡೆಯುತ್ತದೆ. ಬನ್ನಿ ವಿನಿಮಯದಿಂದ ಭಾಂಧ್ಯವ್ಯ ವೃದ್ಧಿಸುತ್ತದೆ ಎಂಬ ನಂಬಿಕೆ ಇದೆ. ಕಾರ್ತಿಕೋತ್ಸವ ಕೂಡ ಈ ಸಂದರ್ಭದಲ್ಲಿ ಜರುಗುತ್ತದೆ.

ಪ್ರತಿ ವರ್ಷ ಗ್ರಾಮದ ದೈವಮಂಡಳಿ ಯಿಂದ ಪ್ರತಿ ರಾತ್ರಿ ಗುಡಿಯ ಸುತ್ತಲೂ ಐದು ಸುತ್ತು ಪಲ್ಲಕ್ಕಿ ಪ್ರದರ್ಶನ ಜರುಗುತ್ತದೆ. ವಿಶೇಷ ಪೂಜೆ, ಧಾರ್ಮಿಕ ಆಚರಣೆಗಳು ನಡೆಯುತ್ತದೆ. ಕಾರ್ತಿಕೋತ್ಸವ ನಿತ್ಯ ಶಿವ ಭಜನೆ, ಮನರಂಜನಾ ಕಾರ್ಯಕ್ರಮಗಳು ಈ ಸಂದರ್ಭ ಇಲ್ಲಿ ಜರುಗುತ್ತದೆ.
ಇಲ್ಲಿಯ ಮಾರುತೇಶ್ವರ ಬಸವೇಶ್ವರ ಜಾತ್ರೆ ಯು ಹುಬ್ಬಿ ಮಳೆಯ ಕೂನೆಯಪಾದದಲ್ಲಿ ನೀರನ್ನು ಹೊಯ್ಯುವ ಮೂಲಕ ಪ್ರಾರಂಭವಾಗುತ್ತವೆ. ಈ ಸಂದರ್ಭದಲ್ಲಿ ದೇವಸ್ಥಾನವನ್ನು ವಿಶೇಷವಾಗಿ ಶೃಂಗರಿಸುವರು, ಗೋಪಾಳವನ್ನ ಗ್ರಾಮದಲ್ಲಿ ಸಂಚರಿಸುವುದು ನಂತರ ಬರುವ ಶನಿವಾರ ರಾತ್ರಿ ಎರಡು ಓಣಿಗಳ(ಗಲ್ಲಿಗಳು) ಕರಡಿ ಮಜಲು ಮಾರುತೇಶ್ವರ ಸಾಮಾನುಗಳನ್ನು ತೆಗೆದುಕೊಂಡು ದೇವಸ್ಥಾನಕ್ಕೆ ತಲುಪುತ್ತವೆ.

ಮಾರುತೇಶ್ವರ ಪಲ್ಲಕ್ಕಿ, ಪೂಜಾರಿಗಳು ಮತ್ತು ಭಕ್ತರು ಗ್ರಾಮದಿಂದ 1 ಕಿ.ಮೀ. ಅಂತರದಲ್ಲಿರುವ ಪತ್ರಿಗಿಡದ ಬಸವೇಶ್ವರನಿಗೆ ಪೂಜೆ ಸಲ್ಲಿಸಿ ನಂತರ ಚಿತ್ತರಗಿ ಹಳ್ಳದಲ್ಲಿರುವ ಕನಗಲಿ ಹೂವನ್ನು ಹರಿದುಕೊಂಡು ಸ್ವಲ್ಪ ವಿಶ್ರಾಂತಿ  ತೆಗೆದುಕೊಂಡು ನಂತರ ಕಿರಸೂರ ಸಮೀಪ ಇರುವ ಸಂಜೀವಪ್ಪ ಬಳೂಲದರವರ ಹೊಲದಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿ. ನಂತರ ಕಿರಸೂರ ಗ್ರಾಮಸ್ಥರು ಹನಮಂತ ದೇವರ ಗಂಟಿ ಶಬ್ದ ಕೇಳಿದ್ದಾಕ್ಷಣ ಅಲ್ಲಿಯ ಮುಖಂಡರು ಪಲ್ಲಕ್ಕಿ ಹಾಗೂ ಭಕ್ತರನ್ನು ಬರಮಾಡಿಕೊಳ್ಳುತ್ತಾರೆ. ನಂತರ ಅಂದು ಸಂಜೆ ಮಾರುತೇಶ್ವರ ದೇವಸ್ಥಾನದಲ್ಲಿ ಡೊಳ್ಳಿನ ಪದ ಗಳ ಹಾಡುಗಾರಿಕೆಯನ್ನು ಹಮ್ಮಿಕೊಂಡಿರುತ್ತಾರೆ. ಅದಕ್ಕೂ ಪೂರ್ವದಲ್ಲಿ ತಿಮ್ಮಾಪೂರ ಗ್ರಾಮದಲ್ಲಿ ದೇವಸ್ಥಾನದಿಂದ ಮಾರುತೇಶ್ವರ ಕಳಸವನ್ನು ನಾರಾಯಣಗೌಡರ ಕಟ್ಟೆಯ ಮೇಲೆ ಬಸವೇಶ್ವರ ಕಳಸವನ್ನು ಭಗವಂತಗೌಡರ ಕಟ್ಟೆಯ ಮೇಲೆ ಇಳಿಸಲಾಗುತ್ತದೆ.

ಕಿರಸೂರನಲ್ಲಿ ಮಾರುತೇಶ್ವರ ಹಾಗೂ ಬಸವೇಶ್ವರ ದೇವಸ್ಥಾನಗಳು ಅವರಣದಲ್ಲಿರುವ ಎರಡು ದೇವಸ್ಥಾನಗಳಿಗೆ ಪೂಜೆ ಸಲ್ಲಿಸಿ ಸ್ಪಲ್ಪ ವಿಶ್ರಾಂತಿ ಡೊಳ್ಳಿನ, ಹಾಡುಗಳು ಕಿರಸೂರ ಗ್ರಾಮಸ್ಥರು ಮಾರುತೇಶ್ವರನಿಗೆ ಪಲ್ಲಕ್ಕಿಗೆ ಪೂಜೆ ಸಲ್ಲಿಸಿ ಕಾಯಿ ಒಡೆಸಿ ಕರ್ಪೂರ ಹಚ್ಚಿ ಭಕ್ತರು ನಮನ ಸಲ್ಲಿಸುತ್ತಾರೆ.ಹಿಂದೊಮ್ಮೆ ಕಿರೆಸೂರ ಗ್ರಾಮಕ್ಕೆ ತೆರಳದೇ ತಿಮ್ಮಾಪೂರಕ್ಕೆ ಹೋಗಿದ್ದರಿಂದ ಅಪಶಕುನದಂತಾಗಿ ಪ್ರತಿ ಸಲ ಕಿರೆಸೂರ ಗ್ರಾಮಕ್ಕೆ ಹೋಗುವ ಮೂಲಕ ತಿಮ್ಮಾಪೂರಕ್ಕೆ ಬರುವ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿವೆ. ಕಿರಸೂರನಲ್ಲಿ ರಾತ್ರಿ ಜರುಗುವ ಈ ಕಾರ್ಯಕ್ರಮವನ್ನು ಮೂದಲನೆಯ ಜಾತ್ರೆ  ಎನ್ನುತ್ತಾರೆ. ಕಿರಸೂರ ಗ್ರಾಮಸ್ಥರು ರಾತ್ರಿ 12ರ ಸುಮಾರಿಗೆ ಮಾರುತೇಶ್ವರ ಪಲ್ಲಕ್ಕಿಯನ್ನು ಬೀಳ್ಕೊಡುತ್ತಾರೆ. ನಂತರ ಹಡಗಲಿ ಸಮೀಪವಿರುವ ಮಲ್ಲಪ್ರಭಾ ನದಿಯಲ್ಲಿ ಕರೆಕಲ್ಲ ಮಡಾ ಎನ್ನುವ (ಅಖಂಡ ಕರಿಯ ಕಲ್ಲು) ಇರುವ ಸ್ಥಾನದಲ್ಲಿ ಮಾರುತೇಶ್ವರನನ್ನು ಕುಳ್ಳಿರಿಸುವರು. ಅಲ್ಲಿ ಸ್ನಾನ ಮಾಡಿದ ನಂತರ ಭಕ್ತರು ಸ್ನಾನ ಮಾಡುತ್ತಾರೆ.

 

 

ಎಲ್ಲಾ ದಿಕ್ಕಿಗೂ ಪೂಜೆ ಸಲ್ಲಿಸಿದ ನಂತರ ಮಂಗಳಾರತಿ ನಡೆಯುತ್ತ್ತದೆ. ನಂತರ ಎಲ್ಲ ಭಕ್ತರು ಉಪಹಾರವನ್ನು ಸೇವಿಸುತ್ತಾರೆ. ಅಲ್ಲಿಂದ ಹಡಗಲಿ ಗ್ರಾಮಕ್ಕೆ ತರುಳುತ್ತಾರೆ. ಅಲ್ಲಿಯ ಮಾರುತೇಶ್ವರನಿಗೆ ಪೂಜೆ ಸಲ್ಲಿಸಿ ಗುಡಿ ಪ್ರದಕ್ಷಣಿ ಹಾಕಿ ನಂತರ ಅಲ್ಲಿರುವ ಮಾರುತೇಶ್ವರ ಕಟ್ಟೆಯ ಮೇಲೆ ನಿಂತು ಪೂಜಾ ರಿಯಿಂದ ಹೇಳಿಕೆಯಾಗುತ್ತದೆ. ಮುಂಜಾ ನೆ 4-20ರ ಸುಮಾರಿಗೆ ಹೇಳಿಕೆ ¾¾ಕಾಲೋಚಿತ್ ದೈವಾಧೀನ್ ಉತ್ತರಿ, ಹಸ್ತ, ಚೀತ್ತಿ ಕಡಲ ಮಡಲ ಮಳ್ಳಿ ಕಡಲು ಮಡಲು ಬೇಳೆ, ನಿಮ್ಮ ಅನ್ನ ನಿಮ್ಮ ಪಡಲಿ¿¿ ಎನ್ನುತ್ತ ಹೇಳಿಕೆ ಪ್ರಾರಂಭಿಸುವರು. ತದನಂತರ ಮಾರುತೇಶ್ವರ ದೇವರು ಹಡಗಲಿ ಸಮೀಪ 4-30ಕ್ಕೆ ಬಸವೇಶ್ವರ ಕಟ್ಟೆಗೆ ಬರುವರು. ಅಲ್ಲಿ ಭಕ್ತರು ಕುಳಿತುಕೊಳ್ಳುತ್ತಾರೆ. ನಂತರ ನಿಂಗಪ್ಪ ಬೂದಿಹಾಳರ ಹೊಲದಲ್ಲಿ ಕುಳಿತುಕೂಳ್ಳುವನು. ಅಲ್ಲಿಂದ ಕಳ್ಳಿ ಕಟ್ಟಿ ಬಸವೇಶ್ವರನಿಗೆ ಪೂಜೆಸಲ್ಲಿಸಿ ಅಮರಗೌಡ ದಾದ್ಮಿಯವರ ಹೊಲದಲ್ಲಿ ಮಾರುತೇಶ್ವರ ಕುಳಿತುಕೊಳ್ಳುತ್ತಾನೆ.
ಮುಂಜಾ ನೆ ಎರಡು ಓಣಿ ಕಳಸವು ಗೋಪುರಕ್ಕೆ ಏರಿಸಲಾಗುತ್ತದೆ. ನಂತರ ದಾದ್ಮಿಯವರ ಹೊಲದಲ್ಲಿರುವ ಪಲ್ಲಕ್ಕಿಯನ್ನು ಭಕ್ತರು ಮತ್ತು ಗ್ರಾಮಸ್ಥರು ದೇವಸ್ಥಾನಕ್ಕೆ ಕರೆತರುತ್ತಾರೆ. ಅದರೂ ಪೂರ್ವದಲ್ಲಿ ಹಿಂದಿನ ಮಾರುತೇಶ್ವರ ಪೂಜಾ ರಿಗಳ (ಪವಾಡ ಪುರುಷರ ಕಟ್ಟೆಗೆ) ತರಳಿ ಪೂಜೆ ಸಲ್ಲಿಸಿದ ನಂತರ ದೇವಸ್ಥಾನಕ್ಕೆ ತರಳುತ್ತಾರೆ. ಅಂದು ಮುಂಜಾ ನೆ 8 ಘಂಟೆಗೆ ವಾದ್ಯ ಮೇಳದೊಂದಿಗೆ ಕಳಸದ ಮೆರವಣಿಗೆಯು ದೇವಸ್ಥಾನ ತಲುಪಿ, ನಂತರ ಗೋಪುರಕ್ಕೆ ಏರಿಸುವುದು, 11 ಗಂಟೆ ಹೊತ್ತಿಗೆ ಮಾರುತೇಶ್ವರ ದೇವರ ಪಲ್ಲಕ್ಕಿಯನ್ನು ವಾದ್ಯ – ಮೇಳದೊಂದಿಗೆ ಹಾಗೂ ಸುಮಗಂಲಿಯರಿಂದೊಡಗೂಡಿ ಅರತಿ ದೇವಸ್ಥಾನ ತಲುಪುತ್ತದೆ.

ನಂತರ ದೇವಸ್ಥಾನದಲ್ಲಿರುವ ಮಾರುತೇಶ್ವರ, ಬಸವೇಶ್ವರ ಮೂರ್ತಿಗೆ ಪೂಜಾ ರಿಗಳು ನದಿಯಿಂದ ನೀರು ತಂದು ಪೂಜೆ ಸಲ್ಲಿಸುವರು. ನಂತರ ಡೊಳ್ಳಿನ ಓಲಗದೊಂದಿಗೆ ಹತಾರ ಶ್ಯಾವಿ 5 ಸುತ್ತು ನಡೆಯುವುದು. ಅಲ್ಲಿ ಮಾರುತೇಶ್ವರನ ಪೂಜಾ ರಿಗಳಿಂದ ಹತಾರದಿಂದ ಮೈಗೆ, ತೊಡಗೆ ಹೊಡೆದುಕೊಳ್ಳುವ ದೃಶ್ಯ ರೋಮಾಂಚನವಾದದ್ದು. ನಂತರ ಹಿಂದಿನ ಮಾರುತೇಶ್ವರನ ಪೂಜಾ ರಿಗಳ (ಪವಾಡ ಪುರುಷರು ಕಟ್ಟೆ) ಕಟ್ಟೆಗೆ ತೆರಳಿ ಪೂಜೆ ಸಲ್ಲಿಸಿ ಹತಾರ ಸೇವೆ ಕೈಕಾರ್ಯ ಮಾಡಿಕೊಳ್ಳುತ್ತಾರೆ.ತದ ನಂತರ ಕರಡಿ ಮುಜಲು ತಮ್ಮ ಓಣಿಗಳಿಗೆ ತೆರಳುತ್ತವೆ. ನಂತರ ಸಾಯಂಕಾಲ 4 ಘಂಟೆ ಸುಮಾರಿಗೆ ಕರಡಿ ಮಜಲು ದೇವಸ್ಥಾನಕ್ಕೆ ತಲುಪಿದ ನಂತರ ಮಾರುತೇಶ್ವರ ಪಲ್ಲಿಕ್ಕಿಯು ಪೂಜಾ ರಿಗಳ ಮನೆಗೆ ತೆರಳಿ

ಅಲ್ಲಿಂದ ಮಾಮಿನಮರತಪ್ಪ ಎಂಬ ಬೆಳ್ಳಿ ಮೂರ್ತಿಯನ್ನು ತಂದು ದೇವಾಲಯ ಪ್ರದಕ್ಷಿಣೆ ಹಾಕುವ ಮೂಲಕ 5 ಸುತ್ತು ಪೂಜಾ ರಿಗಳಿಂದ ಹತಾರ ಶ್ಯಾವಿ ನಡೆಯುತ್ತದೆ. ಆಗ ಭಕ್ತರಿಂದ ಸುತ್ತಗಾಯಿ ಒಡೆಯುವ ಕಾರ್ಯ ಕೂಡ ನಡೆಯುತ್ತದೆ. ಈ ಕಾಯಿ ಸೇವೆ ಕೂಡ ವಿಶಿಷ್ಟವಾಗಿದೆ. ಈ ಸಂದರ್ಭದಲ್ಲಿ ಭರಮದೇವರ ಕಟ್ಟೆಯ ಮೇಲೆ ಹೇಳಿಕೆಯಾಗಿರುತ್ತದೆ. ಈ ರೀತಿ ಕಿರೆಸೂರ, ಹಡಗಲಿ, ಹಡಗಲಿ ಗ್ರಾಮಗಳ ಭಕ್ತರ ಸಮ್ಮುಖವಲ್ಲದೇ ನಾಡಿನೆಲ್ಲೆಡೆಯ ಭಕ್ತರು ತಮ್ಮ ಆರಾಧ್ಯ ದೈವ ಮಾರುತೇಶ್ವರ ಜಾತ್ರೆ ಯಲ್ಲಿ ಪಾಲ್ಗೊಳ್ಳುವ ಮೂಲಕ ಜಾತ್ರೆ ಸಡಗರದಿಂದ ತಲತಲಾಂತರದಿಂದ ಜರುಗುತ್ತ ಬಂದಿದೆ.
-ವೈ.ಬಿ.ಕಡಕೋಳ (ಶಿಕ್ಷಕರು), ಮಾರುತಿ ಬಡಾವಣೆ, ಸಿಂದೋಗಿ ಕ್ರಾಸ್, ಮುನವಳ್ಳಿ-591117, ತಾಲೂಕ್= ಸವದತ್ತಿ ಜಿಲ್ಲೆಃ ಬೆಳಗಾವಿ 9449518400, 8147275277

 

► Follow us on –  Facebook / Twitter  / Google+

Facebook Comments

Sri Raghav

Admin