ದೇಗುಲದ ಹುಂಡಿ ಕಳವು

ಈ ಸುದ್ದಿಯನ್ನು ಶೇರ್ ಮಾಡಿ

ramapura

ರಾಮನಾಥಪುರ, ಸೆ.17- ರಾಮನಾಥಪುರದ ರಾಮನಾಥೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಳ್ಳರು ರಾತ್ರಿ ಗೋಲಕವನ್ನು ದೋಚಿರುವ ಘಟನೆ ನಡೆದಿದೆ.ಮುಜರಾಯಿ ವ್ಯಾಪ್ತಿಗೆ ಒಳಪಟ್ಟಿರುವ ದೇವಸ್ಥಾನ 800ವರ್ಷಗಳ ಇತಿಹಾಸ ಹೊಂದಿದ್ದು, ಅತ್ಯಂತ ಪುರಾಣ ಪ್ರಸಿದ್ಧ ಕ್ಷೇತ್ರವಾಗಿದೆ. ಪ್ರತಿ ನಿತ್ಯವೂ ನೂರಾರು ಭಕ್ತರು ಆಗಮಿಸಿ ಈಶ್ವರನನ್ನು ದರ್ಶಿಸುತ್ತಾರೆ. ಗೋಲುಕಕ್ಕೆ ಅಪಾರವಾದ ಹಣವನ್ನು ಹಾಕುತ್ತಾರೆ. ಜಾತ್ರಾಕಾಲದಲ್ಲಿ ಸಹಸ್ರಾರು ಭಕ್ತರ ಆಗಮನದಿಂದ ಮುಜರಾಯಿ ದೇವಸ್ಥಾನಕ್ಕೆ ಲಕ್ಷಾಂತರ ರೂ.ಗಳು ಸಂದಾಯವಾಗುತ್ತದೆ.ಇದನ್ನರಿತ ಕಳ್ಳರು ಇತ್ತೀಚೆಗೆ ದೇವಸ್ಥಾನದಲ್ಲಿ ತಮ್ಮ ಕೈಚಳಕ ತೋರಿಸುತ್ತಿದ್ದು ಈ ವರ್ಷದಲ್ಲಿ 2 ಬಾರಿ ದೇವಾಲಯದಲ್ಲಿ ಕಳ್ಳತನ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.ಕೊಣನೂರು ಪೊಲಿಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ

► Follow us on –  Facebook / Twitter  / Google+

 

 

Facebook Comments

Sri Raghav

Admin