ಮೇಯರ್ ಚುನಾವಣೆ : ವರಿಷ್ಠರ ನಡೆ ನೋಡಿ ಮುಂದಿನ ತೀರ್ಮಾನ

ಈ ಸುದ್ದಿಯನ್ನು ಶೇರ್ ಮಾಡಿ

mayor-seat

ಬೆಂಗಳೂರು, ಸೆ.17- ಬಿಬಿಎಂಪಿ ಮಹಾಸಮರದಲ್ಲಿ ಅಂತಿಮ ಪಂದ್ಯ ಆಡುವವರೇ ನಾವು. ಆದರೆ, ಅದಕ್ಕೂ ಮೊದಲು ವರಿಷ್ಠರ ನಡೆಗಳನ್ನು ಆಧರಿಸಿ ಮುಂದಿನ ಹೆಜ್ಜೆ ಇಡುತ್ತೇವೆ ಎಂದು ಶಾಸಕ ಜಮೀರ್ ಹೇಳಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಾಗಲಿ, ಎಚ್.ಡಿ.ಕುಮಾರಸ್ವಾಮಿಯವರಾಗಲಿ ಈ ವಿಷಯದಲ್ಲಿ ಈಗಲೂ ನಮ್ಮನ್ನು ಕರೆದರೆ ಮಾತನಾಡಲು ನಾವು ಸಿದ್ಧರಿದ್ದೇವೆ. ಕಾಂಗ್ರೆಸ್ ಜತೆ ಹೆಜ್ಜೆ ಹಾಕಿದರೆ ಜೆಡಿಎಸ್‌ನ ಜಾತ್ಯಾತೀತತೆಗೆ ಬೆಲೆ ಬರುತ್ತದೆ ಎಂದಿದ್ದಾರೆ. ಸದಸ್ಯರು ಕಾಂಗ್ರೆಸ್ ಜತೆ ಹೋಗಲು ಹೆಚ್ಚು ಒಲವು ವ್ಯಕ್ತಪಡಿಸಿದ್ದಾರೆ. ಕೇವಲ 14 ಮಂದಿಯನ್ನು ಇಟ್ಟುಕೊಂಡು ಮೇಯರ್ ಸ್ಥಾನ ಕೇಳುವುದು ಸರಿಯಲ್ಲ. ಏನೇ ಆದರೂ ಅಂತಿಮ ಹಣಾಹಣಿಯಲ್ಲಿ ನಮ್ಮದೇ ಆಟ ನಡೆಯೋದು ಎಂದು ಅಭಿಪ್ರಾಯಪಟ್ಟಿದ್ದಾರೆ.
ನಮ್ಮ ಸಮುದಾಯಕ್ಕೆ ಉಪಮೇಯರ್ ಸ್ಥಾನ ನೀಡುತ್ತೇವೆ ಎಂದು ಗೌಡರೇ ಹೇಳಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮುಸಲ್ಮಾನರ ವೋಟು ಬೇಕೆಂದರೆ ನಮಗೆ ಉಪಮೇಯರ್ ಸ್ಥಾನ ನೀಡಿ ಎಂದು ಕಾಂಗ್ರೆಸ್‌ಗೆ ಟಾಂಗ್ ನೀಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin