ವಿನಾಶಕಾರಿ ಚಂಡಮಾರುತದ ರುದ್ರನರ್ತನಕ್ಕೆ ತತ್ತರಿಸಿದ ಚೀನಾ ಮತ್ತು ತೈವಾನ್

ಈ ಸುದ್ದಿಯನ್ನು ಶೇರ್ ಮಾಡಿ

China

ಬೀಜಿಂಗ್/ತೈಪೆ, ಸೆ.17-ಚೀನಾ ಮತ್ತು ತೈವಾನ್ ಮೇಲೆ ಬಂದೆರಗಿದ ವಿನಾಶಕಾರಿ ಚಂಡಮಾರುತದಿಂದ ಅನೇಕರು ಮೃತಪಟ್ಟು, ಹಲವರು ಕಣ್ಮರೆಯಾಗಿದ್ದಾರೆ. ಚಂಡಮಾರುತದ ಪ್ರಚಂಡ ನರ್ತನದಿಂದ ಅಪಾರ ಹಾನಿ ಸಂಭವಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.  ಚೀನಾದ ಫುಜಿಯಾನ್ ಮತ್ತು ಝೆಜಿಯಾಂಗ್ ಪ್ರಾಂತ್ಯಗಳಲ್ಲಿ ಮೆರಂತಿ ಚಂಡಮಾರುತ ರೌದ್ರಾವತಾರ ತಾಳಿದೆ. ಭಾರೀ ಮಳೆ ಮತ್ತು ಪ್ರತಿ ಗಂಟೆಗೆ 200 ಕಿ.ಮೀ. ವೇಗದಲ್ಲಿ ಆರ್ಭಟಿಸುತ್ತಿರುವ ಚಂಡಮಾರುತದಿಂದ 15ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿ ಅನೇಕರು ಗಾಯಗೊಂಡಿದ್ದಾರೆ. ನಾಪತ್ತೆಯಾದವರ ಲೆಕ್ಕ ಸಿಗುತ್ತಿಲ್ಲ. ಕೆಲವೆಡೆ ಭೂಕುಸಿತ ಮತ್ತು ಮಣ್ಣು ಕುಸಿತ ಉಂಟಾಗಿದೆ. ಈ ದುರ್ಘಟನೆಯಲ್ಲಿ 872 ವರ್ಷದ ಪ್ರಾಚೀನ ಸೇತುವೆಯೊಂದು ಸಂಪೂರ್ಣ ನಾಶವಾಗಿ ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿದೆ.

ಈ ಎರಡೂ ಪ್ರಾಂತ್ಯಗಳಲ್ಲೂ ಸುಮಾರು 2,000 ಕೋಟಿ ರೂ.ಗಳಿಗೂ ಹೆಚ್ಚು ಹಾನಿ ಸಂಭವಿಸಿದೆ ಎಂದು ಅಂದಾಜು ಮಾಡಲಾಗಿದೆ. ನಾಲ್ಕು ಲಕ್ಷಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ವಿದ್ಯುತ್, ನೀರು ಮತ್ತು ರೈಲು, ವಾಹನಗಳ ಸಂಚಾರದಲ್ಲಿ ವ್ಯತ್ಯಯವಾಗಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಶಾಂಘೈ ನಗರದಲ್ಲೂ ಚಂಡಮಾರುತದಿಂದ ಜನರು ತತ್ತರಿಸಿದ್ದಾರೆ. ಪರಿಹಾರ ಕಾರ್ಯಗಳು ಸಮರೋಪಾದಿಯಲ್ಲಿ ಸಾಗಿದೆ.

ತೈಪೆ ವರದಿ:
ತೈವಾನ್‍ನ ಕೆಲವು ಜಿಲ್ಲೆಗಳಲ್ಲೂ ಚಂಡಮಾರುತದಿಂದ 10ಕ್ಕೂ ಹÉಚ್ಚು ಮಂದಿ ಬಲಿಯಾಗಿ ಕೆಲವರು ಕಣ್ಮರೆಯಾಗಿದ್ದಾರೆ. ಭಾರೀ ಮಳೆಯಿಂದಾಗಿ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಮೆರಂತಿ ಚಂಡಮಾರುತದ ಬೆನ್ನಲ್ಲೇ ಚೀನಾ ಮತ್ತು ತೈವಾನ್ ಮೇಲೆÉ ಮಲಾಗಾಸ್ ಎಂಬ ಮತ್ತೊಂದು ಚಂಡಮಾರುತ ಅಪ್ಪಳಿಸುವ ಆತಂಕವೂ ಎದುರಾಗಿದೆ.

Csd4AwlUAAALG1O

CsUi_MzXYAEWESf

CsUjABbWAAA3WC7

CsUjAP8WAAANE6F

proxy (2)

 

► Follow us on –  Facebook / Twitter  / Google+

Facebook Comments

Sri Raghav

Admin