ಅಲಿಯಾ ಜೊತೆ ನಟಿಸಲೊಲ್ಲೆ ಎಂದ ಸೀರಿಯಲ್ ಕಿಸ್ಸರ್ ಹಶ್ಮಿ ..!

ಈ ಸುದ್ದಿಯನ್ನು ಶೇರ್ ಮಾಡಿ

alia-bhat

ಬಾಲಿವುಡ್‍ನ ಪ್ರತಿಭಾವಂತ ನಟಿ ಅಲಿಯಾ ಭಟ್ ಜೊತೆ ನಟಿಸಲು ನಟರು ಇಲ್ಲ ಎನ್ನುವುದಿಲ್ಲ. ಆದರೆ ಇಲ್ಲೊಬ್ಬ ಅಭಿನೇತ ಅಲಿಯಾ ಜೊತೆ ನಟಿಸಲೊಲ್ಲೆ ಎಂದಿದ್ದಾನೆ..!? ಹಾಗಾದರೆ ಯಾರು ಆ ನಟ ಯಾರು ? ಒಲ್ಲೆ ಎನ್ನಲು ಏಕು ಕಾರಣ? ಬಿ-ಟೌನ್‍ನಲ್ಲಿ ಜನಪ್ರಿಯ ತಾರೆಯರಿದ್ದಾರೆ. ಹಾಗೆಯೇ ಅವರು ಒಂದೇ ದೊಡ್ಡ ಕುಟುಂಬದಿಂದಲೂ ಬಂದವರಾಗಿರುತ್ತಾರೆ. ಕೆಲವು ಸಂದರ್ಭದಲ್ಲಿ ಅವರು ಒಟ್ಟಿಗೆ ನಟಿಸಲು ಒಲ್ಲೆ ಎನ್ನುತ್ತಾರೆ. ಅಲಿಯಾ ಭಟ್-ಎಮ್ರಾನ್ ಹಶ್ಮಿ ವಿಷಯದಲ್ಲಿ ಆಗಿರುವುದು ಇದೆ.

ಅಲಿಯಾ ಭಟ್ ಜೊತೆ ರೋಮ್ಯಾಂಟಿಕ್ ಕಾಮಿಡಿ ಸಿನಿಮಾದಲ್ಲಿ ನಟಿಸಲು ಸರಣಿ ಚುಂಬನ ನಟ ಹಶ್ಮಿಗೆ ಆಫರ್ ನೀಡಲಾಗಿತ್ತು. ಆದರೆ ಆತ ಈ ಆಫರ್‍ನನ್ನು ಸಾರಸಗಟಾಗಿ ತಿರಸ್ಕರಿಸಿದ್ದಾನೆ. ಇದಕ್ಕೆ ಬಲವಾದ ಕಾರಣವೂ ಇತ್ತು. ಅಲಿಯಾ ವರಸೆಯಲ್ಲಿ ಹಶ್ಮಿಗೆ ಸೋದರಿಯಾಗಿಬೇಕು. ಹೀಗಿರುವಾಗ ನಟಿಸಲು ಹೇಗೆ ಸಾಧ್ಯ ? ಈ ಆಫರ್ ನೀಡಿದ ನಿರ್ಮಾಪಕರ ಮೇಲೆ ಹಶ್ಮಿ ಬೇಸರಗೊಂಡಿದ್ದಾನೆ. ತನ್ನ ಸಹೋದರಿ ಜೊತೆ ರೋಮ್ಯಾಂಟಿಕ್ ಸಿನಿಮಾದಲ್ಲಿ ನಟಿಸಲು ಆಫರ್ ನೀಡಲು ಅವರಿಗೆ ಹೇಗೆ ಮನಸ್ಸು ಬಂತು ಎಂದು ಅಸಮಾಧಾನಗೊಂಡಿದ್ದಾನೆ ಎಂದು ಪಿಂಕ್‍ವಿಲ್ಲಾ ಡಾಟ್ ಕಾಮ್ ವರದಿ ಮಾಡಿದೆ. ಈ ಹಿಂದೆ ಇದೇ ಕಾರಣಕ್ಕೆ ಅಣ್ಣನ ಮಗಳಾದ ಸುಹಾಸಿನಿ ಜೊತೆ ಪ್ರೇಮ ಕಥೆಯುಳ್ಳ ಸಿನಿಮಾದಲ್ಲಿ ನಟಿಸಲು ಕಮಲ್ ಹಾಸನ್ ಒಲ್ಲೆ ಎಂದಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin