ನ್ಯೂಯಾರ್ಕ್‍ನಲ್ಲಿ ‘ಉಪ್ಪು ಹುಳಿ ಖಾರ’

ಈ ಸುದ್ದಿಯನ್ನು ಶೇರ್ ಮಾಡಿ

Uppu-1

ಅಮೆರಿಕ ದೇಶದ ಅತ್ಯಂತ ಜನಪ್ರಿಯ ನಗರ ನ್ಯೂ ಯಾರ್ಕ್ ಸಿಟಿ ಸುತ್ತ ಮುತ್ತ ಇಮ್ರಾನ್ ಸರ್ದಾರಿಯ ನಿರ್ದೇಶನದ ಎರಡನೇ ಚಿತ್ರ ¾ಉಪ್ಪು ಹುಳಿ ಖಾರ ತಂಡ ಹಾಡೊಂದನ್ನು ಚಿತ್ರೀಕರಣ ಮಾಡಿಕೊಂಡು ಬಂದಿದೆ.ಟೈಮ್ಸ್ ಸ್ಕ್ವೇರ್, ಲೋವರ್ ಮ್ಯಾನ್ ಹಟನ್, ಪ್ಯಾಟರಿ ಪಾರ್ಕ್, ಸ್ಕೈ ಲೈನ್ ಹೊಟೇಲ್ ಬಳಿ, ಪಿಯರ್ ಲೆವೆಲ್, ಬ್ರೂಕ್ ಲಿನ್ ಬ್ರಿಡ್ಜ್ ಸುತ್ತಲೂ ಪ್ರಜ್ವಲ್ ಪೈ ಅವರು ರಾಗ ಸಂಯೋಜನೆ ಮಾಡಿರುವ ರೋಮಿಯೊ…ರೋಮಿಯೊ…. ಎಂಬ ಪಿ ಅರ್ಜುನ್ ರಚಿಸಿರುವ ಹಾಡನ್ನು ನಾಯಕಿ ಅನುಶ್ರೀ ಹಾಗೂ ಶರತ್ ಅಭಿನಯದಲ್ಲಿ ಇಮ್ರಾನ್ ಸರ್ದಾರಿಯ ಅವರ ನಿರ್ದೇಶನ ಹಾಗೂ ನೃತ್ಯ ನಿರ್ದೇಶನದ ಈ ಹಾಡನ್ನು ಮೂರು ದಿವಸಗಳಲ್ಲಿ ಚಿತ್ರೀಕರಣ ಮಾಡಿದವರು ರಂಗಿತರಂಗ ಛಾಯಾಗ್ರಾಹಕ ಲಾನ್ಸ್ ಕಪ್ಲಾನ್. ಕನ್ನಡ ಸಿನಿಮಾಕ್ಕೆ ಛಾಯಾಗ್ರಹಣ ಮಾಡಿದ ಅನುಭವ ಇರುವುದರಿಂದ ಲಾನ್ಸ್ ಕಪ್ಲಾನ್ ಮಲ್ಟಿ ಟಾಸ್ಕಿಂಗ್ ವ್ಯಕ್ತಿ ಜೊತೆ ಕೆಲಸ ಸುಲಭ ಆಯಿತು ಎಂದು ಇಮ್ರಾನ್ ಸರ್ದಾರಿಯ ನೆನೆಯುತ್ತಾರೆ.

Uppu-3

ತೇಜಸ್ವಿನಿ ಎಂಟರ್‍ಪ್ರೈಸಸ್ ಅಡಿಯಲ್ಲಿ ರಮೇಶ್ ರೆಡ್ಡಿ (ನಂಗ್ಲಿ) ನಿರ್ಮಾಣ ಮಾಡುತ್ತಿರುವ ¾ಉಪ್ಪು ಹುಳಿ ಖಾರ ಸಿನಿಮಾದ ಬಹುತೇಕ ಛಾಯಾಗ್ರಾಹಣ ನಿರಂಜನ್ ಬಾಬು ಅವರದು. ಇಮ್ರಾನ್ ಸರ್ದಾರಿಯ ಸದ್ಯಕ್ಕೆ ಮಾತಿನ ಭಾಗದ ಚಿತ್ರೀಕರಣ ಮಾಡಿದ್ದಾರೆ. ಇನ್ನು ಮೂರು ದಿವಸಗಳ ಕ್ಲೈಮ್ಯಾಕ್ಸ್, ಹಾಗೂ ಮೂರು ಹಾಡುಗಳನ್ನು ಮಾತ್ರ ಚಿತ್ರೀಕರಣ ಮಾಡಬೇಕಿದೆ.ಉಪ್ಪು ಹುಳಿ ಖಾರ ಚಿತ್ರಕ್ಕೆ ಮೂವರು ಸಂಗೀತ ನಿರ್ದೇಶಕರುಗಳಿದ್ದಾರೆ. ಜೂಡೋ ಸ್ಯಾಂಡಿ ಅವರು ಮೂರು ಹಾಡುಗಳನ್ನು, ಕಿಶೋರ್ ಹಾಗೂ ಪ್ರಜ್ವಲ್ ಪೈ ಅವರು ತಲಾ ಒಂದು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಪ್ರಜ್ವಲ್ ಪೈ ಅವರು ನಿರ್ದೇಶಕ ಇಮ್ರಾನ್ ಸರ್ದಾರಿಯ ಅವರ ಫೇಸ್ ಬುಕ್ ಸ್ನೇಹಿತರು. ಹೊಸ ರಾಗ ಸಂಯೋಜನೆ ಮಾಡಿದಾಗ ಇವರಿಗೆ ಕಳುಹಿಸುತ್ತಾ ಇದ್ದ ಇವರು ಈ ಸಿನಿಮಾಕ್ಕೆ ಒಂದು ಹಾಡಿಗೆ ಆಯ್ಕೆ ಆದರಂತೆ.ತಾರಾಗಣದಲ್ಲಿ ಮಾಲಾಶ್ರೀ ಅವರ ಸ್ಪೆಷಲ್ ಪಾತ್ರದ ಜೊತೆಗೆ ಅನುಶ್ರೀ, ಜಯಶ್ರೀ, ಮಾಷ (ಉಕ್ರೈನ್ ದೇಶದ ನಟಿ), ಶರತ್, ಧನಂಜಯ್, ಶಶಿ ಹಾಗೂ ಇನ್ನಿತರ ಹೊಸಬರ ದಂಡೇ ಇದೆ.

Uppu-4

Uppu-5

Uppu-6

Uppu-2

 

► Follow us on –  Facebook / Twitter  / Google+

 

Facebook Comments

Sri Raghav

Admin