ರಿಯಲ್ ಸ್ಟಾರ್ @48

ಈ ಸುದ್ದಿಯನ್ನು ಶೇರ್ ಮಾಡಿ

u1
ಬೆಂಗಳೂರು ಸೆ.18: ಸ್ಯಾಂಡಲ್ ವುಡ್ ಬಹುಬೇಡಿಕೆ ನಟರಲ್ಲೊಬ್ಬರಾದ ಉಪೇಂದ್ರ ಇಂದು ತಮ್ಮ 48 ನೇ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಂಡಿದ್ದಾರೆ. ಕಾವೇರಿ ನದಿ ನೀರಿನ ಹೋರಾಟದ ಹಿನ್ನಲೆಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುವುದಾಗಿ ರಿಯಲ್ ಸ್ಟಾರ್ ಉಪೇಂದ್ರ ಹೇಳಿದ್ದರಾದರೂ, ಅಭಿಮಾನಿಗಳ ಸಂಭ್ರಮ ಕಡಿಮೆ ಆಗಿಲ್ಲ. ಕತ್ರಿಗುಪ್ಪೆಯಲ್ಲಿಯಲ್ಲಿರುವ ಉಪೇಂದ್ರ ನಿವಾಸದ ಬಳಿ ರಾತ್ರಿಯಿಂದಲೇ ಅಭಿಮಾನಿಗಳು ನೆರೆದಿದ್ದರು. ಅಭಿಮಾನಿಗಳು ತಂದಿದ್ದ ಕೇಕ್ ಕತ್ತರಿಸಿದ ಉಪ್ಪಿ, ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡರು. ಅಭಿಮಾನಿಗಳ ಸಂಭ್ರಮ ಜೋರಾಗಿತ್ತು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿ, ನೆಚ್ಚಿನ ನಟನ ಚಿತ್ರಗಳ ಘೋಷಣೆ ಕೂಗಿದರು. ಭಾರೀ ಅಭಿಮಾನಿಗಳು ನೆರೆದಿದ್ದರಿಂದ ನೂಕುನುಗ್ಗಲು ಉಂಟಾಗಿತ್ತು.

u2

u3

► Follow us on –  Facebook / Twitter  / Google+

Facebook Comments

Sri Raghav

Admin