ಶಾಪಿಂಗ್ ಮಾಲ್‍’ನಲ್ಲಿ ಚಾಕುವಿನಿಂದ 8 ಜನರಿಗೆ ಇರಿದ ದುಷ್ಕರ್ಮಿ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Stabbing

ಮಿನ್ನೆಸೋಟಾ, ಸೆ.18-ಅಮೆರಿಕದ ಮಿನ್ನೆಸೋಟಾದ ಶಾಪಿಂಗ್ ಮಾಲ್‍ವೊಂದರಲ್ಲಿ ಎಂಟು ಜನರಿಗೆ ಚಾಕುವಿನಿಂದ ಇರಿದು ತೀವ್ರ ಗಾಯಗೊಳಿಸಿದ ವ್ಯಕ್ತಿಯನ್ನು ಪೊಲೀಸ್ ಅಧಿಕಾರಿಯೊಬ್ಬರು ಗುಂಡಿಟ್ಟು ಕೊಂದಿದ್ದಾರೆ. ಮಿನ್ನೆಸೋಟಾದ ಸೆಂಟ್ ಕ್ಲೌಡ್ ಪ್ರದೇಶದಲ್ಲಿನ ಮಾಲ್‍ವೊಂದಕ್ಕೆ ನುಗ್ಗಿದ್ದ ಈ ವ್ಯಕ್ತಿ, ಮುಸ್ಲಿಂ ಪರ ಘೋಷಣೆಗಳನ್ನು ಕೂಗುತ್ತಾ ಎಂಟು ಮಂದಿಗೆ ಚಾಕುವಿನಿಂದ ಇರಿದಿದ್ದ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್ ಅಧಿಕಾರಿ ಆತನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ಮುಖ್ಯಸ್ಥ ಬ್ಲೇರ್ ಆ್ಯಂಡರ್‍ಸನ್ ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin