ಇಂದು ‘ಫೈರಿಂಗ್ ಸ್ಟಾರ್’ ಹುಚ್ಚ ವೆಂಕಟ್ ಬರ್ತ್ ಡೇ

ಈ ಸುದ್ದಿಯನ್ನು ಶೇರ್ ಮಾಡಿ

huchcha-venkat

ಬೆಂಗಳೂರು ಸೆ.19 : ನಿನ್ನೆಯಷ್ಟೇ ಸ್ಯಾಂಡಲ್‌ವುಡ್‌ ನಲ್ಲಿ ಸಾಹಸಸಿಂಹ ವಿಷ್ಣುವರ್ಧನ್ , ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಟಿ ಶ್ರುತಿ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿದ ಬೆನ್ನಲ್ಲೇ ಇಂದು ವಿಭಿನ್ನ ಡೈಲಾಗ್‌ ಗಳ ಮೂಲಕ ಕರ್ನಾಟಕದಲ್ಲಿ ಮನೆಮಾತಾಗಿರುವ ‘ಫೈರಿಂಗ್’ ಸ್ಟಾರ್ ಹುಚ್ಚ ವೆಂಕಟ್ ತಮ್ಮ ಬರ್ತ್ ಡೇ ಆಚರಿಸಿಕೊಳ್ಳುತ್ತಿದ್ದಾರೆ.  ಬಿಗ್ ಬಾಸ್‌ ಮನೆಯಲ್ಲಿ ತನ್ನದೆ ಶೈಲಿಯ ಡೈಲಾಗ್ ಹರಿಬಿಡುತ್ತ ಕ್ಷಣ ಕಾಲದಲ್ಲಿ ಅಭಿಮಾನಿಗಳನ್ನ ಸಂಪಾದಿಸಿದ್ದ ವೆಂಕಟ್, ತಮ್ಮ ಅಭಿಮಾನಿಗಳಿಗಾಗಿ ಹೊಸ ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಚಿತ್ರದ ನಿರ್ಮಾಣ, ನಿರ್ದೇಶನ ಎರಡೂ ವೆಂಕಟ್‌ರದ್ದೇ ಆಗಿರಲಿದೆಯಂತೆ. ಸಿನಿಮಾದ ಹೆಸರು ಸೇರಿದಂತೆ ಹೆಚ್ಚಿನ ವಿವರಗಳು ಬಹಿರಂಗಗೊಂಡಿಲ್ಲ.

► Follow us on –  Facebook / Twitter  / Google+

Facebook Comments

Sri Raghav

Admin