ಔಷಧಿ ಸಿಂಪಡಿಸಿ ವಿಚಿತ್ರ ಸೊಳ್ಳೆಗಳ ನಿಯಂತ್ರಿಸಿ

ಈ ಸುದ್ದಿಯನ್ನು ಶೇರ್ ಮಾಡಿ

vijayapura--hospital

ವಿಜಯಪುರ,ಸೆ.19- ಪಟ್ಟಣದೆಲ್ಲೆಡೆ ಶುಚಿತ್ವ ಹಾಗೂ ನೈರ್ಮಲ್ಯತೆ ಕಾಪಾಡಲಾಗದೇ, ವಿಚಿತ್ರ ಸೊಳ್ಳೆಗಳು ಉತ್ಪತ್ತಿಯಾಗಿ ಅದರಿಂದ ಕಡಿತಕ್ಕೊಳಗಾದ ಸಾವಿರಾರು ಮಂದಿ ರೋಗಿಗಳು ಪ್ರತಿ ದಿನ ಆಸ್ಪತ್ರೆ ಬಳಿ ಸಾವಿರಾರು ರೂ ವ್ಯಯಿಸುತ್ತಾ, ಓಡಾಡಬೇಕಾಗಿದೆ. ಪಟ್ಟಣದ ಬಹಳಷ್ಟು ಕಡೆ ಚರಂಡಿಗಳಲ್ಲಿ ತಿಂಗಳುಗಟ್ಟಲೇ ಕಳೆದರೂ ಚರಂಡಿಯಲ್ಲಿನ ಗಲೀಜನ್ನು ತೆರವುಗೊಳಿಸದೇ, ಸೊಳ್ಳೆಗಳ ಔಷಧಿಯನ್ನು ವ್ಯಾಪಕವಾಗಿ ಸಿಂಪಡಿಸದ ಕಾರಣ ಪಟ್ಟಣದಲ್ಲಿ ಗುಯ್‍ಗುಡದ ವಿಚಿತ್ರ ಸೊಳ್ಳೆಗಳು ವ್ಯಾಪಿಸಿದ್ದು, ಹಗಲು ಹೊತ್ತಿನಲ್ಲಿಯೇ ಚರ್ಮ ಕಿತ್ತು ಬರುವಂತೆ ಕೆರೆತ ಉಂಟಾಗುವಂತಹ ಸೊಳ್ಳೆ ಕಡಿತ ಉಂಟಾಗುತ್ತಲಿದೆ.

18-vij-7-sankramika roga

ಪಟ್ಟಣದ 6 ನೇ ವಾರ್ಡ್‍ನ ನಿವಾಸಿ ಡಿ.ಸಿ.ಶಂಕರ್ ಮಾತನಾಡಿ, ವಾರ್ಡ್‍ನಲ್ಲಿ ಚರಂಡಿಗಳಲ್ಲಿನ ಕೊಳಚೆ ತೆಗೆಯಲು ತಿಂಗಳುಗಳಾದರೂ ಪುರಸಭೆಯವರು ಕ್ರಮ ಕೈಗೊಳ್ಳುವುದಿಲ್ಲ. ಸದಸ್ಯರ ಮನೆಯ ಮುಂದೆಯೇ ಕೊಚ್ಚೆ ತುಂಬಿದ ಚರಂಡಿಯಿಂದ ಸುತ್ತಮುತ್ತಲ ಹೆಂಗಸರು, ಮಕ್ಕಳು, ವೃದ್ದರು ಆಸ್ಪತ್ರೆಯ ಪಾಲಾಗುತ್ತಿರುವರೆಂದು ತಿಳಿಸಿದರು. ಪ್ರತಿ ದಿನ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳ ಸುಮಾರು 400 ಕ್ಕೂ ಹೆಚ್ಚು ರೋಗಿಗಳು, 100 ಕ್ಕೂ ಹೆಚ್ಚು ಮಕ್ಕಳು, ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ, ಖಾಸಗಿ ನರ್ಸಿಂಗ್ ಹೋಂ ಹಾಗೂ ಶಾಪ್‍ಗಳಿಗೆ ಹೋಗುವುದರೊಂದಿಗೆ ಹೆಚ್ಚಿನ ಚಿಕಿತ್ಸೆಗೆ ದೇವನಹಳ್ಳಿ ಹಾಗೂ ಬೆಂಗಳೂರುಗಳಿಗೂ ನಿತ್ಯ ಹೋಗುವಂತಾಗಿದೆ.

18-vij-6a-sankramika roga
ಸಿಬ್ಬಂದಿ ಕೊರತೆ:
ಪಟ್ಟಣದ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅವಶ್ಯಕ ವೈದ್ಯರುಗಳಿದ್ದರೂ ಸಹ ಅತಿ ಹೆಚ್ಚಿನ ರೋಗಿಗಳ ಒತ್ತಡ ನಿಭಾಯಿಸಲು ಕಷ್ಟಕರವಾಗುತ್ತಿದ್ದು, 10 ಮಂದಿ ಶುಶ್ರೂಕಿಯರ ಪೈಕಿ ಒಬ್ಬರು ಮಾತ್ರ ಪರ್ಮನೆಂಟ್ ಆಗಿದ್ದು, ಇನ್ನೊಬ್ಬರನ್ನು ಚನ್ನರಾಯಪಟ್ಟಣದಿಂದ ಡೆಪ್ಯೂಟ್ ಮಾಡಿಕೊಂಡಿದ್ದು, ಒಪ್ಪಂದದ ಮೇರೆಗೆ ಇಬ್ಬರು ಕಾರ್ಯನಿರ್ವಹಿಸುತ್ತಿದ್ದು, ಇಷ್ಟೊಂದು ಮಂದಿ ರೋಗಿಗಳನ್ನು ಸುಧಾರಿಸಲು ಆಗುತ್ತಿಲ್ಲ.
ಡಿ.ದರ್ಜೆ ನೌಕರರು ಕಡಿಮೆಯಿದ್ದರೂ ಸಹ ಹೆಚ್ಚಿನ ಕೆಲಸ ನಿರ್ವಹಿಸುವುದರೊಂದಿಗೆ ಆಸ್ಪತ್ರೆ ಆವರಣದಲ್ಲಿ ಅತ್ಯುತ್ತಮ ಕೈತೋಟ ನಿರ್ಮಿಸುತ್ತಿರುವುದು ಮೆಚ್ಚತಕ್ಕಂತಹ ವಿಷಯವಾಗಿದೆ.

 

18-vij-6-sankramika roga
ಇಂತಹ ಪರಿಸ್ಥಿತಿಯಲ್ಲಿ ಪುರಸಭೆಯವರು ಸ್ವಚ್ಚತೆ ಹಾಗೂ ನೈರ್ಮಲ್ಯ ಕಾಪಾಡಲು ತೀವ್ರ ಗತಿಯಲ್ಲಿ ಕ್ರಮ ಕೈಗೊಳ್ಳಬೇಕಾಗಿದ್ದು, ಸಾರ್ವಜನಿಕರೂ ಸಹ ತಮ್ಮ ಮನೆಗಳ ಅಕ್ಕ-ಪಕ್ಕದ ವಾತಾವರಣಗಳಲ್ಲಿ ಎಲ್ಲಿಯೂ ಮಳೆ ನೀರು ನಿಲ್ಲದಂತೆ ಟೈರು, ತೆಂಗಿನ ಚಿಪ್ಪುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಂಡು, ಸೊಳ್ಳೆಗಳ ಬೆಳವಣಿಗೆಗೆ ತಡೆಯೊಡ್ಡುವುದರೊಂದಿಗೆ ಕೈತುಂಬಿದ ಷರ್ಟ್ ಹಾಗೂ ಪ್ಯಾಂಟುಗಳನ್ನು ಧರಿಸುವುದು ಹಾಗೂ ಸೊಳ್ಳೆ ಪರದೆಗಳನ್ನು ಬಳಸುವುದು, ಮನೆ, ಕಿಟಕಿ ಬಾಗಿಲುಗಳಿಗೆ ಸೊಳ್ಳೆ ಪ್ರವೇಶಿಸದಂತೆ ಜಾಲರಿ ಅಳವಡಿಸಲು ಮುತುವರ್ಜಿ ವಹಿಸುವುದು ಅಗತ್ಯವಾಗಿದೆ.

 

► Follow us on –  Facebook / Twitter  / Google+

 

Facebook Comments

Sri Raghav

Admin