ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ

ಈ ಸುದ್ದಿಯನ್ನು ಶೇರ್ ಮಾಡಿ

ಕೊಳ್ಳೇಗಾಲ, ಸೆ.19– ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹವೊಂದು ತಾಲ್ಲೂಕಿನ ಚಿಲಕವಾಡಿ ಹಾಗೂ ಟಗರಪುರ ಮುಖ್ಯರಸ್ತೆಯಲ್ಲಿ ಪತ್ತೆಯಾಗಿದೆ.ಸುಮಾರು 55 ವರ್ಷದ ಅಪರಿಚಿತ ಗಂಡಸಿನ ಮೃತದೇಹ ಟಗರಪುರ ಮುಖ್ಯರಸ್ತೆಯ ನಡುವಿನ 41 ನೇ ನಾಲೆಯಲ್ಲಿ ಸೇತುವೆಯ ಕೆಳ ಭಾಗದಲ್ಲಿ ಪತ್ತೆಯಾಗಿದೆ.ಮೂಗೂರು ಉಪವಿಭಾಗದ ನೀರಾವರಿ ಇಲಾಖೆಯ ಇಂಜಿನಿಯರ್ ನಟರಾಜು ದೂರು ದಾಖಲಿಸಿಕೊಂಡು ಕೊಂಡು ಗ್ರಾಮಾಂತರ ಠಾಣೆ ಎಎಸ್‍ಐ ಪುಟ್ಟಸ್ವಾಮಿ ಹಾಗೂ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಕೊಳೆತ ಸ್ಥಿತಿಯಲ್ಲಿದ್ದ ಕಾರಣ ನಾಲೆಯ ಬಳಿಯಲ್ಲಿ ಚಿಲಕವಾಡಿ ಪ್ರಾಥಮಿಕ ಡಾ.ಪೂರ್ಣಿಮ ಅವರಿಂದ ಶವ ಪರೀಕ್ಷೆ ನಡೆಸಿ ಶವದ ವಾರಸುದಾರರು ಇಲ್ಲದ ಕಾರಣದಿಂದಾಗಿ ಪೊಲೀಸರೆ ನಾಲೆಯ ಪಕ್ಕದಲ್ಲೇ ಅಂತ್ಯ ಸಂಸ್ಕಾರ ನಡೆಸಿದರು. ಎಎಸ್‍ಐ ಪುಟ್ಟಸ್ವಾಮಿ, ಮುಖ್ಯಪೇದೆ ರಘು, ಪೇದೆಗಳಾದ ಸಿದ್ದರಾಜು, ಮಹೇಂದ್ರ, ಚಾಲಕ ಶಂಕರ್ ಇದ್ದರು.

 

► Follow us on –  Facebook / Twitter  / Google+

 

Facebook Comments

Sri Raghav

Admin