70 ಕಾರುಗಳನ್ನು ಧ್ವಂಸಗೊಳಿಸದ ಉದ್ರಿಕ್ತರ ಗುಂಪು

ಈ ಸುದ್ದಿಯನ್ನು ಶೇರ್ ಮಾಡಿ

Cars

ಕೊಲ್ಕತ, ಸೆ.19- ಕಾರು ಚಾಲಕನೊಬ್ಬ ಯುವಕನ ಸಾವಿಗೆ ಕಾರಣವಾಗಿದ್ದರಿಂದ ಕೆರಳಿದ ಉದ್ರಿಕ್ತ ಗುಂಪೊಂದು 70ಕ್ಕೂ ಹೆಚ್ಚು ಕಾರುಗಳನ್ನು ಧ್ವಂಸಗೊಳಿಸಿದ ಘಟನೆ ದಕ್ಷಿಣ ಕೊಲ್ಕತದಲ್ಲಿ ನಡೆದಿದೆ. ನಿನ್ನೆ ಮುಂಜಾನೆ ಹಾಜ್ರ ಪ್ರದೇಶದಲ್ಲಿ ವೇಗವಾಗಿ ಬಂದ ಮರ್ಸಿಡಿಸ್ ಬೆಂಜ್ ಕಾರೊಂದು ಸ್ಕೂಟಿಗೆ ಡಿಕ್ಕಿ ಹೊಡೆಯಿತು. ಈ ಅಪಘಾತದಲ್ಲಿ 24 ವರ್ಷದ ಯುವಕನೊಬ್ಬ ಸಾವಿಗೀಡಾಗಿ, ದ್ವಿಚಕ್ರವಾಹನದಲ್ಲಿದ್ದ ಇನ್ನಿಬ್ಬರಿಗೆ ತೀವ್ರ ಗಾಯಗಳಾದವು. ಸುದ್ದಿ ತಿಳಿಯುತ್ತಿದ್ದಂತೆ ಕಲ್ಲು, ಕೋಲು ಮತ್ತು ಮಾರಕಾಸ್ತ್ರಗಳನ್ನು ಹೊಂದಿದ್ದ 100ಕ್ಕೂ ಹೆಚ್ಚು ಜನರಿದ್ದ ಉದ್ರಿಕ ಗುಂಪೊಂದು ಬೆಳಿಗ್ಗೆಯೇ ದಕ್ಷಿಣ ಕೊಲ್ಕತದ ಬಹುಮಹಡಿ ಪೋ ರ್ಟ್ ಓಯಾಸಿಸ್ ಕಾಂಪ್ಲೆಕ್ಸ್‍ಗೆ ನುಗ್ಗಿ ಅಲ್ಲಿನ ನಿವಾಸಿಗಳಿಗೆ ಕಾರಿನ ಬಗ್ಗೆ ವಿಚಾರಿಸಿತು.

ಈ ಸಂದರ್ಭದಲ್ಲಿ ಕೆರಳಿದ ಯುವಕರು ಕಾಂಪ್ಲೆಕ್ಸ್ ಬಳಿ ನಿಲುಗಡೆ ಮಾಡಲಾಗಿದ್ದ 70ಕ್ಕೂ ಹೆಚ್ಚಿನ ಕಾರುಗಳನ್ನು ಧ್ವಂಸಗೊಳಿಸಿದರು. ಕೆಲವು ದುಬಾರಿ ವಿದೇಶಿ ಕಾರುಗಳಿಗೆ ಬೆಂಕಿ ಹಚ್ಚಲು ಯತ್ನಿಸಿದರು. ಭಯದಿಂದ ಕಂಗಾಲಾದ ಕೆಲವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು.  ಪರಿಸ್ಥಿತಿ ತಿಳಿಗೊಂಡಿತಾದರೂ, ಉದ್ರಿಕ್ತರು ನಿನ್ನೆ ರಾತ್ರಿ ಮತ್ತೆ ಕಾಂಪ್ಲೆಕ್ಸ್ ಬಳಿ ಬಂದು ಅಪಘಾತಕ್ಕೆ ಕಾರಣನಾದ ವ್ಯಕ್ತಿಯನ್ನು ತಮಗೆ ಒಪ್ಪಿಸುವಂತೆ ಪಟ್ಟುಹಿಡಿದರು. ಆ ಚಾಲಕ ಈ ಕಾಂಪ್ಲೆಕ್ಸ್‍ಗೆ ಸೇರಿದವನಲ್ಲ ಎಂದು ತಿಳಿದ ನಂತರ ಪ್ರತಿಭಟನಾಕಾರರು ಹಿಂದಿರುಗಿದರು. ಅಪಘಾತ ಮತ್ತು ಗಲಭೆ ಪ್ರಕರಣಗಳು ದಾಖಲಾಗಿದ್ದು ತನಿಖೆ ಮುಂದುವರಿಯುತ್ತಿದೆ.

► Follow us on –  Facebook / Twitter  / Google+

Facebook Comments

Sri Raghav

Admin