ಆನೇಕಲ್ ತಾಲ್ಲೂಕು ಹಾಲನಾಯಕನಹಳ್ಳಿ ಗ್ರಾ.ಪಂ.ಉಪಾಧ್ಯಕ್ಷನ ಬರ್ಬರ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Murder-3

ಬೆಂಗಳೂರು, ಸೆ.20– ನಗರದ ಎಚ್‍ಎಸ್‍ಆರ್ ಲೇಔಟ್‍ನ ಅಮೃತಾ ಕಾಲೇಜಿನ ಬಳಿ ಅಪರಿಚಿತ ದುಷ್ಕರ್ಮಿಗಳು ಆನೇಕಲ್ ತಾಲ್ಲೂಕು ಹಾಲನಾಯಕನಹಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಮೃತನನ್ನು ಕೃಷ್ಣಾ ನಗರದ ನಿವಾಸಿ ಮಂಜುನಾಥ್ (37) ಎಂದು ತಿಳಿದು ಬಂದಿದೆ. ಲೇವಾದೇವಿ ಸೇರಿದಂತೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಮಂಜುನಾಥ್ ಇಂದು ಬೆಳಗ್ಗೆ 6 ಗಂಟೆ ಸಂದರ್ಭದಲ್ಲಿ ವಾಯು ವಿಹಾರಕ್ಕೆ ಮನೆಯಿಂದ ತೆರಳಿದ್ದರು. ಸರ್ಜಾಪುರ ರಸ್ತೆ ಬಳಿ ಬರುವ ಎ.ಕೃಷ್ಣಾನಂದ ನಗರದ ಬಳಿ ಏಕಾಏಕಿ ಎದುರಾದ ನಾಲ್ಕೈದು ಮಂದಿ ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಎಚ್.ಎಸ್.ಆರ್.ಲೇ ಔಟ್ ಪೊಲೀಸರು ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳ್ಳಂ ಬೆಳಗ್ಗೆ ಈ ಘಟನೆ ನಡೆದಿರುವುದರಿಂದ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.

Murder-1

Murder-2

► Follow us on –  Facebook / Twitter  / Google+

Facebook Comments

Sri Raghav

Admin