‘ಇಸ್ ಇಂಡಿಯನ್ ಕೊ ನಿಖಾಲೋ” : ಭಾರತೀಯ ಪತ್ರಕರ್ತರನ್ನು ಹೊರಗಟ್ಟಿದ ಪಾಕ್ ವಿದೇಶಾಂಗ ಕಾರ್ಯದರ್ಶಿ

ಈ ಸುದ್ದಿಯನ್ನು ಶೇರ್ ಮಾಡಿ

Ind

ನ್ಯೂಯಾರ್ಕ್, ಸೆ.20- ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಉರಿ ಸೆಕ್ಟರ್‍ನ ಸೇನಾನೆಲೆಗಳ ಮೇಲೆ ಉಗ್ರದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನ ಮತ್ತು ಭಾರತದ ಅಂತಾರಾಷ್ಟ್ರೀಯ ಗಡಿಭಾಗಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪಾಕ್ ಮತ್ತೆ ತನ್ನ ಚಾಳಿ ಮುಂದುವರಿಸಿದೆ. ನ್ಯೂಯಾರ್ಕ್‍ನ ಈಸ್‍ವೆಲ್ಟ್ ಹೋಟೆಲ್‍ನಲ್ಲಿ ನಡೆದ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಭಾರತೀಯ ಪತ್ರಕರ್ತರನ್ನು ಪಾಕ್ ವಿದೇಶಾಂಗ ಕಾರ್ಯದರ್ಶಿ ಏಜಾಜ್ ಅಹ್ಮದ್ ಚೌಧರಿ ಹೊರ ಕಳುಹಿಸಿರುವ ಪ್ರಸಂಗ ನಡೆದಿದೆ. ಎನ್‍ಡಿಟಿವಿ ಸುದ್ದಿವಾಹಿನಿಯ ಪತ್ರಕರ್ತೆ ನಮ್ರಾ ಬ್ರಾರ್‍ರನ್ನು ಸುದ್ದಿಗೋಷ್ಠಿಯಿಂದ ಹೊರಹೋಗುವಂತೆ ಪಾಕ್ ವಿದೇಶಾಂಗ ಕಾರ್ಯದರ್ಶಿ ಸೂಚಿಸಿದ್ದು, ಯಾವೊಬ್ಬ ಭಾರತೀಯ ಪತ್ರಕರ್ತರೂ ಪಾಲ್ಗೊಳ್ಳದಂತೆ ಪಾಕ್ ತನ್ನ ಹೇಡಿತನ ಪ್ರದರ್ಶಿಸಿದೆ.

ಈ ಕುರಿತು ಪಾಕ್ ವಿದೇಶಾಂಗ ಕಾರ್ಯದರ್ಶಿ ಹೇಡಿತನದ ಕ್ರಮಕ್ಕೆ ಇದೀಗ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಭಾರತೀಯ ಪತ್ರಕರ್ತೆ ಚೌಧರಿ ನಡೆಯನ್ನು ಕಟುಮಾತಿನಿಂದ ಖಂಡಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin