ಕಾನೂನು ಜ್ಞಾನ ಅತ್ಯವಶ್ಯಕ

ಈ ಸುದ್ದಿಯನ್ನು ಶೇರ್ ಮಾಡಿ

chikkamangaluru

ಅರಕಲಗೂಡು, ಸೆ.20– ಮನುಷ್ಯನಿಗೆ ಕಾನೂನು ಜ್ಞಾನ ಪ್ರಮುಖವಾಗಿ ಬೇಕಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೆ.ವಿ.ವಿಜಯಾನಂದ ತಿಳಿಸಿದರು.ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾನೂನು ಸೇವೆಗಳ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಧಿವೇಶನ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದರೆ ಕಾನೂನು ತಿಳುವಳಿಕೆ ಇಲ್ಲದಿರುವುದು ಕಂಡುಬರುತ್ತದೆ. ಮನುಷ್ಯ ತನ್ನ ಅವಶ್ಯಕತೆ ಪೂರೈಸಿಕೊಳ್ಳಲು ಸಾಕಷ್ಟ ಶ್ರಮವಹಿಸುತ್ತಾನೆ.ಇದರ ಜತೆಗೆ ಕಾನೂನಿನ ಅರಿವು ಆತನಿಗೆ ದೊರೆತರೆ ಸಮಾಜಘಾತುಕ ಪ್ರಕ್ರಿಯೆಗಳಿಂದ ದೂರವಿರಬಹುದು ಎಂದರು.

ಕಾನೂನು ತಿಳುವಳಿಕೆ ಕೇವಲ ನ್ಯಾಯಾಧೀಶರಿಂದ ಅಥವಾ ವಕೀಲರಿಂದ ತಿಳಿಯುವ ಅವಶ್ಯಕತೆಯಿಲ್ಲ.ಓದಿನ ಸಂದರ್ಭದಲ್ಲಿಯೇ ಸಂವಿಧಾನದ ಆಶಯಗಳನ್ನು ನಿಖರವಾಗಿ ಅಧ್ಯಯನ ಮಾಡಿದ್ದಲ್ಲಿ, ಪ್ರತಿ ವಿದ್ಯಾರ್ಥಿಯೂ ಕೂಡ ನ್ಯಾಯಾಧೀಶ, ವಕೀಲರಾಗಿ ತಮ್ಮ ಜವಬ್ದಾರಿಯನ್ನು ಪ್ರದರ್ಶಿಸಬಹುದಾಗಿದೆ ಎಂದು ಅವರು ನುಡಿದರು.ಜನ ಸಾಮಾನ್ಯರು,ಇಲಾಖೆ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಕಾನೂನಿನ ತಿಳುವಳಿಕೆಯನ್ನು ಸುಲಭವಾದ ರೀತಿಯಲ್ಲಿ ಮೂಡಿಸುತ್ತಿದೆ ಎಂದು ಅವರು ಹೇಳಿದರು.ನ್ಯಾಯಾಧೀಶರಾದ ಕೃಷ್ಣಪ್ರಸಾದ್ ರಾವ್, ದಾಕ್ಷಾಯಿಣಿ, ವಕೀಲರ ಸಂಘದ ಅಧ್ಯಕ್ಷ ಹೇಮಂತ್‍ಕುಮಾರ್, ಕಾರ್ಯದರ್ಶಿ ಶಂಕರಯ್ಯ, ಖಜಾಂಜಿ ಧ್ರುವರಾಜ್, ಅಪರ ಸರಕಾರಿ ವಕೀಲ ದೊರೆಸ್ವಾಮಿ, ವಕೀಲ ವಿಜಯ್‍ಕುಮಾರ್, ಪ್ರಾಂಶುಪಾಲ ಶಿವಣ್ಣ ಇತರರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin