ರೈಲಿಗೆ ಸಿಕ್ಕಿ ವೃದ್ಧೆ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

aciident

ಚನ್ನಪಟ್ಟಣ, ಸೆ.20- ಚಲಿಸುತ್ತಿದ್ದ ರೈಲಿಗೆ ವೃದ್ಧೆಯೊಬ್ಬರು ಸಿಕ್ಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರ ರೈಲ್ವೇ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಪಟ್ಟಣದ ತಿಟ್ಟಮಾರನಹಳ್ಳಿ ಸೇತುವೆ ಬಳಿಯ ಈ ದುರ್ಘಟನೆ ನಡೆದಿದ್ದು, ಸುಮಾರು 60 ರಿಂದ 65 ವಯಸ್ಸಿನ ವೃದ್ಧೆಯೊಬ್ಬರು ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಮೃತರ ವಿಳಾಸ ಪತ್ತೆಯಾಗಿಲ್ಲ. ನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಇರಿಸಲಾಗಿದ್ದು, ವಾರಸುದಾರರು ಇದ್ದಲ್ಲಿ ನಗರ ರೈಲ್ವೇ ಪೊಲೀಸರು ಸಂಪರ್ಕಿಸಲು ಕೋರಲಾಗಿದೆ.

 

 

► Follow us on –  Facebook / Twitter  / Google+

 

Facebook Comments

Sri Raghav

Admin