ಹಳಿ ತಪ್ಪಿದ ಗೂಡ್ಸ್ ರೈಲು : ಕೆಲವು ರೈಲುಗಳ ಸಂಚಾರದಲ್ಲಿ ವಿಳಂಬ

ಈ ಸುದ್ದಿಯನ್ನು ಶೇರ್ ಮಾಡಿ

Rai-l

ಕೊಲ್ಲಂ, ಸೆ.20- ಗೂಡ್ಸ್ ರೈಲೊಂದು ಇಲ್ಲಿನ ಕರುಂಗಪಳ್ಳಿಯಲ್ಲಿ ನಿನ್ನೆ ರಾತ್ರಿ ಹಳಿ ತಪ್ಪಿದ್ದು, ತಿರುವನಂತಪುರಂ ಮತ್ತು ಎರ್ನಾಕುಲಂ ವಿಭಾಗಗಳ ನಡುವೆ ರೈಲು ಸಂಚಾರಕ್ಕೆ ಅಡಚಣೆಯಾಗಿದೆ. ಕೊಟ್ಟಾಯಂಗೆ ರಾಸಾಯನಿಕ ಗೊಬ್ಬರಗಳನ್ನು ಹೊತ್ತೊಯ್ಯುತ್ತಿದ್ದ ಗೂಡ್ಸ್ ರೈಲು ನಿನ್ನೆ ರಾತ್ರಿ ಹಳಿ ತಪ್ಪಿತು. ಕೊಲ್ಲಂ ಮತ್ತು ಕಾಯಂಕುಲ್ಲಂ ನಿಲ್ದಾಣಗಳ ನಡುವೆ ಸಂಚಾರವನ್ನು ಏಕಮಾರ್ಗವಾಗಿ ನಿಯಂತ್ರಿಸಲಾಯಿತು ಎಂದು ದಕ್ಷಿಣ ರೈಲ್ವೆ ಪ್ರಕಟಣೆ ತಿಳಿಸಿದೆ. ಈ ಮಾರ್ಗದ ಎಕ್ಸ್‍ಪ್ರೆಸ್ ರೈಲು ಸಂಚಾರವನ್ನು ರದ್ದುಗೊಳಿಸಿಲ್ಲ. ಕೆಲವು ಪ್ರಯಾಣಿಕ ರೈಲುಗಳ ಸಂಚಾರದಲ್ಲಿ ವಿಳಂಬ ಆಗಲಿದೆ ಎಂದು ಪ್ರಕಟಣೆ ಹೇಳಿದೆ.

► Follow us on –  Facebook / Twitter  / Google+

Facebook Comments

Sri Raghav

Admin