ಗರ್ಭಿಣಿ ಪಾತ್ರದಲ್ಲಿ ನಟಿಸಿಲ್ಲ ಎಂದ ಕರೀನಾ ಕಪೂರ್ ಖಾನ್

ಈ ಸುದ್ದಿಯನ್ನು ಶೇರ್ ಮಾಡಿ

Kareena

ವೀರೆ ದಿ ವೆಡ್ಡಿಂಗ್ ಸಿನಿಮಾದಲ್ಲಿ ತಾನು ಗರ್ಭವತಿ ಪಾತ್ರದಲ್ಲಿ ನಟಿಸಿರುವುದಾಗಿ ವರದಿಯಾಗಿರುವ ಸುದ್ದಿ-ಸಮಾಚಾರಗಳನ್ನು ಬಾಲಿವುಡ್ ಬೆಡಗಿ ಕರೀನಾ ಕಪೂರ್ ಖಾನ್ ತಳ್ಳಿ ಹಾಕಿದ್ದಾಳೆ. ನಾನು ಗರ್ಭಿಣಿಯಾಗಿದ್ದೇನೆ ನಿಜ. ಆದರೆ, ನಾನು ಗರ್ಭಿಣಿ ಪಾತ್ರದಲ್ಲಿ ನಟಿಸಿಲ್ಲ. ವೀರೆ ದಿ ವೆಡ್ಡಿಂಗ್ ಸಿನಿಮಾದಲ್ಲಿ ನಾನು ಪ್ರೆಗ್ನೆಂಟ್ ರೋಲ್‍ನಲ್ಲಿ ಕಾಣಿಕೊಂಡಿಲ್ಲ ಎಂದು ಕರೀನಾ ಸ್ಪಷ್ಟಪಡಿಸಿದ್ದಾಳೆ. ಅಲ್ಲದೇ ಸಿನಿ ಪತ್ರಕರ್ತರಿಗೆ ನನ್ನ ಬಗ್ಗೆ ನೀವು ಬರೆದಿರುವುದು ಸರೀನಾ ಎಂದು ಕರೀನಾ ಪ್ರಶ್ನಿಸಿದ್ದಾರೆ. ಇಲ್ಲ ನಾನು ಆ ಪಾತ್ರದಲ್ಲಿ (ಗರ್ಭಿಣಿ ಪಾತ್ರದಲ್ಲಿ) ನಟಿಸಿಲ್ಲ.

ನಾನು ಸಿಕ್ಸ್ ಪ್ಯಾಕ್ ಆ್ಯಬ್‍ಗಳನ್ನು(ಉಬ್ಬುಗಳು) ಹೊಂದಿಲ್ಲ. ನನ್ನಲ್ಲಿರುವುದು ಥ್ರೀ ಪ್ಯಾಕ್ ಆ್ಯಬ್‍ಗಳು ಎಂದು ಕರೀನಾ ಹೇಳಿದ್ದಾಳೆ. ಗರ್ಭವತಿಯಾಗಿರುವ 35 ವರ್ಷದ ನಟಿ ವೀರೆ ದಿ ವೆಡ್ಡಿಂಗ್ ಸಿನಿಮಾದಲ್ಲಿ ಸಹಜ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಳೆ ಎಂದು ಕೆಲವು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಈ ಸಿನಿಮಾದಲ್ಲಿ ಸೋನಮ್ ಕಪೂರ್, ಸ್ವರ ಭಾಸ್ಕರ್ ಮತ್ತು ಶಿಖಾ ತಲ್‍ಸಾನಿಯಾ ಅವರೂ ನಟಿಸುತ್ತಿದ್ದಾರೆ. ಇದು ನಾಲ್ವರು ಮಹಿಳೆಯರ ಕಥೆ. ಆದರೆ ಇದು ನಾಲ್ವರು ಸಹೋದರಿಯರ ಕಥೆ ಅಲ್ಲ. ಇದರಲ್ಲಿ ನಾಲ್ವರು ಗೆಳೆಯರು ಮತ್ತು ಅವರ ವಿವಾಹಗಳ ಕುರಿತು ಸ್ವಾರಸ್ಯಕರ ಕಥೆ ಇರುತ್ತದೆ. ಅಲ್ಲದೆ ಗೆಳತಿಯರ ಭಾವನಾತ್ಮಕ ಸಂಬಂಧಗಳ ನವಿರಾದ ಕಥೆಯೂ ಇದರಲ್ಲಿದೆ ಎಂದು ಸಿನಿಮಾದ ಒನ್‍ಲೈನ್ ಸ್ಟೋರಿಯನ್ನು ಸಹ ಕರೀನಾ ಹೇಳಿದ್ದಾಳೆ.

 

► Follow us on –  Facebook / Twitter  / Google+

Facebook Comments

Sri Raghav

Admin