ತಂಬಾಕು ಉತ್ಪನ್ನಗಳ ಮೇಲೆ ಶೇ.85ರಷ್ಟು ಭಾಗ ಚಿತ್ರಸಹಿತದ ಎಚ್ಚರಿಕೆಯಿಂದ ಉತ್ತಮ ಫಲಿತಾಂಶ

ಈ ಸುದ್ದಿಯನ್ನು ಶೇರ್ ಮಾಡಿ

Cuggarate

ಬೆಂಗಳೂರು, ಸೆ.21- ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಭಾರತ ಸರ್ಕಾರವು ಏ.1ರಿಂದ ಜಾರಿಗೆ ಬರುವಂತೆ ತಂಬಾಕು ಉತ್ಪನ್ನಗಳ ಮೇಲೆ ಶೇ.85ರಷ್ಟು ಭಾಗ ಚಿತ್ರಸಹಿತದ ಎಚ್ಚರಿಕೆಯನ್ನು ಕಡ್ಡಾಯಗೊಳಿಸಿರುವುದು ಉತ್ತಮ ಫಲಿತಾಂಶ ನೀಡುತ್ತಿದೆ.  ದೇಶದ ವಿವಿಧ ರಾಜ್ಯಗಳಲ್ಲಿ ಹೊಸ ಚಿತ್ರಸಹಿತ ಎಚ್ಚರಿಕೆಯ ಕುರಿತ ಇತ್ತೀಚಿನ ಸಮೀಕ್ಷೆಯು ಉತ್ತಮ ಸೂಚನೆಗಳನ್ನು ತೋರಿಸಿದೆ. ಕರ್ನಾಟಕದಲ್ಲಿ, ಗರಿಷ್ಠ ಸಂಖ್ಯೆಯ ಬ್ರಾಂಡ್‌ಗಳೊಂದಿಗೆ ಶೇ.70ರಷ್ಟು ಸಿಗರೇಟ್ ಉತ್ಪನ್ನಗಳು ಈಗಾಗಲೇ ಹೊಸ ಚಿತ್ರ ಸಹಿತ ಎಚ್ಚರಿಕೆ ನಿಯಮದ ಅನುಸರಣೆ ಮಾಡುತ್ತಿದೆ ಎಂದು ಸಮೀಕ್ಷೆ ಹೇಳಿದೆ.

ಇಲ್ಲಿ ಗಮನಿಸಬೇಕಾದ್ದೇನೆಂದರೆ, ಹೊಸ ನಿಯಮಗಳು, ಪ್ಯಾಕೇಜ್‌ನ ಪ್ರಧಾನ ಪ್ರದರ್ಶನ ಭಾಗದ ಕನಿಷ್ಠ ಶೇ.85ರಷ್ಟು ಆರೋಗ್ಯದ ಎಚ್ಚರಿಕೆಯಿಂದ ಆವರಿಸಿರಬೇಕು, ಇದರಲ್ಲಿ ಶೇ.60ರಷ್ಟು ಹೊಂದಿರಬೇಕು ಮತ್ತು ಶೇ.25 ರಷ್ಟು ಭಾಗ ಅಕ್ಷರದ ಮೂಲಕ ಆರೋಗ್ಯದ ಎಚ್ಚರಿಕೆ ಇರಬೇಕು. ಇದನ್ನು ಪ್ಯಾಕೇಜ್‌ನ ಮೇಲ್ತುದಿಯಲ್ಲಿ ಹಾಕಿರಬೇಕು ಎಂದು ನಿರ್ದಿಷ್ಟವಾಗಿ ಹೇಳಿವೆ.
ವಾಲೆಂಟರಿ ಹೆಲ್ತ್ ಅಸೋಸಿಯೇಶನ್ ಆಫ್ ಇಂಡಿಯಾ (ವಿಎಚ್‌ಎಐ) ಮತ್ತು ಇತರೆ ಸಂಸ್ಥೆಗಳೊಂದಿಗೆ, ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ (ಐಪಿಎಚ್), ಬೆಂಗಳೂರು ಸಮೀಕ್ಷೆಯನ್ನು ನಡೆಸಿದೆ ಮತ್ತು ಶೇ.55ರಷ್ಟು ಧೂಮರಹಿತ ತಂಬಾಕು (ಜಗಿಯುವ ತಂಬಾಕು) ಪ್ಯಾಕ್‌ಗಳು ಹೊಸ ಚಿತ್ರಸಹಿತ ಎಚ್ಚರಿಕೆಗಳನ್ನು ನಿಯಮದಂತೆ ಪ್ರದರ್ಶಿಸುತ್ತಿರುವುದು ಕಂಡುಬಂದಿದೆ ಮತ್ತು ಬೀಡಿ ಪ್ಯಾಕ್‌ಗಳಿಗೆ ಬಂದಾಗ ಈ ಅನುಸರಣೆ ಶೇ.12ರಷ್ಟಿರುವುದು ಕಂಡುಬಂದಿದೆ.

ಇದಕ್ಕೆ ಸಂಬಂಸಿದಂತೆ ನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ, ಆರೋಗ್ಯ ತಜ್ಞರು ಮತ್ತು ಸಮೀಕ್ಷಾ ಸಂಸ್ಥೆಗಳ ಸದಸ್ಯರು ವಿವಿಧ ಮಧ್ಯಸ್ಥಗಾರರ ಸಮ್ಮುಖದಲ್ಲಿ ಫಲಿತಾಂಶಗಳನ್ನು ಹಂಚಿಕೊಂಡರು. ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ಪ್ರತಿ ಮೂವರಲ್ಲಿ ಒಬ್ಬ ಭಾರತೀಯ ವಯಸ್ಕ ಒಂದಲ್ಲ ಒಂದು ರೀತಿಯ ತಂಬಾಕು ಉಪಯೋಗಿಸುತ್ತಿರುವುದು ಮತ್ತು ಭಾರತದಲ್ಲಿ ಪ್ರತಿ ವರ್ಷ ತಂಬಾಕು ಸಂಬಂ ಕಾಯಿಲೆಗಳಿಂದ 10 ಲಕ್ಷ ಮಂದಿ ಭಾರತೀಯರು ಸಾವನ್ನಪ್ಪುತ್ತಿರುವುದು ಬೇಸರದ ಸಂಗತಿ ಎಂದರು. ಆಹಾರ ಮತ್ತು ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಯು.ಟಿ.ಖಾದರ್ ಮಾತನಾಡಿ, ಕಾಯಿಲೆ, ಊನತೆ ಮತ್ತು ಸಾವಿಗೆ ಕಾರಣವಾಗುವ ಈ ತಂಬಾಕು ಉತ್ಪನ್ನಗಳು, ಜನಸಾಮಾನ್ಯರ ಯಾವುದೇ ಉಪಯೋಗಕ್ಕೆ ಬಾರದ ಏಕೈಕ ಗ್ರಾಹಕ ಉತ್ಪನ್ನವಾಗಿದೆ. ದೊಡ್ಡ ಚಿತ್ರ ಸಹಿತ ಎಚ್ಚರಿಕೆಯು ಗ್ರಾಹಕರಿಗೆ ಆಯ್ಕೆಯ ಮಾಹಿತಿಯನ್ನು ನೀಡುವಲ್ಲಿ ನೆರವಾಗುತ್ತದೆ ಎಂದರು.

► Follow us on –  Facebook / Twitter  / Google+

 

Facebook Comments

Sri Raghav

Admin