ದೃಢ ನಿಶ್ಚಯ-ಛಲದಿಂದ ಬ್ಯಾಂಕಿಂಗ್ ಪರೀಕ್ಷೆ ಎದುರಿಸಿ

ಈ ಸುದ್ದಿಯನ್ನು ಶೇರ್ ಮಾಡಿ

banking--exam

ಚಿಕ್ಕಮಗಳೂರು, ಸೆ.21- ದೃಢ ನಿಶ್ಚಯ ಮತ್ತು ಛಲದಿಂದ ಪ್ರಾಮಾಣಿಕವಾಗಿ ಅಭ್ಯಾಸ ಮಾಡಿ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿದರೆ ಬ್ಯಾಂಕಿಂಗ್ ಉದ್ಯೋಗ ಖಚಿತ ಎಂದು ಕಾಪ್‍ಸೆಟ್ ಮುಖ್ಯಸ್ಥ ಖ್ಯಾತ ತರಬೇತುದಾರ ಆರ್.ಕೆ.ಬಾಲಚಂದ್ರ ಅಭಿಪ್ರಾಯಿಸಿದರು. ರೋಟರಿ ಕಾಫಿಲ್ಯಾಂಡ್ ವತಿಯಿಂದ ಎಂಇಎಸ್ ಆವರಣದಲ್ಲಿ ಐಬಿಪಿಎಸ್ ಸಾಮಾನ್ಯಪ್ರವೇಶ ಪರೀಕ್ಷೆಗಾಗಿ ಆಯೋಜಿಸಿರುವ 10ದಿನಗಳ ತ್ವರಿತಗತಿಯ ತರಬೇತಿ ಕಾರ್ಯಾಗಾರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಆತ್ಮವಿಶ್ವಾಸದಿಂದ ಪೂರ್ಣವಾಗಿ ಮನಸ್ಸನ್ನು ತೊಡಗಿಸಿಕೊಂಡರೆ ಮುಂದಿನ ವರ್ಷ ಯಾವುದಾದರೊಂದು ಬ್ಯಾಂಕಿನಲ್ಲಿ ಉದ್ಯೋಗಿಯಾಗಬಹುದು. ಬದುಕಿನ ಪ್ರಶ್ನೆಗೆ ದೃಢ ನಿರ್ಧಾರ ಅಗತ್ಯ. ಹುಡುಕಾಟ ಮಾಡಬೇಕೆ ಹೊರತು ಹುಡುಗಾಟ ಸಲ್ಲದು ಎಂದರು. ಕಾವೇರಿ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಆನಂದ ಸಿ.ಹೆಗ್ಡೆ ಮಾತನಾಡಿ, ಗ್ರಾಮೀಣ ಬ್ಯಾಂಕ್‍ನಲ್ಲೆ 650ಕ್ಕೂ ಹೆಚ್ಚು ಹುದ್ದೆಗಳು ಲಭ್ಯವಿದೆ. ಕರ್ನಾಟಕದ 10 ದಕ್ಷಿಣ ಜಿಲ್ಲೆಗಳಲ್ಲಿ ಕೆಜಿಬಿ ಕಾರ್ಯನಿರ್ವಹಿಸುತ್ತಿದ್ದು, ಹೊಸದಾಗಿ ಆಯ್ಕೆಯಾದವರಿಗೆ ಸ್ಥಳೀಯವಾಗಿ ಪೆಅವಕಾಶವಿದೆ. ಜನರೊಂದಿಗೆ ಕನ್ನಡ ಭಾಷೆಯಲ್ಲೆ ಪೂರ್ಣ ವ್ಯವಹರಿಸುವ ಬ್ಯಾಂಕ್ ಇದಾಗಿದ್ದು, ಸೇವೆಗೆ ಒಳ್ಳೆ ಅವಕಾಶವಿದೆ ಎಂದು ವಿವರಿಸಿದರು.

ಎಂಇಎಸ್ ಆಡಳಿತಾಧಿಕಾರಿ ಶಾಂತಕುಮಾರಿ ಮಾತನಾಡಿ, ಉನ್ನತ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯುವತಿಯರೆ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಇಲ್ಲಿ ನಡೆಯುವ ತರಗತಿಗಳಿಗೆ ಸಕಾಲದಲ್ಲಿ ಬಂದು ಪೂರ್ಣ ಮನಸ್ಸಿನಿಂದ ಪಾಲ್ಗೊಂಡರೆ ಐಬಿಪಿಎಸ್ ಪಾಸಾಗಬಹುದು ಎಂದರು.ರೋಟರಿ ಕಾಫಿಲ್ಯಾಂಡ್ ಅಧ್ಯಕ್ಷ ಆರ್.ನಾಗೇಂದ್ರ ಮಾತನಾಡಿ, ಕಳೆದ ವರ್ಷವೂ ತರಬೇತಿ ನೀಡಿದ್ದು, ಕೆಲವರು ಆಯ್ಕೆಗೊಂಡಿರುವುದು ರೋಟರಿ ತಂಡದ ಉತ್ಸಾಹವನ್ನು ಇಮ್ಮಡಿಸಿದೆ ಎಂದರು.ರೋಟರಿ ಯೋಜನಾ ನಿರ್ದೇಶಕ ಎಸ್.ಎನ್.ಸಚ್ಚಿದಾನಂದ, ನಾಗೇಂದ್ರ, ವಿವೇಕ್, ಕಾರ್ಯದರ್ಶಿ ಜಯಕುಮಾರ್, ಕೆಜಿಬಿ ಹಿರಿಯ ವ್ಯವಸ್ಥಾಪಕ ದಾಮೋದರ ಭಟ್ ವೇದಿಕೆಯಲ್ಲಿದ್ದರು.

 

► Follow us on –  Facebook / Twitter  / Google+

 

 

Facebook Comments

Sri Raghav

Admin