ಬೆಂಗಳೂರಿನಲ್ಲಿ ‘ಬ್ಲೂ’ ಬಾಯ್ಸ್ : ಶೇ.80ರಷ್ಟು ಯುವಕರಿಂದ ಅಶ್ಲೀಲ ವಿಡಿಯೋ ವೀಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Bl;ue

ಬೆಂಗಳೂರು, ಸೆ.21- ನಗರದಲ್ಲಿ ಶೇ.80ರಷ್ಟು ಯುವಜನತೆ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿದ್ದು, ಇದು ನಿಲ್ಲಬೇಕೆಂದು ರೆಸ್ಕ್ಯೂ ಸಂಸ್ಥೆ ಸಿಇಒ ಅಭಿಷೇಕ್ ಕ್ಲೀಫರ್ಡ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಭಾರತದ ಯೌವನಸ್ಥರು ಅತ್ಯಾಚಾರ, ಅಶ್ಲೀಲ ಚಿತ್ರ ಮತ್ತು ಮಕ್ಕಳ ಅಶ್ಲೀಲ ಚಿತ್ರ ವೀಕ್ಷಣೆ ಕುರಿತಂತೆ ನಮ್ಮ ಸಂಸ್ಥೆ ಅಧ್ಯಯನ ನಡೆಸಿದೆ.
ನಗರದ ಪದವಿ ವಿದ್ಯಾರ್ಥಿಗಳು ಶೇ.80ರಷ್ಟು ಪದವಿ ಪೂರ್ವ ವಿದ್ಯಾರ್ಥಿಗಳು ಶೇ.20ರಷ್ಟು ಅಶ್ಲೀಲ ಚಿತ್ರಗಳನ್ನು ವೆಬ್‍ಸೈಟ್‍ನಲ್ಲಿ ವೀಕ್ಷಿಸುತ್ತಿದ್ದರೆ, ಶೇ.30ರಷ್ಟು ವಿದ್ಯಾರ್ಥಿಗಳು ಸಲಿಂಗ ಕಾಮದಲ್ಲಿ ತೊಡಗಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

ಬ್ರಿಟಿಷರು ಭಾರತ ಬಿಟ್ಟು ತೊಲಗಿದ್ದಾರೆ. ಆದರೆ, ಅವರು ಬಿಟ್ಟು ಹೋಗಿರುವ ವೆಬ್‍ಸೈಟ್‍ಗಳು ಭಾರತದ ಸಂಸ್ಕøತಿಗೆ ಮಾರಕವಾಗಿವೆ. ಇದರಿಂದ ಸಮಾಜದಲ್ಲಿ ಯುವಜನತೆ ಹಾದಿ ತಪ್ಪುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಪೋಷಕರು ಮಕ್ಕಳಿಗೆ ಪೋನ್ ನೀಡಿದರೆ ಕೆ-9, ಪೆರೆಂಟಲ್, ಪೋನ್ ಬ್ಲಾಕ್ ಸಾಫ್ಟ್‍ವೇರ್‍ಗಳನ್ನು ಪೋನ್‍ಗಳಲ್ಲಿ ಅಳವಡಿಸಿ ನೀಡಬೇಕು. ಆಗ ಯಾವುದೇ ತರಹದ ಅಶ್ಲೀಲ ಚಿತ್ರಗಳನ್ನು ವೆಬ್‍ಸೈಟ್‍ಗಳಲ್ಲಿ ನೋಡಲು ಸಾಧ್ಯವಾಗುವುದಿಲ್ಲ ಎಂದು ಪೋಷಕರಲ್ಲಿ ಮನವಿ ಮಾಡಿದರು.

► Follow us on –  Facebook / Twitter  / Google+

Facebook Comments

Sri Raghav

Admin