ರಕ್ತದಾನ ಮಾಡಿ ಮತ್ತೊಬ್ಬರಿಗೆ ನೆರವಾಗಿ

ಈ ಸುದ್ದಿಯನ್ನು ಶೇರ್ ಮಾಡಿ

donar--blood

ಚಿಕ್ಕಮಗಳೂರು, ಸೆ.21- ಸೇವಾಮನೋಭಾವ, ಸಕಾರಾತ್ಮಕ ಚಿಂತನೆಗೆ ರೆಡ್‍ಕ್ರಾಸ್ ಸಹಕಾರಿ ಎಂದು ಪ್ರಾಂಶುಪಾಲೆ ಪ್ರೊ .ಜೆ.ಕೆ.ಭಾರತಿ ಅಭಿಪ್ರಾಯಿಸಿದರು.ಎಸ್.ಟಿ.ಜೆ.ಮಹಿಳಾ ಪದವಿ ಕಾಲೇಜಿನ ಯೂತ್ ರೆಡ್‍ಕ್ರಾಸ್ ಘಟಕದ ವತಿಯಿಂದ ಆಯೋಜಿಸಿದ್ದ ರಕ್ತದಾನದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಾನಗಳಲ್ಲೇ ರಕ್ತದಾನ ಶ್ರೇಷ್ಠ. ರಕ್ತದಾನದಿಂದ ಮನಸ್ಸು, ಶರೀರ, ಮತ್ತು ಆತ್ಮಕ್ಕೆ ಸಂತೋಷವಾಗುತ್ತದೆ. ಮತ್ತೊಬ್ಬರಿಗೆ ನೆರವಾದ ಸಂತೃಪ್ತಿ ನಮ್ಮದಾಗುತ್ತದೆ ಎಂದರು. ಜಿಲ್ಲಾಸ್ಪತ್ರೆ ರಕ್ತನಿಧಿಕೇಂದ್ರದ ಮುಖ್ಯಸ್ಥ ಡಾ.ಮುರುಳೀಧರನ್ ಪ್ರಧಾನ ಉಪನ್ಯಾಸ ನೀಡಿ, ರಕ್ತಕ್ಕೆ ಪರ್ಯಾಯವಿಲ್ಲ. ರಕ್ತಹೀನತೆಯಿಂದ ಅನೇಕ ತೊಂದರೆಗಳಿವೆ. ಒಮ್ಮೆ ದೇಹದಿಂದ ತೆಗೆದ ರಕ್ತವನ್ನು 35 ದಿನಗಳವರೆಗೆ ಸಂರಕ್ಷಿಸಬಹುದು. ಒಂದು ಯೂನಿಟ್ ರಕ್ತದಲ್ಲಿ ಪ್ಲೇಟ್‍ಲೆಟ್ ಸೇರಿದಂತೆ ಕಣಗಳನ್ನು ಬೇರ್ಪಡಿಸಿ ಅಗತ್ಯವಿರುವ ಹಲವರಿಗೆ ಕೊಡಬಹುದು ಎಂದು ವಿವರಿಸಿದರು.

ಜಿಲ್ಲಾ ರೆಡ್‍ಕ್ರಾಸ್ ನೋಡೆಲ್ ಅಧಿಕಾರಿ ಡಾ.ಸುಂದರೇಗೌಡ ಮಾತನಾಡಿ, ಯುವಕರಲ್ಲಿ ರಕ್ತದಾನ, ಮಾನವೀಯತೆ, ನೈತಿಕ ಮËಲ್ಯಗಳನ್ನು ಬೆಳೆಸುವುದರ ಜತೆಗೆ ಸಮಾಜಕ್ಕೆ ಉಪಕಾರಿಗಳಾಗಿ ಬದುಕುವುದನ್ನು ಯೂತ್ ರೆಡ್‍ಕ್ರಾಸ್ ಪ್ರೇರೇಪಿಸುತ್ತದೆ. ವೇಗದ ಜಗತ್ತಿನಲ್ಲಿ ಸ್ವಾರ್ಥ ಹೆಚ್ಚಾಗಿ ಸ್ವೇಚ್ಛಾಚಾರ ಮತ್ತು ಭ್ರಷ್ಟಾಚಾರಕ್ಕೆ ಕಾರಣವಾಗಿದ್ದು, ಇದಕ್ಕೆ ಕಡಿವಾಣ ಹಾಕಲು ಯುವಜನರು ಸಂಕಲ್ಪ ಮಾಡಬೇಕೆಂದರು. ಕುವೆಂಪು ವಿ.ವಿ.2015-16ನೆ ಸಾಲಿನ ಬಿಎ ಪರೀಕ್ಷೆಯಲ್ಲಿ 3ನೆ ರ್ಯಾಂಕ್ ಗಳಿಸಿದ ಕಾಲೇಜಿನ ವಿದ್ಯಾರ್ಥಿ ಡಿ.ಆರ್.ಮಂಜುಳಾ ಅವರನ್ನು ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದ ಸನ್ಮಾನಿಸಿತು. ಉಪನ್ಯಾಸಕ ಎಂ.ಆರ್.ಚಂದ್ರಶೇಖರ್ ಮಾತನಾಡಿ, ಹೊಸಪೇಟೆಯ ಕೂಲಿ ಕಾರ್ಮಿಕ ಕುಟುಂಬದಲ್ಲಿ ಹುಟ್ಟಿದ ಮಂಜುಳಾ, ಶ್ರದ್ಧೆ ಮತ್ತು ಪರಿಶ್ರಮದಿಂದ ಅಭ್ಯಾಸ ಮಾಡಿದ ಪರಿಣಾಮ ನಗರದಲ್ಲೆ ಕಲಾ ವಿಭಾಗದ ಏಕೈಕ ರ್ಯಾಂಕ್ ವಿಜೇತೆಯಾಗಿ ಹೊರಹೊಮ್ಮಿರುವುದು ಆದರ್ಶಪ್ರಾಯ ಎಂದರು.ಯುವ ರೆಡ್‍ಕ್ರಾಸ್ ಘಟಕದ ಸಮನ್ವಯಾಧಿಕಾರಿ ಸಿ.ಸುರೇಶ್, ಉಪನ್ಯಾಸಕರಾದ ಪ್ರಕಾಶ್, ರಕ್ಷಿತ್ ಮತ್ತು ಕೆ.ಎಲ್.ಚಂದ್ರಶೇಖರ್ ವೇದಿಕೆಯಲ್ಲಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin