ಹಬ್ಬದ ಹೆಸರಿನಲ್ಲಿ ಜೂಜಾಟ ನಿಲ್ಲಲಿ

ಈ ಸುದ್ದಿಯನ್ನು ಶೇರ್ ಮಾಡಿ

kanakapura

ಕನಕಪುರ, ಸೆ.21- ಹಬ್ಬ-ಹರಿದಿನ, ಜಾತ್ರೆ  ಮತ್ತು ಧಾರ್ಮಿಕ ಸಮಾರಂಭಗಳು ಮನುಷ್ಯರ ನಡುವಿನ ಬಾಂಧವ್ಯ ಹೆಚ್ಚಿಸುತ್ತವೆ. ಇವುಗಳ ಹೆಸರಿನಲ್ಲಿ ಮದ್ಯಪಾನ ಹಾಗೂ ಜೂಜು ಡುವುದನ್ನು ನಿಲ್ಲಿಸಬೇಕೆಂದು ಹಾರೋಹಳ್ಳಿ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಅನಂತ್‍ರಾಮ್ ಹೇಳಿದರು. ಹಾರೋಹಳ್ಳಿ-ತಾಮಸಂದ್ರ ಗ್ರಾಮದಲ್ಲಿ ಓಂಬಾಯ್ಸ್ ಗೆಳೆಯರ ಬಳಗದ ವತಿಯಿಂದ ನಡೆದ 4ನೆ ವರ್ಷದ ಗಣೇಶೋತ್ಸವದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.ಧಾರ್ಮಿಕ ಸಮಾರಂಭ ಹಾಗೂ ಗ್ರಾಮಗಳಲ್ಲಿ ಯಾವುದೇ ಗದ್ದಲ-ಗಲಾಟೆಗಳಿಗೆ ಎಡೆಮಾಡಿಕೊಡದೆ ಪರಸ್ಪರ ಪ್ರೀತಿ-ವಿಶ್ವಾಸದಿಂದ ಬದುಕಬೇಕು.

ಗ್ರಾಮಸ್ಥರು ಹಾಗೂ ಪೊಲೀಸರ ನಡುವೆ ಉತ್ತಮ ಸಂಬಂಧವಿದ್ದಾಗ ಗ್ರಾಮಗಳಲ್ಲಿ ಜರುಗುವ ಅಹಿತಕರ ಹಾಗೂ ಸಮಾಜ ವಿರೋಧಿ ಘಟನೆಗಳನ್ನು ತಡೆಯಬಹುದಾಗಿದೆ ಎಂದರು.ಈ ವೇಳೆ ರಂಗೋಲಿ ಸ್ಪರ್ಧೆ, ವಿವಿಧ ಆಟಗಳ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸರ್ಕಾರಿ ಶಾಲಾ ಬಡಮಕ್ಕಳಿಗೆ ಉಚಿತ ನೋಟ್‍ಬುಕ್, ಜ ಮಿಟ್ರಿ ಮತ್ತು ಗ್ರಾಮದ ಹಿರಿಯರಿಗೆ ಕಂಬಳಿಗಳನ್ನು ವಿತರಣೆ ಮಾಡಲಾಯಿತು.ಗ್ರಾಪಂ ಮಾಜಿ ಅಧ್ಯಕ್ಷರಾದ ಬಿ.ನಾಗೇಶ್, ಈಶ್ವರಯ್ಯ, ಪಂಚಾಯ್ತಿ ಸದಸ್ಯ ಕೃಷ್ಣಮೂರ್ತಿ, ಆರೋಗ್ಯ ಇಲಾಖೆಯ ಆಂಜನಪ್ಪ, ನಿವೃತ್ತ ಎಸ್‍ಐ ಮುನಿಯಪ್ಪ ಸೇರಿದಂತೆ ಊರಿನ ಹಿರಿಯರು ಭಾಗವಹಿಸಿದ್ದರು.

 

 

► Follow us on –  Facebook / Twitter  / Google+

Facebook Comments

Sri Raghav

Admin