OMG.. ನಾವು ಮಾತನಾಡಿದ್ದು ಆಸ್ಕರ್ ವಿಜೇತ ನಟನ ಜೊತೆಗಾ…?!

ಈ ಸುದ್ದಿಯನ್ನು ಶೇರ್ ಮಾಡಿ

Oscor

ನ್ಯೂಯಾರ್ಕ್ : ಸೆ.21 : ಹೌದು, ನಿಜಕ್ಕೂ ಆ ದಂಪತಿಗಳಿಗೆ ಸತ್ಯ ಗೊತ್ತಾದಾಗ ಶಾಕ್ ಜೊತೆ ಸಂತೋಷಪಟ್ಟಿದ್ದರು ಆಗಿದ್ದರು, ನಾವು ಮಾತನಾಡಿದ್ದು ಆಸ್ಕರ್ ವಿಜೇತ ನಟನ ಜೊತೆ ಎಂದು ಆ ವೃದ್ಧ ದಂಪತಿಗಳಿಗೆ ಮಾತೇ ಹೊರಡಲಿಲ್ಲ. ತಮಗೆ ಮಾರ್ಗದರ್ಶನ ಮಾಡಿದ್ದ ದಾರಿಹೋಕ ಖ್ಯಾತ ಹಾಲಿವುಡ್ ನಟ ಎಂಬ ಸತ್ಯ ಗೊತ್ತಾದಾಗ ಆಶ್ಚರ್ಯದ ಜೊತೆ ಆನಂದವೂ ಆ ವೃದ್ಧ ದಂಪತಿಗಾಗಿತ್ತು.

ನಡೆದದ್ದಿಷ್ಟೇ :
ಖ್ಯಾತ ಹಾಲಿವುಡ್ ನಟ ಲಿಯೋನಾರ್ಡೊ ಡಿ ಕ್ಯಾಪ್ರಿಯೋ ನ್ಯೂಯಾರ್ಕ್ ನಗರದಲ್ಲಿ ಸುತ್ತಾಡುತ್ತಿದ್ದ ವೃದ್ಧ ದಂಪತಿಗಳಗೆ ಫೋನ್ ನಲ್ಲಿ ಮಾಹಿತಿ ತೋರಿಸಿ ಮಾರ್ಗದರ್ಶನ ಮಾಡಿ, ತಾನು ಯಾರೆಂಬುದನ್ನು ಬಹಿರಂಗಪಡಿಸದೆ ಅನಾಮಿಕ ವ್ಯಕ್ತಿಯಾಗುದಿದ್ದರು. ಆದರೆ, ತಮಗೆ ಮಾರ್ಗದರ್ಶನ ಮಾಡಿ ನೆರವಾದ ವ್ಯಕ್ತಿಯೇ ಆಸ್ಕರ್ ಪ್ರಶಸ್ತಿ ವಿಜೇತ ನಟ ಲಿಯೋನಾರ್ಡೊ ಡಿ ಕ್ಯಾಪ್ರಿಯೋ ಎಂಬುದನ್ನು ತಡವಾಗಿ ತಿಳಿದುಕೊಂಡ ವೃದ್ದ ದಂಪತಿ, ವರ್ಣಿಸಲಾಗದಷ್ಟು ಖುಷಿಪಟ್ಟಿದ್ದರು.  ಕೆಲವು ದಿನಗಳ ಹಿಂದಷ್ಟೇ ತನ್ನ ಕಾರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದು ತೀವ್ರ ಮಾನಸಿಕ ಆಘಾತಕ್ಕೆ ಗುರಿಯಾಗಿದ್ದ ಮಹಿಳೆ ತಾನೇ ಖುದ್ದು ಉಪಚರಿಸಿ, ಸಾಂತ್ವನ ಹೇಳಿ, ಧೈರ್ಯ ತುಂಬಿದ್ದ ಆಸ್ಕರ್ ಪ್ರಶಸ್ತಿ ವಿಜೇತ ವಿಶ್ವ ಖ್ಯಾತಿಯ ಹಾಲಿವುಡ್ ನಟ ಲಿಯೋನಾರ್ಡೊ ಡಿ ಕ್ಯಾಪ್ರಿಯೋ ಇದೀಗ ಮತ್ತೂಮ್ಮೆ ಸುದ್ದಿಯಾಗಿದ್ದಾರೆ.

a1

ad

► Follow us on –  Facebook / Twitter  / Google+
.

Facebook Comments

Sri Raghav

Admin