ಕಿತ್ತು ತಿನ್ನುವ ಬಡತನ : ಕರುಳ ಕುಡಿಯನ್ನೇ ಮಾರಲು ಮುಂದಾದ ತಾಯಿ

ಈ ಸುದ್ದಿಯನ್ನು ಶೇರ್ ಮಾಡಿ

beluru8

ಬೇಲೂರು, ಸೆ.22-ಬಡತನದ ಬೇಗೆಯಿಂದ ಬೇಸತ್ತು ತನ್ನ ಕರುಳಿನ ಕುಡಿಯನ್ನೇ ಮಾರಾಟ ಮಾಡಲು ಮುಂದಾಗಿದ್ದ ಮಹಿಳೆಯನ್ನು ನಿವಾಸಿಗಳು ಪೊಲೀಸರಿಗೊಪ್ಪಿಸಿ ನಂತರ ಸಾಂತ್ವಾನ ಕೇಂದ್ರಕ್ಕೆ ಕರೆದೊಯ್ಯಲಾಯಿತು.ಪಟ್ಟಣದ ನೆಹರು ನಗರದ ಶಿವಜ್ಯೋತಿ ಫಣ ಬೀದಿಯಲ್ಲಿ ಕೃಶವಾಗಿದ್ದ ವೀಣಾ ಎಂಬ ಮಹಿಳೆಯೊಬ್ಬರು ಮಧ್ಯಾಹ್ನದ ಸಮಯದಲ್ಲಿ ತನ್ನ 8 ತಿಂಗಳ ಗಂಡು ಮಗುವಿನ ಜೊತೆ ಮನೆ ಮನೆಗೆ ತೆರಳಿ ಬಿಕ್ಷೆ ಬೇಡುತ್ತಿದ್ದಳು. ಕೆಲ ಸಮಯದ ನಂತರ ಅದೇ ಬೀದಿಯ ಮಹಿಳೆಯೊಬ್ಬರ ಮನೆಗೆ ತೆರಳಿ ಹತ್ತಿರಕ್ಕೆ ಕರೆದು ಗುಟ್ಟಾಗಿ ತನ್ನ ಮಗುವನ್ನು ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದಾಳೆ. ಇದರಿಂದ ಗಾಬರಿಗೊಂಡ ಮನೆಯವರು ಮಕ್ಕಳನ್ನು ಹೀಗೆಲ್ಲಾ ಮಾರಾಟ ಮಾಡಬಾರದು ಎಂದು ಗದರಿದ್ದಾರೆ. ಆದರೆ ಅದಕ್ಕೆ ಸುಮ್ಮನಾಗದ ಮಹಿಳೆ ಬರೀ 2 ಸಾವಿರ ಕೊಡಿ ಸಾಕು ಎಂದು ಅಂಗಾಲಾಚಿದ್ದಾಳೆ.

ಕೊನೆಗೆ ಮನೆಯವರು ತಮಗೆ ಪರಿಚಯವಿದ್ದ ಜೆ.ಪಿ ನಗರದ ಕರವೇ ಮಹಿಳಾ ಘಟಕದ ಅಧ್ಯಕ್ಷ ವರಲಕ್ಷ್ಮಿ ಎಂಬುವರಿಗೆ ಕರೆ ಮಾಡಿ ಕರೆಯಿಸಿದ್ದಾರೆ.ಸ್ಥಳಿಯ ವಿವಾಸಿಗಳು ಮನೆಯ ಮುಂದೆ ಜಮಾಯಿಸುತ್ತಿದ್ದಂತೆ ವೀಣಾ ಮಗುವಿನ ಜೊತೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ಆ ಸಂದರ್ಭದಲ್ಲಿ ಕರವೇ ಅಧ್ಯಕ್ಷೆ ವರಲಕ್ಷ್ಮಿ ವೀಣಾಳನ್ನು ಸಮಾಧಾನ ಪಡಿಸಿ ನಿನಗೆ ನಾವೇನು ಮಾಡುವುದಿಲ್ಲ, ಮಗುವನ್ನು ಏಕೆ ಮಾರುತ್ತಿದ್ದೀಯಾ ಎಂದು ಕೇಳಿ ಸಮಾಧಾನಪಡಿಸಿದ್ದಾರೆ. ತಾನು ಹೊಸದುರ್ಗದವಳಾಗಿದ್ದು, ನನ್ನ ಗಂಡ 7 ತಿಂಗಳ ಹಿಂದೆ ನಿಧನವಾಗಿದ್ದಾರೆ. ಇದರಿಂದ ನಾನೂ ಮತ್ತು ಮಗು ಅನಾಥವಾಗಿದ್ದೇವೆ. ತಿನ್ನುವ ಅನ್ನಕ್ಕೂ ಪರದಾಡುವಂತ್ತಾಗಿ ಊರೂರು ಅಲೆಯುತ್ತಾ ಭಿಕ್ಷೆ ಬೇಡಿ ಮಗುವನ್ನು ಸಾಕಲು ಪ್ರಯತ್ನಿಸಿದೆ. ಆದರೆ ಭಿಕ್ಷೆ ಬೇಡಿ ಬಂದ ಹಣದಲ್ಲಿ ಮಗುವನ್ನು ಸಾಕುವುದು ಕಷ್ಟವಾಗಿತ್ತು. ಇದರ ಜೊತೆಗೆ ನಾನೂ ಆಗಾಗ ಕಾಯಿಲೆ ಬಿದ್ದು ನರಳುವಂತಾಯಿತು.

ನನ್ನ ಜತೆ ಮಗುವು ಸಾಯುವುದಕ್ಕಿಂತ ಬೇರೆಯವರ ಬಳಿಯಾದರೂ ತಕ್ಕಮಟ್ಟಿಗೆ ಬದುಕು ನಡೆಸಲಿ ಎಂದು ನನಗೆ ಮನಸ್ಸಿಲ್ಲದಿದ್ದರೂ ಮಗುವನ್ನು ಮಾರಾಟ ಮಾಡಲು ಮುಂದಾಗಿದ್ದೇನೆ. ಈ ಮಗು ಖಂಡಿತಾ ನನ್ನದೆ, ಕದ್ದ ಮಗುವಲ್ಲ ಎಂದು ಹಣೆ ಹಣೆ ಚಚ್ಚಿಕೊಂಡಿ ಅತ್ತಾಗ, ಮಕ್ಕಳ ಕಳ್ಳಿ ಎಂದುಕೊಂಡು ಬಂದವರ ಕಣ್ಣಲ್ಲೂ ನೀರು ಜಿನುಗುವಂತಾಗಿತ್ತು ಅಲ್ಲಿನ ದೃಶ್ಯ.ಸುದ್ದಿ ತಿಳಿದ ಬೇಲೂರು ಪೊಲೀಸ್ ಠಾಣೆ ಸಬ್ ಇನ್ಸ್‍ಪೆಕ್ಟರ್ ಸುರೇಶ್ ಸ್ಥಳಕ್ಕೆ ದಾವಿಸಿ, ತಾಯಿ ಮಗುವನ್ನು ತಮ್ಮ ಜೀಪಿನಲ್ಲಿ ಠಾಣೆಗೆ ಕರೆದುಕೊಂಡು ಹೋಗಿ ಊಟ. ಮಗುವಿಗೆ ಹಾಲು ಕೊಡಿಸಿದರು. ನಂತರ ಮಕ್ಕಳ ಕಲ್ಯಾಣ ಇಲಾಖೆ (ಸಿಡಿಪಿಒ)ಗೆ ಕರೆ ಮಾಡಿ ಬಡತನದಲ್ಲಿರುವ ತಾಯಿ ಮಗುವನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿ ಕೊಡಲಾಯಿತು.

 

► Follow us on –  Facebook / Twitter  / Google+

Facebook Comments

Sri Raghav

Admin