ಕೊಳಕ ಮಂಡಲ ಹಾವು ತಿಂದು ಸತ್ತ ಹುಲಿ

ಈ ಸುದ್ದಿಯನ್ನು ಶೇರ್ ಮಾಡಿ

taiger

ಹುಣಸೂರು, ಸೆ.22- ಕೊಳಕು ಮಂಡಲದ ಹಾವನ್ನು ತಿಂದ 9 ವರ್ಷದ ಹೆಣ್ಣು ಹುಲಿಯೊಂದು ನಂಜು ಏರಿ ಸಾವನ್ನಪ್ಪಿರುವ ಘಟನೆ ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ ಆನೆ ಚೌಕೂರು ಅರಣ್ಯ ಪ್ರದೇಶದಲ್ಲಿ ನಡೆದಿದೆ.ಆನೆಚೌಕೂರು ಸಿಪಿಟಿ 1 ರಲ್ಲಿ ಮುತ್ತುರಾಯಸ್ವಾಮಿ ದೇವಸ್ಥಾನದ ಬಳಿ ಹುಲಿ ಶವ ಪತ್ತೆಯಾಗಿದ್ದು, ಹುಲಿಯ ಮರಣೋತ್ತರ ಪರೀಕ್ಷೆ ವೇಳೆ ಹೊಟ್ಟೆಯಲ್ಲಿ ಹಾವಿನ ಬಾಲ ಸಿಕ್ಕಿದೆ. ಚಿಪ್ಪು ಹಂದಿಯ ಚಿಪ್ಪುಗಳು ಸಹ ಪತ್ತೆಯಾಗಿವೆ. ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಹುಲಿಯ ಕೆಲ ಭಾಗಗಳನ್ನು ಸಂಗ್ರಹಿಸಿ ಕಳುಹಿಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದರ್ ತಿಳಿಸಿದರು. ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಪಶು ವೈದ್ಯ ಡಾ.ಉಮಾಶಂಕರ್ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಹುಲಿಯನ್ನು ಸುಟ್ಟು ಹಾಕಲಾಯಿತು.

 

► Follow us on –  Facebook / Twitter  / Google+

Facebook Comments

Sri Raghav

Admin