ಪಡಿತರ ಕೂಪನ್ ಪದ್ಧತಿ ರದ್ದಿಗೆ ಆಗ್ರಹಿಸಿ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

belagam-3
ಗದಗ,ಸೆ.22- ಆಹಾರ ಇಲಾಖೆಯಿಂದ ಪಡಿತರ ವ್ಯವಸ್ಥೆಯಲ್ಲಿ ಸುಧಾರಣೆ ನೆಪದಲ್ಲಿ ಆಧಾರ್ ಕಾರ್ಡ್ ಜೋಡಣೆ ಮತ್ತು ಇತ್ತೀಚೆಗೆ ಕೂಪನ್ ಪದ್ದತಿ ಯನ್ನು ಜಾರಿಗೆ ತಂದು ರಾಜ್ಯದ ಜನರ ನೆಮ್ಮದಿ ಭಾಗ್ಯ ಕಸಿದುಕೊಳ್ಳುತ್ತಿರುವ ರಾಜ್ಯ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಮಿತಿ, ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣ ಸಮಿತಿಯ ನೇತೃತ್ವದಲ್ಲಿ ನಗರದ ಗಾಂಧಿ ಸರ್ಕಲ್‍ನಲ್ಲಿ ರಾಜ್ಯ ಸರ್ಕಾರದ ಕೂಪನ್ ಪ್ರತಿಗಳನ್ನು ಸೂಡುವ ಮೂಲಕ ಪ್ರತಿಭಟನೆ ನೆಡೆಸಿದರು.ಪ್ರತಿಭಟನಾಕಾರರು ನಗರದ ಗಾಂಧಿ ಸರ್ಕಲ್‍ನಿಂದ ತಹಶಿಲ್ದಾರ ಕಚೇರಿ ಯವರೆಗೊ ಪ್ರತಿಭಟನಾ ರ್ಯಾಲಿ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸ್ಲಂ ಸಮಿತಿ ಉಪಾಧ್ಯಕ್ಷ ಅಶೋಕ ಕುಡತಿನ್ನಿ ಮಾತನಾಡಿ, ಆಹಾರ ಪಡಿತರ ವ್ಯವಸ್ಥೆಯಲ್ಲಿ ಸ್ಮಧಾರಣೆ ತರುವ ನಿಟ್ಟಿನಲ್ಲಿ ಆಧಾರ್ ಕಾರ್ಡ ಜೋಡಣೆ ಮತ್ತು ಕೂಪನ್ ಪದ್ದತಿಯನ್ನು ಜಾರಿಗೆ ತಂದಿರುವುದರಿಂದ ರಾಜ್ಯದಲ್ಲಿನ ಲಕ್ಷಾಂತರ ಅರ್ಹ ಬಡ ಕುಟುಂಬಗಳ ಪಡಿತರ ಕಾರ್ಡ್‍ಗಳನ್ನು ರದ್ದುಗೊಳಿಸಲು ಸರ್ಕಾರ ಮುಂದಾಗಿರುವುದು ಬಡ ಕುಟುಂಬಗಳ ಬದುಕುವ ಆಧಾರವಾಗಿರುವ ಪಡಿತರ ಚೀಟಿಗಳನ್ನು ರದ್ದುಗೊಂಡರೆ ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳು ಉಪವಾಸ ಬೀಳುವ ವ್ಯವಸ್ಥೆಗೆ ರಾಜ್ಯ ಸರ್ಕಾರವೇ ಕಾರಣವಾಗುತ್ತದೆ ಎಂದು ಹೇಳಿದರು. ಸ್ಲಂ ಸಮಿತಿ ಅಧ್ಯಕ್ಷ ಅಶೋಕ ಮ್ಯಾಗೇರಿ, ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ.ಆರ್.ಮಾನ್ವಿ, ದುರ್ಗಪ್ಪ ನವಲಗುಂದ, ರವಿಕುಮಾರ ಬೆಳಮಕರ, ಜೈಭೀಮ ಸಂಘಟನೆ ಅಧ್ಯಕ್ಷ ಗಣೇಶ ಹುಬ್ಬಳಿ, ಜನಾಭಿವೃಧ್ದಿ ಸಂಘಟನೆ

 

ಅಧ್ಯಕ್ಷ ಹುಲ್ಲೇಶ ಭಜಂತ್ರಿ, ರಾಘವೇಂದ್ರ ಪರಾಪೂರ, ಎಂ.ಎಸ್.ಪರ್ವತಗೌಡ, ಸ್ಲಂ ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಮೆಹರುನಿಸಾ ಢಾಲಾಯತ, ಮಮ್ತಾಜ್‍ಬೇಗಂ ಮಕಾನದಾರ, ಯುವ ಸಮಿತಿ ಅಧ್ಯಕ್ಷ ಸಂತೋಷ ಬಣಕಾರ, ಉಪಾಧ್ಯಕ್ಷ ಸಲೀಮ ಢಾಲಾಯತ, ನಾಗರಾಜ ನವಲಗುಂದ, ಶ್ರೀಕಾಂತ ಭಜಂತ್ರಿ, ಕಾರ್ಯದರ್ಶಿ ವಿಕ್ರಮ.ಎಫ್.ಜಿ. ಸಹ ಕಾರ್ಯದರ್ಶಿ ಮಹ್ಮದರಫೀಕ ಮದ್ಲಿವಾಲೆ, ಆಶೀಫ ಮಟ್ಟಿ, ಅಬುಬಕರ ಮಕಾನದಾರ, ಅಶೋಕ ಕುಸಬಿ, ರಸೂಲ ಬೇಪಾರಿ, ದಾವಲ ತಟ್ಟಿಮನಿ, ಜಂದಿಸಾಬ ಮಜ್ಜಗಿ, ಮಲೀಕ ಶೇಖ, ಹಸನ ಕಕ್ಕಿಹಳ್ಳಿ, ರಾಜು ನವಲಗುಂದ, ಸುಂಕಪ್ಪ ಬಿಜಾಪೂರ, ಕಮಲವ್ವ ಬಿದರೂರು, ಮರ್ದಾನಬಿ ಬಳ್ಳಾರಿ, ರಾಘವೇಂದ್ರ ಐಲಿ, ಇಮ್ತಿಯಾಜ ಕರಡಿ, ಬಿಕ್ಕಪ್ಪ ದೊಡ್ಡಮನಿ, ಅಜರುದ್ದಿನ ಪೀರಖಾನ, ಹಾಗೂ ನಗರದ ಅನೇಕ ಸ್ಲಂ ಪ್ರದೇಶಗಳಿಂದ ನೂರಾರು ನಿವಾಸಿಗಳು ಭಾಗವಹಿಸಿದ್ದರು.

 

Follow us on –  Facebook / Twitter  / Google+

Facebook Comments

Sri Raghav

Admin