ಸೆ.25ರಿಂದ ವಜ್ರಲೇಪಿತ ಸಿಂಹಾಸನ ಜೋಡಣಾ ಕಾರ್ಯ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

Throne

ಮೈಸೂರು,ಸೆ.22- ವಿಶ್ವವಿಖ್ಯಾತ ಮೈಸೂರು ದಸರೆಯ ಆಕರ್ಷಣೆಗಳಲ್ಲಿ ಒಂದಾದ ಸಿಂಹ ವಜ್ರಖಚಿತ ಸಿಂಹಾಸನದ ಜೋಡಣಾ ಕಾರ್ಯ ಇದೇ 25ರಿಂದ ನಡೆಯಲಿದೆ. ಅರಮನೆಯ ಭದ್ರತಾ ಕೊಠಡಿಯಲ್ಲಿರುವ ಸಿಂಹಾಸನವನ್ನು ಭಾನುವಾರದಂದು ಹೊರತೆಗೆಯಲಾಗುತ್ತದೆ. ಅಂದು ಬೆಳಗ್ಗೆ 6 ಗಂಟೆಗೆ ಧಾರ್ಮಿಕ ವಿಧಿವಿಧಾನಗಳ ಮೂಲಕ ಸಿಂಹಾಸನವನ್ನು ಹೊರತೆಗೆದು ಬೆಳಗ್ಗೆ 8.10ರಿಂದ 9.40ರೊಳಗೆ ಸಿಂಹಾಸನ ಜೋಡಣಾ ಕಾರ್ಯ ನೆರವೇರಲಿದೆ.   ನಂತರ ಸಿಂಹಾಸನವನ್ನು ಕನ್ನಡಿ ತೊಟ್ಟಿಯಲ್ಲಿ ಇರಿಸಲಾಗುತ್ತದೆ. ಸಿಂಹಾಸನ ಜೋಡಣೆ ಸಂದರ್ಭದಲ್ಲಿ ಯಾರಿಗೂ ಪ್ರವೇಶಿರುವುದಿಲ್ಲ. ಅರಮನೆಯ ಭದ್ರತಾ ಸಿಬ್ಬಂದಿ ನಗರ ಪೊಲೀಸ್ ಆಯುಕ್ತ ದಯಾನಂದ್ ಪ್ರಮೋದಾ ದೇವಿ ಒಡೆಯರ್ ಯಧುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್, ಜಿಲ್ಲಾಧಿಕಾರಿ ರಂದೀಪ್, ಅರಮನೆ ಮಂಡಳಿ ಉಪನಿರ್ದೇಶಕ ಸುಬ್ರಮಣ್ಯ ಸೇರಿದಂತೆ ಮತ್ತಿತರ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ.

► Follow us on –  Facebook / Twitter  / Google+

Facebook Comments

Sri Raghav

Admin