ಪತ್ರಕರ್ತನ ಕೊಲೆ : ಲಾಲೂ ಪುತ್ರ ಹಾಗೂ ಶಹಾಬುದ್ದೀನ್ಗೆ ಸುಪ್ರೀಂ ನೋಟಿಸ್
ನವದೆಹಲಿ, ಸೆ.23-ಹತ್ಯೆಯಾದ ಪತ್ರಕರ್ತ ರಾಜ್ದೇವ್ ರಂಜನ್ ಪ್ರಕರಣವನ್ನು ಮುಂದುವರೆಸುವಂತೆ ಸಿಬಿಐಗೆ ಇಂದು ಸೂಚಿಸಿದ ಸುಪ್ರೀಂಕೋರ್ಟ್, ಅವರ ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದೂ ಬಿಹಾರ ಪೊಲೀಸರಿಗೆ ಸೂಚಿಸಿದೆ. ಈ ಪ್ರಕರಣವನ್ನು ಬಿಹಾರದ ಸಿವಾನ್ನಿಂದ ದೆಹಲಿಗೆ ವರ್ಗಾಯಿಸಬೇಕೆಂದು ರಂಜನ್ ಪತ್ನಿ ಕೋರಿದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಈ ಸಂಬಂಧ ಆರ್ಜೆಡಿ ನಾಯಕ ಶಹಾಬುದ್ದೀನ್, ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ಯಾದವ್ ಅವರ ಪುತ್ರ ಆರೋಗ್ಯ ಸಚಿವ ತೇಜ್ ಪ್ರತಾಪ್ ಯಾದವ್ ಮತ್ತು ಬಿಹಾರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಈ ಪ್ರಕರಣದ ಬಗ್ಗೆ ಅಕ್ಟೋಬರ್ 17ಕ್ಕೆ ಮುನ್ನ ತನ್ನ ತನಿಖೆಯ ಸ್ಥಿತಿ ವರದಿಯನ್ನು ಸಲ್ಲಿಸುವಂತೆ ಸಿಬಿಐಗೆ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ಪೀಠ ಸೂಚಿಸಿದೆ.
► Follow us on – Facebook / Twitter / Google+
Facebook Comments