ಯುದ್ಧಭೀತಿ : ಇಸ್ಲಾಮಾಬಾದ್ ಮೇಲೆ ಹಾರಾಡಿದ ಎಫ್-16 ಯುದ್ಧವಿಮಾನ

ಈ ಸುದ್ದಿಯನ್ನು ಶೇರ್ ಮಾಡಿ

F16

ಇಸ್ಲಾಮಬಾದ್, ಸೆ.23- ಕಾಶ್ಮೀರದಲ್ಲಿ ಉರಿ ಉಗ್ರದಾಳಿ ಬಳಿಕ ಭಾರತ- ಪಾಕಿಸ್ತಾನ ಸಂಬಂಧ ಹದಗೆಟ್ಟಿರುವ ನಡುವೆಯೇ, ಗುರುವಾರ ರಾತ್ರಿ ಎಫ್-16 ಯುದ್ಧವಿಮಾನ ಇಸ್ಲಾಮಾಬಾದ್ ಮೇಲೆ ಹಾರಾಡುತ್ತಿದೆ ಎಂದು ಪಾಕಿಸ್ತಾನಿ ಪತ್ರಕರ್ತರೊಬ್ಬರು ಭಯಾನಕ ಸುದ್ದಿ ಸ್ಫೋಟಿಸಿದ್ದಾರೆ.  ಪತ್ರಕರ್ತ ಹಮೀದ್ ಮಿರ್ ಈ ಮಾಹಿತಿಯನ್ನು ಟ್ವೀಟ್ ಮೂಲಕ ಬಹಿರಂಗಪಡಿಸಿದ್ದಾರೆ. ಎಫ್-16 ಯುದ್ಧ ವಿಮಾನ ರಾತ್ರಿ 10.20ಕ್ಕೆ ಇಸ್ಲಾಮಾಬಾದ್ ಮೇಲೆ ಹಾರಾಡುತ್ತಿತ್ತು ಎಂದು ಅವರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಎಲ್ಲೆಡೆ ಕಳವಳ ಮತ್ತು ಕುತೂಹಲ ಸೃಷ್ಟಿಸಿದ ಬೆನ್ನಲ್ಲೇ ಅವರು ಮರು ಟ್ವೀಟ್ ಮಾಡಿ, ಭೀತಿಪಡುವ ಅಗತ್ಯವಿಲ್ಲ. ನಮ್ಮ ಪಡೆಗಳು ಸಂಪೂರ್ಣ ಜಾಗೃತವಾಗಿವೆ ಮತ್ತು ಯುದ್ಧಕ್ಕೆ ಅಣಿಯಾಗಿವೆ ಎನ್ನುವುದನ್ನು ಇಸ್ಲಾಮಾಬಾದ್ ಜನತೆಗೆ ಖಾತ್ರಿ ಪಡಿಸುವ ಪ್ರಯತ್ನ ಇದು ಎಂದು ಸ್ಪಷ್ಟಪಡಿಸಿದ್ದಾರೆ.

ಮೀರ್ ಅವರ ಸ್ಪಷ್ಟನೆಯು, ಬಹುಶಃ ಪಾಕಿಸ್ತಾನದಲ್ಲಿ ವಾಯು ಸಮರಾಭ್ಯಾಸ ನಡೆದಿದೆ ಎಂಬ ಅಂಶವನ್ನು ಬಹಿರಂಗಪಡಿಸಿದೆ. ಆದರೆ ಈ ಬಗ್ಗೆ ಅಧಿಕೃತ ದೃಢೀಕರಣ ಇದುವರೆಗೆ ಬಂದಿಲ್ಲ.

► Follow us on –  Facebook / Twitter  / Google+

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin