ಈಜಿಪ್ಟ್ ಕರಾವಳಿಯಲ್ಲಿ ಸಂಭವಿಸಿದ್ದ ನೌಕಾ ದುರಂತ : ಸತ್ತವರ ಸಂಖ್ಯೆ 162ಕ್ಕೆ ಏರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Ezypt

ಕೈರೋ, ಸೆ.22-ಈಜಿಪ್ಟ್ ಕರಾವಳಿಯಲ್ಲಿ ಅಕ್ರಮ ವಲಸಿಗರ ನೌಕೆಯೊಂದು ಮುಳುಗಿ ಸಂಭವಿಸಿದ ದುರಂತದಲ್ಲಿ ಸತ್ತವರ ಸಂಖ್ಯೆ 115ಕ್ಕೇರಿದೆ. ಈ ದುರ್ಘಟನೆ ಸ್ಥಳದಿಂದ ಈವರೆಗೆ 162 ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಕಣ್ಮರೆಯಾದವರಿಗೆ ತೀವ್ರ ಶೋಧ ಮುಂದುವರೆದಿದೆ.  ಈಜಿಪ್ಟ್ನ ಕಫ್ರ್-ಅಲ್-ಶೇಕ್ ಕರಾವಳಿಯಲ್ಲಿ 600 ವಲಸಿಗರಿದ್ದ ಅನಧಿಕೃತ ನೌಕೆ ಬುಧವಾರ ಮುಳುಗಿತ್ತು. ಈ ದುರಂತದ ನಂತರ ಗುರುವಾರ 53 ಮೃತದೇಹಗಳು ಪತ್ತೆಯಾದವು. ನಿನ್ನೆ ಇನ್ನೂ 47 ಶವಗಳನ್ನು ರಕ್ಷಣಾ ಕಾರ್ಯಕರ್ತರು ಹೊರತೆಗೆದಿದ್ದಾರೆ. ಎಂದು ಆರೋಗ್ಯ ಸಚಿವಾಲಯದ ಅಧಿಕಾರಿ ಅಡೆಲ್ ಖಾಲೀಫಾ ತಿಳಿಸಿದ್ದಾರೆ.

ನೌಕೆಯ ಸಾಮಥ್ರ್ಯಕ್ಕಿಂತ ಅತ್ಯಧಿಕ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದರಿಂದ ಈ ದುರಂತ ಸಂಭವಿಸಿದೆ. ರಕ್ಷಣಾ ಕಾರ್ಯಕರ್ತರು 150ಕ್ಕೂ ಮಂದಿಯನ್ನು ರಕ್ಷಿಸಿದ್ದು, ಕಣ್ಮರೆಯಾದವರಿಗೆ ತೀವ್ರ ಶೋಧ ಮುಂದುವರಿಸಿದ್ದಾರೆ. ನುರಿತ ಈಜುಗಾರರನ್ನು ಸಮುದ್ರದೊಳಗೆ ಇನ್ನುಳಿದ ಶವಗಳಿಗೆ ಶೋಧ ನಡೆಸುತ್ತಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕವಿದೆ.
ಇಷ್ಟು ದೊಡ್ಡ ಸಂಖ್ಯೆಯ ವಲಸಿಗರನ್ನು ಕಫ್ರ್-ಅಲ್-ಶೇಕ್ ಕರಾವಳಿ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣ ಈವರೆಗೆ ಕಂಡುಬಂದಿಲ್ಲ ಎಂದು ಭದ್ರತಾ ಮೂಲಗಳು ಮತ್ತು ಸ್ಥಳೀಯ ಹೇಳಿಕೆಯನ್ನು ಎಂಇಎನ್ಎ ಸುದ್ದಿ ಸಂಸ್ಥೆ ಉಲ್ಲೇಖಿಸಿ ವರದಿ ಮಾಡಿದೆ.

ಈ ಹಡಗಿನಲ್ಲಿ ಈಜಿಪ್ಟ್, ಸಿರಿಯಾ ಮತ್ತು ಆಫ್ರಿಕಾದ ಅಕ್ರಮ ವಲಸಿಗರಿದ್ದರು. ಕಫ್ರ್-ಅಲ್-ಶೇಕ್ ಕರಾವಳಿ ಪ್ರದೇಶದಲ್ಲಿ ದೋಣಿಗಳಲ್ಲಿ ಅಕ್ರಮ ವಲಸಿಗರನ್ನು ಸಾಗಿಸುವ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗುತ್ತಿದ್ದು, ದುರಂತಗಳಿಗೂ ಕಾರಣವಾಗುತ್ತಿದೆ.

► Follow us on –  Facebook / Twitter  / Google+

Facebook Comments

Sri Raghav

Admin