ಪಂ. ದೀನದಯಾಳ್ ಉಪಾಧ್ಯಾಯ ಅಭಿವೃದ್ಧಿಗೆ ಮುನ್ನುಡಿ ಬರೆದ ಮಹಾನ್ ಶಿಲ್ಪಿ

ಈ ಸುದ್ದಿಯನ್ನು ಶೇರ್ ಮಾಡಿ

abhiruddi

ಬಾಗಲಕೋಟೆ,ಸೆ.26- ಪಂ. ದೀನದಯಾಳ್ ಉಪಾಧ್ಯಾಯ ಅವರು ಭಾರತದ ಅಭಿವೃದ್ಧಿಗೆ ಮುನ್ನುಡಿ ಬರೆದ ಮಹಾನ್ ಶಿಲ್ಪಿ, ಅವರ ಆದರ್ಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕ್ರಾಂತಿಕಾರಕ ತೀರ್ಮಾನಗಳ ಮೂಲಕ ಬಡವರ, ರೈತರ, ಕಾರ್ಮಿಕರ ಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದ್ದಾರೆ.ನಗರದ ಶಿವಾನಂದ ಜಿನದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಪ?ದ ವತಿಯಿಂದ ನಡೆದ ಪಂ. ದೀನದಯಾಳ್ ಉಪಾಧ್ಯಾಯ ಅವರ ಜನ್ಮಶತಾಬ್ಧಿ ಕಾರ್ಯಕ್ರಮದಲ್ಲಿ ಬಡವರಿಗೆ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು 60 ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಸರಕಾರ ಏನನ್ನು ಮಾಡಲಿಲ್ಲ, ಬಿಜೆಪಿ ಸರಕಾರ

ಅದನ್ನು ಕೇವಲ ಎರಡುವರೆ ವರ್ಷದಲ್ಲಿ ಮಾಡುತ್ತಿದೆ ಎಂದರು. ಪಂ. ದೀನದಯಾಳ ಉಪಾಧ್ಯಾಯನ ಅವರು ಎಲ್ಲ ಶಿ?ಣ, ರಾಜಕೀಯ ಸೇರಿದಂತೆ ಎಲ್ಲ   ಜ್ಞಾನವನ್ನು ಹೊಂದಿ ಪ?ದ ಸ್ಥಾಪನೆಯಲ್ಲಿ ಅವರ ಕಾರ್ಯ ಪ್ರಮುಖವಾಗಿದೆ ಎಂದು ಬಣ್ಣಿಸಿ ಅವರ ತತ್ವ ಸಿದ್ದಾಂತಗಳಡಿ ಪ?ದ ಕಾರ್ಯಕರ್ತರು ಮುನ್ನಡಬೇಕೆಂದು ಕರೆ ನೀಡಿದರು.ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ ಪಂ. ದೀನದಯಾಳ್ ಅವರ ಆದರ್ಶವನ್ನು ಸಮಗ್ರವಾಗಿ ವಿವರಿಸಿ ಕಾರ್ಯ ಕರ್ತರಿಗೆ ಸ್ಥಾನ, ಗೌರವ ಅವರನ್ನೆ ಅವಲಂಬಿಸಿರುವ ಏಕೈಕ ಪ? ಬಿಜೆಪಿ ಎಂದರು.ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಎಂ.ಎಸ್. ಪಾಟೀಲ, ಸಭಾಪತಿ ಭಾರತಿ ಕೂಡಗಿ, ಸದಸ್ಯರಾದ ಯಲ್ಲಪ್ಪ ಬೆಂಡಿಗೇರಿ, ನಗರ ಅಧ್ಯ? ರಾಜು ನಾಯ್ಕರ, ಗ್ರಾಮೀಣ ಅಧ್ಯ? ರಾಜಶೇಖರ ಮುದೇನೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ರೇವಣಕರ, ಕಳಕಳಪ್ಪ ಬಾದೋಡಗಿ, ಕಲಾವತಿ ರಾಜೂರ, ಮಹೇಶ ಅಥಣಿ, ಶರಣಪ್ಪ ಗುಳೇದ, ಸಂಗಮೇಶ ಹಿತ್ತಲಮನಿ ಮತ್ತಿತರರು ಪಾಲ್ಗೊಂಡಿದ್ದರು

► Follow us on –  Facebook / Twitter  / Google+

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin