ಬೆಳಗಾವಿ ನಗರದಲ್ಲಿ ಮೀಟರ್ ಅಳವಡಿಸದ 15 ಆಟೋ ವಶಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ato
ಬೆಳಗಾವಿ,ಸೆ.26- ಜಿಲ್ಲಾಧಿಕಾರಿ ಸತತ ಆದೇಶದ ಮೇರೆಗೂ ನಗರದಲ್ಲಿ ಆಟೋ ಮೀಟರ್ ಜಾರಿಯಾಗದೇ ಮುಂದುವರೆದ ಭಾಗವಾಗಿ ಪೊಲೀಸರು ಗಂಭೀರತೆ ತಾಳಿದ್ದು ಇಂದಿನಿಂದ ಆಟೋ ಡ್ರೈವ್ ಪ್ರಾರಂಭಿಸಿದ್ದಾರೆ.ನಗರದಲ್ಲಿ ಸೂಕ್ತ ದಾಖಲೆಗಳಿಲ್ಲದೇ ತಿರುಗಾಡುತ್ತಿದ್ದ ಮೀಟರ್ ಹೊಂದದ ಸುಮಾರು 15 ಆಟೋಗಳನ್ನು ಉತ್ತರ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದ ಎಲ್ಲ ಆಟೋಗಳ ಸೂಕ್ತ ದಾಖಲೆ, ಚಾಲಕರ ಯೂನಿಫಾರ್ಮ  ಹಾಗೂ ಮೀಟರ್ ಕಡ್ಡಾಯ ಡ್ರೈವರ್ ಇಂದಿನಿಂದ ಪ್ರಾರಂಭವಾಗಲಿದೆ ಎಂದು ಇನ್ಸ್‍ಪೆಕ್ಟರ್ ಜಾವೇದ ಮುಶಾಪುರಿ ತಿಳಿಸಿದ್ದಾರೆ. ಸಂಚಾರಿ ದಕ್ಷಿಣ ವಿಭಾಗದಲ್ಲೂ ಆಟೋ ತಪಾಸಣಾ ಡ್ರೈವ್ ಪ್ರಾರಂಭಿಸುವುದಾಗಿ ಇನ್ಸ್‍ಪೆಕ್ಟರ್ ಧರ್ಮಟ್ಟಿ ಪ್ರತಿಕ್ರಿಯಿಸಿದ್ದಾರೆ. ಸಿಕ್ಕಾಪಟ್ಟೆ ಜನರಿಂದ ಹಣ ವಸೂಲಿ ಮಾಡುವ ಆಟೋ ಚಾಲಕರಿಗೆ, ಬೆನಾಮಿ ಆಟೋಗಳಿಗೆ ಬ್ರೇಕ್ ಬೀಳಲಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin