ಯೋಧರಿಗೆ ಸನ್ಮಾನ ಮಕ್ಕಳಿಗೆ ಬಹುಮಾನ

ಈ ಸುದ್ದಿಯನ್ನು ಶೇರ್ ಮಾಡಿ

belagam-3

ಮೂಡಲಗಿ,ಸೆ.26- ವಿದ್ಯಾರ್ಥಿಗಳು ಯೋಧರನ್ನು ಗೌರವಿಸುವ ಮೂಲಕ ನಮ್ಮ ದೇಶದ ಬಗ್ಗೆ ಆತ್ಮಾಭಿಮಾನ ಬೆಳೆಸಿಕೊಳ್ಳಬೇಕೆಂದು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹೇಳಿದರು. ಅವರು ತುಕ್ಕಾನಟ್ಟಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಗ್ರಾಮದ 11 ಜನ ಯೋಧರರಿಗೆ ಸನ್ಮಾನ ಮತ್ತು ಶುಕ್ರವಾರ ಸಂಜೆ ಕಾರ್ಯಕ್ರಮ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ಶಾಲೆಯಲ್ಲಿ ಯೋಧರನ್ನು ಸನ್ಮಾನಿಸುವುದು ಮತ್ತು ವಿದ್ಯಾರ್ಥಿಗಳಿಗೆ ಪ್ರತಿ ವಾರ  ಬಹುಮಾನ ನೀಡುವ ಕಾರ್ಯಕ್ರಮ ಏರ್ಪಡಿಸುತ್ತಿರುವುದು ಮಕ್ಕಳ ಕಲಿಕೆಗೆ ಸಹಾಯಕಾವಾಗುವುದು. ವೀರ ಯೋಧರು ದೇಶಕ್ಕಾಗಿ ದುಡಿಯುತ್ತಿರುವ ಸಂದರ್ಭದಲ್ಲಿ ತಾನು ಕಲಿತ ಶಾಲೆ ಮತ್ತು ಗ್ರಾಮವನ್ನು ಯಾವಾಗಲು ಮರೆಯಬಾರದು, ಯೋಧರು ಸೇವೆ ಜೊತೆಗೆ ತಮ್ಮ ಶಿಕ್ಷಣವನ್ನು ಮುಂದುವರಿಸಿಕೊಂಡು ಮುಂದೆ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುವುದರ ಮೂಲಕ ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ತುಕ್ಕಾನಟ್ಟಿ ಶಾಲೆಯಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು, ವಿವಿಧ ಕ್ಷೇತ್ರದಲ್ಲಿ ವ್ಯಕ್ತಿಗಳನ್ನು ಅತಿಥಿಗಳಾಗಿ ಆಹ್ವಾನಿಸುವ ಮುಖಾಂತರ ಮಕ್ಕಳಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಶ್ರಮಿಸುತ್ತಿರುವ ಶಿಕ್ಷಕ ವೃಂದ ಕಾರ್ಯ ಶ್ಲಾಘನಿವಾದದು ಎಂದರು.
ಗ್ರಾಮದ ಯೋಧರಾದ ಬಾಳಪ್ಪ ಗದಾಡಿ, ಪುಂಡಲೀಕ ಉಪ್ಪಾರ, ಸಿದ್ಧಪ್ಪ ಅಗ್ನೆಪ್ಪಗೋಳ, ನಾಗಪ್ಪ ಹಾಲಟ್ಟಿ, ಬೈರಪ್ಪ ಸಂಗ್ಯಾನಟ್ಟಿ, ಸಿದ್ಧಪ್ಪ ಅರಭಾಂವಿ, ಗುರುನಾಥ ಗದಾಡಿ, ಸಿದ್ದಪ್ಪ ತುರನೂರ, ನಾರಾಯಣ ಮಲ್ಲಾಪೂರ, ಹನಮಂತ ಅಜ್ಜನಕ್ಕಿ, ಚಂದ್ರಶೇಖರ ಗದಾಡಿ ಅವರನ್ನು ಸತ್ಕರಿಸಲಾಯಿತು. ಶಾಲೆಯ ಪ್ರಧಾನ ಗುರು ಎ.ವ್ಹಿ.ಗಿರೆಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಕಲ್ಲೋಳಿ ಸಿಆರ್‍ಪಿ ಎಸ್.ಬಿ. ಕುಂಬಾರ, ಶಿಕ್ಷಕರಾದ ಕೆ.ಆರ್.ಬಂಜತ್ರಿ, ಎಸ್.ಡಿ.ಲಮಾಣಿ, ಪುಷ್ಪಾ ಭರಮದೆ, ಲಕ್ಷ್ಮೀ ಹೆಬ್ಬಾಳ, ವಿಮಲಾಕ್ಷಿ ತೋರಗಲ್ಲ, ನಾಗರತ್ನಾ ಗಿರೆಪ್ಪಗೌಡ್ರ, ಕುಸುಮಾ ಚಿಗರಿ, ಮಲ್ಲವ್ವ ಕಡಕೋಳ, ಶೀಲಾ ಕುಲಕರ್ಣಿ, ಎಮ್.ಕೆ.ಕಮ್ಮಾರ, ಮತ್ತಿತರರು ಇದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin