ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿಯಿಂದ  600 ಕೋಟಿ ಅವ್ಯವಹಾರ

ಈ ಸುದ್ದಿಯನ್ನು ಶೇರ್ ಮಾಡಿ

Ramesh

ಬೆಂಗಳೂರು,ಸೆ.26-ಎಚ್‍ಐವಿ ರೋಗ ತಡೆಗಟ್ಟಲು ಬಿಡುಗಡೆಯಾಗಿರುವ 700 ಕೋಟಿ ರೂ. ಅನುದಾನದಲ್ಲಿ 600 ಕೋಟಿ ಅನುದಾನವನ್ನು ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ ದುರುಪಯೋಗಪಡಿಸಿಕೊಂಡಿದೆ ಎಂದು ನಗರ ಬಿಜೆಪಿ ವಕ್ತಾರ ಹಾಗೂ ಬಿಬಿಎಂಪಿ ಆಡಳಿತ ಮಾಜಿ ನಾಯಕ ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.  ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಅಧ್ಯಕ್ಷರಾಗಿದ್ದಾರೆ. ಈ ಸಂಸ್ಥೆಗೆ ಕೇಂದ್ರ ಸರ್ಕಾರ 150 ಕೋಟಿ, ರಾಜ್ಯ ಸರ್ಕಾರ 20 ಕೋಟಿ, ಯುನೆಸ್ಕೊ ಯುನಿಸೆಫ್ ಮತ್ತು ಬಿಲ್‍ಗೇಟ್ಸ್ ಸಂಸ್ಥೆ ಸೇರಿದಂತೆ ವಿವಿಧ ಸಂಸ್ಥೆಗಳಿಂದ ಒಟ್ಟಾರೆ 700 ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು.

ಈ ಅನುದಾನದ ಮೊತ್ತವನ್ನು ಎಚ್‍ಐವಿ ಪೀಡಿತ ರೋಗಿಗಳಿಗೆ ಹಾಗೂ ಮಕ್ಕಳ ಚಿಕಿತ್ಸಾ ವೆಚ್ಚಕ್ಕೆ ಅನುದಾನದ ಮೊತ್ತವನ್ನು ಉಪಯೋಗಿಸಬೇಕಾಗಿತ್ತು. ಆದರೆ ಈ ಸಂಸ್ಥೆಯವರು ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.  ಈ ಸಂಸ್ಥೆಯವರು ಹಣವನ್ನು ದುರುಪಯೋಗಪಡಿಸಿಕೊಂಡು ವೇಶ್ಯಾವಾಟಿಕೆಯಲ್ಲಿ ತೊಡಗಿದವರಿಗೆ, ಸಲಿಂಗಕಾಮಿಗಳಿಗೆ ವಿಶೇಷ ಸೌಲಭ್ಯ ನೀಡಬೇಕಾಗಿತ್ತು. ಕೇವಲ ಕಾಂಡೋಮ್ ನೀಡುತ್ತಿದ್ದಾರೆ. ಆದರೆ ಈ ಸಂಸ್ಥೆಯು ಎಚ್‍ಐವಿ ತಡೆಗಟ್ಟುವ ಬದಲು ಎಚ್‍ಐವಿಗೆ ಪೆÇ್ರೀತ್ಸಾಹ ನೀಡುತ್ತಿದೆ ಎಂಬ ಅನುಮಾನ ಕಂಡುಬರುತ್ತಿದೆ ಎಂದರು.

ಸರ್ಕಾರಿ ಸಂಸ್ಥೆಯ ನಿರೋಧ್‍ನ್ನೇ ವಿತರಣೆ ಮಾಡಬಹುದು. ಆದರೆ ಈ ಸಂಸ್ಥೆಯು ಕೊಹಿನೂರು ಖಾಸಗಿ ಸಂಸ್ಥೆಯೊಂದಿಗೆ ಶಾಮಿಲಾಗಿ ದುಬಾರಿ ಬೆಲೆಯ ಕಾಂಡೋಮ್‍ಗಳನ್ನು ವಿತರಿಸುತ್ತಿದ್ದಾರೆ. ಅಲ್ಲದೆ ಕಳೆದ ಮೂರು ವರ್ಷಗಳಿಂದ 600 ಕೋಟಿಗೂ ಹೆಚ್ಚು ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವ ಅನುಮಾನ ಮೂಡಿದೆ ಎಂದರು.  ಈ ಸಂಸ್ಥೆಯು ಇದುವರೆಗೂ ಏಡ್ಸ್ ರೋಗ ನಿಯಂತ್ರಣ ಮತ್ತು ಅರಿವು ಮೂಡಿಸುವಂತಹ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸಿಲ್ಲ. 700 ಕೋಟಿ ಬಿಡುಗಡೆಯಾಗಿರುವ ಮೊತ್ತದ ಶೇ.90ರಷ್ಟು ದುರ್ಬಳಕೆ ಮಾಡಿಕೊಂಡು ಅವ್ಯವಹಾರದಲ್ಲಿ ತೊಡಗಿದ್ದಾರೆ ಎಂದು ಅವರು ಆರೋಪ ಮಾಡಿದ್ದಾರೆ.

ಈ ಹಿಂದೆ ಆರೋಗ್ಯ ಸಚಿವರಾಗಿದ್ದ ಯು.ಟಿ.ಖಾದರ್ ಅವರು ರಾಷ್ಟ್ರೀಯ ಆರೋಗ್ಯ ಅಭಿಯಾನ, ಕೆಎಸ್‍ಎಪಿಎಸ್, ಲೈಂಗಿಕ ಕಾರ್ಯಕರ್ತರ ಸ್ಥಿತಿಗತಿಗಳ ಅಧ್ಯಯನ ಸಮಿತಿಗೆ ಡಾ.ಲೀಲಾ ಸಂಪಿಗೆ ಅವರಿಗೆ ಗುತ್ತಿಗೆ ಆಧಾರದ ಮೇಲೆ ಹುದ್ದೆ ನೀಡಿದ್ದರು.  ಈ ಕುರಿತಂತೆ ಲೈಂಗಿಕ ಕಾರ್ಯಕರ್ತರ ಸ್ಥಿತಿಗತಿಗಳ ಅಧ್ಯಯನ ಸಮಿತಿÀ ಅಧ್ಯಕ್ಷೆ ಜಯಮಾಲಾ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಅವರಿಗೆ ದೂರು ನೀಡಲಾಗಿತ್ತು. ಇದಾದ ಬಳಿಕ ಡಾ.ಲೀಲಾಸಂಪಿಗೆ ಅವರು ಕೆಲಸದಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಲೀಲಾಸಂಪಿಗೆ ಅವರಿಗೆ ಗುತ್ತಿಗೆ ಆಧಾರದ ಮೇಲೆ ಸರ್ಕಾರಿ ಮಟ್ಟದ ಉನ್ನತ ಹುದ್ದೆಯನ್ನು ನೀಡಿರುವುದು ಅಕ್ಷಮ್ಯ ಅಪರಾಧ ಎಂದು ತಿಳಿಸಿದರು.

ಮೂರು ಸಂಸ್ಥೆಗಳಲ್ಲಿ ಅನುದಾನದ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದ್ದು, ಈ ಬಗ್ಗೆ ಆರೋಗ್ಯ ಸಚಿವ ತಮ್ಮ ಇಲಾಖೆಯ ಕಾರ್ಯ ವೈಖರಿ ಬಗ್ಗೆ ಕೂಡಲೇ ಶ್ವೇತಪತ್ರ ಹೊರಡಿಸಬೇಕು ಎಂದು ಎನ್.ಆರ್.ರಮೇಶ್ ಆಗ್ರಹಿಸಿದ್ದಾರೆ.  ರಾಜ್ಯದಲ್ಲಿ ಒಟ್ಟಾರೆ 1,42,000 ಮಂದಿ ವಲಸಿಗರು, 80 ಸಾವಿರ ಮಂದಿ ಚಾಲಕರು ಹಾಗೂ 4,064 ಮಂದಿ ಎಚ್‍ಐವಿ ಪೀಡಿತರಿದ್ದಾರೆ ಎಂದು ದಾಖಲೆಗಳಲ್ಲಿ ತೋರಿಸಿದ್ದಾರೆ. ಇಷ್ಟು ರೋಗಿಗಳಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಅನುದಾನ ಬಿಡುಗಡೆಯಾಗಿತ್ತು.  ಆದರೆ ಈ ಸಂಸ್ಥೆಯು ಕಾಟಾಚಾರಕ್ಕೆ ಕಾಂಡಮ್ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿ, ವೆಬ್‍ಸೈಟ್‍ನಲ್ಲಿ ಈ ಬಗ್ಗೆ ಗಮನಿಸಿದರೆ ಇದು ಸರ್ಕಾರಿ ಪ್ರಾಯೋಜಿತ ವೇಶ್ಯಾವಾಟಿಕೆ ಯೋಜನೆ ಎಂಬ ಅನುಮಾನ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದು ಎಂದು ಅವರು ತಿಳಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin