ಬಲಿಗಾಗಿ ಬಾಯ್ದೆರೆದಿರುವ ಕಂದಕ

ಈ ಸುದ್ದಿಯನ್ನು ಶೇರ್ ಮಾಡಿ

channapatana2

ಚನ್ನಪಟ್ಟಣ, ಸೆ.27- ತಾಲ್ಲೂಕಿನ ಅಕ್ಕೂರುಹೊಸಹಳ್ಳಿಗೆ ತೆರಳುವ ಸೋಮನಾಥಪುರ ಬಳಿಯ ಸೇತುವೆ ಬಳಿ ಭಾರೀ ಕಂದಕವೊಂದು ಬಲಿಗಾಗಿ ಬಾಯ್ದೆರೆದಿದೆ.ಸೋಮನಾಥಪುರ ಬಳಿ ನಿರ್ಮಾಣ ವಾಗಿದ್ದ ಸೇತುವೆ ತಾಲ್ಲೂಕಿನ ಗಡಿಭಾಗ ಇಗ್ಗಲೂರು ಹಾಗೂ ತಾಲ್ಲೂಕಿನ ತುಳಸಿ ಕಣಜ ಅಂಬಾಡಿಹಳ್ಳಿ ಸೇರಿದಂತೆ ಸುಮಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆಯಾಗಿದೆ.ಸೇತುವೆ ಶೀಥಿಲಗೊಂಡಂತೆ ಕೆಲ ವರ್ಷಗಳ ಹಿಂದೆ ಪಕ್ಕದಲ್ಲಿ ಮತ್ತೊಂದು ಸೇತುವೆಯನ್ನು ನಿರ್ಮಾಣಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗಿತ್ತು.

ಆದರೆ ಸೇತುವೆ ನಿರ್ಮಾಣವಾಗಿ ಹಲವು ದಶಕಗಳೇ ಕಳೆದಿದ್ದು, ಸೇತುವೆ ಮೇ ಸಿಮೆಂಟ್ ತಡೆಗೋಡೆ ಸಂಪೂರ್ಣವಾಗಿ ಮುರಿದು ಬಿದ್ದಿರುವುದರಿಂದ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಅಪಾಯದ ಮುನ್ಸೂಚನೆಯಾಗಿದೆ. ತಡೆಗೋಡೆಳು ಮಾಯವಾಗಿರುವುದರಿಂದ ದುರದೃಷ್ಟವಶಾತ್ ವಾಹನಗಳು ಆಯಾ ತಪ್ಪಿದರೆ ಏಕಾಏಕಿ ಕೆಳಗೆ ಬೀಳುವುದಂತೂ ಗ್ಯಾರಂಟಿ. ಭಾರೀ ಅನಾಹುತಕ್ಕೆ ಮುನ್ಸೂಚನೆಯಾಗಿರುವ ಸೇತುವೆಯ ಮೇಲೆ ನಿರ್ಮಾಣವಾಗಿರುವ ಕಂದಕವನ್ನು ಮುಚ್ಚಿ ವರ್ಷ ವರ್ಷಕ್ಕೂ ಶಿಥಿಲಗೊಳ್ಳುತ್ತಿರುವ ಸೇತುವೆಗಳಿಗೆ ಕಾಯಕಲ್ಪ ನೀಡಬೇಕು. ತಕ್ಷಣವೇ ಪಿಡಬ್ಲ್ಯೂಡಿ ಇಲಾಖೆಯವರು ಎಚ್ಚರ ವಹಿಸದಿದ್ದರೆ ಭಾರೀ ಟೀಕೆಗಳಿಗೆ ಒಳಗಾಗುವುದು ದೂರವಿಲ್ಲ.

 

► Follow us on –  Facebook / Twitter  / Google+

Facebook Comments

Sri Raghav

Admin