ವಿದ್ಯಾರ್ಥಿ ಉತ್ತಮ ನಾಗರಿಕನಾಗಿ ಬದುಕಲು ಕಲಿಸುವವನೆ ಶಿಕ್ಷಕ

ಈ ಸುದ್ದಿಯನ್ನು ಶೇರ್ ಮಾಡಿ

13

ರೋಣ,ಸೆ.27- ಒಬ್ಬ ವಿದ್ಯಾರ್ಥಿಯ ಜೀವನ ಚರಿತ್ರೆಯನ್ನು ಬದಲಾಯಿಸಿ ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಬದುಕಲು ಕಲಿಸುವವನೆ ಶಿಕ್ಷಕ ಎಂದು ಡಾ. ನಾನಾ ಪಾಟೀಲ ಹೇಳಿದರು.ಅವರು ನಿನ್ನೆ ಪಟ್ಟಣದ ನೂತನ ಗುರುಭವನದ ಸಭಾಂಗಣದಲ್ಲಿ ತಾಲ್ಲೂಕ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತನಾಡಿ ದೇಶವು ಆರ್ಥಿಕವಾಗಿ, ಸಾಮಾಜಿಕವಾಗಿ ಬೆಳೆಯಬೇಕಾದರೆ ದೇಶದಲ್ಲಿರುವ ಪ್ರತಿಯೂಬ್ಬರು ಶಿಕ್ಷಣವನ್ನು ಪಡೆದುಕೊಂಡಾಗ ಮಾತ್ರ ದೇಶ, ರಾಜ್ಯ ಮುಂದುವರೆಯಲು ಸಾಧ್ಯವಾಗುತ್ತದೆ. ಹೀಗಾಗಿ ಆ ಶಿಕ್ಷಣವನ್ನು ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ವಿದ್ಯೆಯನ್ನು ನೀಡುವವರೂ ಶಿಕ್ಷಕರು ಎಂದರು.
ಶಿಕ್ಷಕರು ತಮ ಕುಟುಂಬಕ್ಕಷ್ಟೆ ಸೀಮಿತವಲ್ಲದೆ ತಮ್ಮಲ್ಲಿ ವಿದ್ಯೆಯನ್ನು ಪಡೆದುಕೊಳ್ಳಲು ಬರುವ ಎಲ್ಲ ಮಕ್ಕಳಿಗೂ ತಮ ಜ್ಞಾನ ವನ್ನು ಹರಿಸಿದಾಗ ಮಾತ್ರ ಆ ಮಗುವಿನ ಭವಿಷ್ಯೆ ಉತ್ತಮವಾಗಿ ಸಮಾಜದಲ್ಲಿ ಬದುಕುವಂತೆ ಮಾಡುತ್ತದೆ. ಒಬ್ಬ ಶಿಕ್ಷಕ ಸೂರ್ಯನಂತೆ ನಿರಂತರವಾಗಿ ಬೆಳಕನ್ನು ನೀಡಬೇಕು ಅಂದಾಗ ಮಾತ್ರ ವಿದ್ಯಾರ್ಥಿಯ ಜೀವನ ಸುಂದರವಾಗಿರುತ್ತದೆ. ಯಾವುದೆ ಒಬ್ಬ ಮನುಷ್ಟನಿದ್ದರೂ ಅವನಲ್ಲಿ ಏನಾದರೂ ಒಂದು ವಿದ್ಯೆ ಇರಲೇಬೇಕು ಪ್ರತಿಯೂಬ್ಬರನ್ನು ವ್ಯರ್ಥ ಜೀವಿಯನ್ನದೆ ಎಲ್ಲರನ್ನು ಸಮಾನವಾಗಿ ಕಾಣಬೇಕು, ಈ ಎಲ್ಲಾ ಬಗೆಯ ನ್ಯೂನತೆಗಳನ್ನು ತೂಡೆದುಹಾಕಿಸಲು ಒಬ್ಬ ಆದರ್ಶ ಶಿಕ್ಷಕನಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅದ್ಯಕ್ಷೆತಯನ್ನು ವಹಿಸಿದ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಸರ್ಕಾರ ಪ್ರತಿಯೂಬ್ಬ ಕುಟುಂಬದವರೂ ಶಿಕ್ಷಣದಿಂದ ದೂರವಾಗಬಾರದು ಎನ್ನುವ ದೃಷ್ಠಿಕೋನದಿಂದ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದ್ದು, ಆ ಸೌಲಭ್ಯಗಳನ್ನು ಬಳಸಿಕೊಂಡು ನಿಮಗೆ ಕಲಿಸಿದ ಗುರುಗಳಿಗೆ ಒಳ್ಳೆಯ ಶಿಕ್ಷಕರಾಗಿ ಸಮಾಜದಲ್ಲಿ ಕಾರ್ಯ ನಿರ್ವಹಿಸಬೇಕು. ಪ್ರತಿಯೂಬ್ಬ ವ್ಯಕ್ತಿ ಸಮಾಜದಲ್ಲಿ ಉನ್ನತ ಸ್ಥಾನವನ್ನು ಹೊಂದಬೇಕಾದರೆ ಪ್ರತಿಯೂಬ್ಬನಿಗೂ ಗುರು ಅವಶ್ಯವಾಗಿರುತ್ತಾನೆ. ಗುರು ಎಂಬ ಪದಕ್ಕೆ ಪ್ರತಿಯೂಬ್ಬರೂ ಗೌರವ ಸಲ್ಲಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ನರಗುಂದ ಶಾಸಕ ಬಿ.ಆರ್. ಯಾವಗಲ್ಲ ಮಾತನಾಡಿ, ಸರ್ಕಾರ ಪ್ರತಿ ವರ್ಷ ಬಜಿಜ್ ನಲ್ಲಿ ಸುಮಾರು 20ಸಾವಿರ ಕೋಟೆ ರೂ, ಗಳನ್ನು ಶಿಕ್ಷಣಕ್ಕೆ ಖರ್ಚು ಮಾಡುತ್ತಿದೆ. ಶಿಕ್ಷಕರು ಎಂದರೆ ಮಕ್ಕಳಿಗೆ ಜ್ಞಾನ ರ್ಜನೆ ಮಾಡದೆ ಸಮಾಜದ ಸೇವಕರು, ಆ ಶಿಕ್ಷಕರು ಇರದೆ ಇದ್ದರೆ ಸಮಾಜದಲ್ಲಿ ಪ್ರೀತಿ ವಿಶ್ವಾಸ ಎನ್ನುವ ಸೌಹಾರ್ದತೆ ಇರುತ್ತಿರಲಿಲ್ಲ ಹೀಗಾಗಿ ಸಮಾಜದಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದಾಗಿದೆ, ಈ ದಿಶೆಯಲ್ಲಿ ಪ್ರತಿಯೂಬ್ಬರು ಗುರುವನ್ನು ಗೌರವಿಸುವ ಭಾವನೆಯನ್ನು ಬೆಳೆಸಿಕೊಳ್ಳಿರಿ ಎಂದು ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಗುರುಪಾದ ಸ್ವಾಮೀಜಿ ಆರ್ಶೀವಚನ ನೀಡಿದರು.

ಕಾರ್ಯಕ್ರಮದ ಪೂರ್ವದಲ್ಲಿ ಹುಲ್ಲೂರ ಪ್ರಾಥಮಿಕ ಶಾಲೆ ಮಕ್ಕಳಿಂದ ನಾಡಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಪಡೆದಕೊಂಡ ಕಡುಬಡತ ಜೀವ ನಡೆಸುತ್ತಿರುವ ಕುಮಾರ ತಿಮಸಾಬ ಆರ್. ಲಕ್ಕುಂಡಿ ಅವರನ್ನು ಸನ್ಮಾನಿಸಲಾಯಿತು. ಎಸ್.ಆರ್. ಪಾಟೀಲ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ಪ್ರಶಸ್ತಿಗೆ ಆಯ್ಕಯಾದ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರೋಣ ತಾಲ್ಲೂಕ ಶಿಕ್ಷಕರ ಸಂಘದ ಅದ್ಯಕ್ಷರಾದ ವಿ.ಎ.ಹಾದಿಮನಿ, ವಿ.ಬಿ. ಸೋಮನಕಟ್ಟೆಮಠ, ತಾಲ್ಲೂಕ ಪಂಚಾಯಿತಿ ಅದ್ಯಕ್ಷೆ ಪ್ರೇಮವ್ವ ನಾಯಕ, ಇಂದಿರಾ ತೇಲಿ, ಗೀತಾ ಕೊಪ್ಪದ,ನೌಕರರ ಸಂಘದ ಸಂಘದ ಅದ್ಯಕ್ಷ ಶಿವಪುತ್ರಪ್ಪ ದೂಡ್ಡಮನಿ, ಗಾಯಿತ್ರಿ ನಾಗನೂರ, ಪರಶುರಾಮ ಅಳಗವಾಡಿ, ದಶರಥ ಗಾಣಿಗೇರ, ಎಸ್.ಎಪ್.ಚೇಗರಡ್ಡಿ, ಸೇರಿದಂತೆ ಅನೇಕರು ಹಾಜರಿದ್ದರು. ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಐ.ಅಸುಂಡಿ ಸ್ವಾಗತಿಸಿ, ಶಿಕ್ಷಕರಾದ ಎಸ್.ಬಿ.ಗವಿ ಮತ್ತು ಚಕ್ರಸಾಣಿ ನಿರೂಪಿಸಿ ವಂದಿಸಿದರು.

 

► Follow us on –  Facebook / Twitter  / Google+

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin