ಚೌಡೇಶ್ವರಿ ದೇವಿ ಉತ್ಸವಕ್ಕೆ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

18

ಹೂವಿನಹಡಗಲಿ, ಸೆ.28- ಶ್ರೀ ಚೌಡೇಶ್ವರಿ ದೇವಿ ಉತ್ಸವದ ಹಿನ್ನೆಲೆಯಲ್ಲಿ ಗವಿಸಿದ್ದೇಶ್ವರ ಮಠದ ಆವರಣದಲ್ಲಿ ಪ್ರತಿಷ್ಠಾಪಿಸಲಾಗುವ ಮಹಾಮಂಟಪಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಲಾಯಿತು. ಗವಿಸಿದ್ದೇಶ್ವರ ಮಠದ ಡಾ. ಹಿರಿಶಾಂತವೀರ ಮಹಾಸ್ವಾಮಿಗಳು ಧ್ವಜಾರೋಹಣ ನೆರವೇರಿಸಿದರು. ಅ.1ರಿಂದ 12ರವರೆಗೆ ವಿವಿಧ ಕಾರ್ಯಕ್ರಮ ಗಳು ಜರುಗಲಿವೆ. ಅ. 1ರಂದು ಮಹಾಮಂಟಪದಲ್ಲಿ ದೇವಿಯ ಮೂರ್ತಿ ಯನ್ನು ಪ್ರತಿಷ್ಠಾಪಿಸಲಾಗುವುದು. ಕಾರ್ಯಕ್ರಮದಲ್ಲಿ ಲಿಂಗನಾಯಕನಹಳ್ಳಿ ಜಂಗಮ ಕ್ಷೇತ್ರದ ಶ್ರೀ ಚನ್ನವೀರ ಶಿವಯೋಗಿಗಳು, ನೀಲಗುಂದದ ಗುಡ್ಡದ ವಿರಕ್ತಮಠದ ಶ್ರೀ ಚನ್ನಬಸವ ಮಹಾಸ್ವಾಮಿಗಳು, ಹಿರೇಮಲ್ಲನಕೆರೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮಿಗಳು, ಮೈನಹಳ್ಳಿಯ ಶ್ರೀ ಸಿದ್ದೇಶ್ವರ ಸ್ವಾಮಿಗಳು, ಇಟ್ಟಿಗಿಯ ಶ್ರೀ ಗುರುಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು, ನಂದಿಪುರದ ಶ್ರೀ ಮಹೇಶ್ವರ ಸ್ವಾಮಿಗಳು ಭಾಗವಹಿಸಲಿದ್ದಾರೆ.

 

ನಂತರ ಶ್ರೀ ದೇವಿಗೆ ಮತ್ತು ಮುತ್ತೈದೆಯವರಿಗೆ ಹುಡಿತುಂಬುವ ಕಾರ್ಯಕ್ರಮ ಹಾಗೂ ಮಹಾತಾಯಿಗೆ ಮಹಾರುದ್ರಾಭಿಷೇಕ ಜರುಗಲಿದೆ ಎಂದು ಟ್ರಸ್ಟನ ಪ್ರಧಾನ ಕಾರ್ಯದರ್ಶಿ ಐ.ಎಸ್. ಪ್ರಕಾಶ್ ತಿಳಿಸಿದರು. ನಿವೃತ್ತ ಶಿಕ್ಷಣಾಧಿಕಾರಿ ಹೆಚ್.ಎಂ. ಬೆಟ್ಟಯ್ಯ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಅಧ್ಯಕ್ಷರಾದ ಪಿ.ವೀರಪ್ಪ, ಉಪಾಧ್ಯಕ್ಷ ಟಿ.ಎಸ್. ನಾಗರಾಜ್, ಖಜಾಂಚಿಯಾದ ಟಿ.ಎಂ.ವೀರಯ್ಯ, ಸಮಿತಿಯ ಸದಸ್ಯರಾದ ಶಂಭುನಾಥ, ಕೊಟ್ರೇಶ್, ನಿಂಗಪ್ಪ, ನಾಗರಾಜ್, ವೀರಣ್ಣ, ಮಲ್ಲಿಕಾರ್ಜುನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin